26.6 C
Bengaluru
Monday, June 17, 2024

PSI ಹುದ್ದೆಗೆ ಮರು ಪರೀಕ್ಷೆ ನಡೆಸಲು ದಿನಾಂಕ ಪ್ರಕಟ

ಬೆಂಗಳೂರು: ಡಿ. 23ರಂದು PSI ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. 545 PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರಿಂದ ಈ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಬೇಕೆಂದು ಹೈಕೋರ್ಟ್ ನ.10ರಂದು ಸೂಚಿಸಿತ್ತು. ಇದರ ಬೆನ್ನಲ್ಲೇ ಪರೀಕ್ಷೆ ನಡೆಸಲು ಸರ್ಕಾರ, KSP ಬದಲಾಗಿ KEAಗೆ ವಹಿಸಿತ್ತು. ಹಾಗಾಗಿ KEAಯು, ಇಂದು ತನ್ನ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. ಮರುಪರೀಕ್ಷೆ ಬೇಡವೆಂದು ಈ ಹಿಂದೆ ಹಲವರು ಸರ್ಕಾರಕ್ಕೆ ಪತ್ರ ಬರೆದಿದ್ದರು.ಪೋಲಿಸ್ ಇಲಾಖೆ ಈ ಹಿಂದೆ ನಡೆಸಿದ್ದ ಪರೀಕ್ಷೆಗೆ ಅರ್ಹತೆ ಪಡೆದವರು ಮರು ಪರೀಕ್ಷೆಗೂ ಅರ್ಹರು ಎಂದು ಕೆಇಎ ಕಾರ್ಯನಿರ್ವಾಹ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ

Related News

spot_img

Revenue Alerts

spot_img

News

spot_img