21.4 C
Bengaluru
Saturday, July 27, 2024

ಚಂದ್ರಯಾನ-3: ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲಿರುವ ಲ್ಯಾಂಡರ್

#chadrayana3 #Isro #Shreeharikota #Lander

ದೆಹಲಿ: ಝಾಬಿಲಿ ಸಂಶೋಧನೆಗಾಗಿ ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-3 ಸೋಮವಾರಕ್ಕೆ ಒಂದು ತಿಂಗಳು ಪೂರೈಸಿದೆ,ಚಂದ್ರಯಾನ-3 ನೌಕೆಯು ಚಂದ್ರನಿಂದ ಕೇವಲ 177 ಕಿಲೋ ಮೀಟರ್ ದೂರದಲ್ಲಿ ಸುತ್ತುತ್ತಿದೆ ಎಂದು ಇಸ್ರೋ ಹೇಳಿದೆ.ಚಂದ್ರನ ಅಂಗಳದಲ್ಲಿ ಸುಲಭವಾಗಿ ಇಳಿಯುವ ಗುರಿಯತ್ತ ಚಂದ್ರಯಾನ ನೌಕೆ ದಿಟ್ಟ ಹೆಜ್ಜೆ ಇಟ್ಟಿದೆ.ಇಸ್ರೋ ವಿಜ್ಞಾನಿಗಳು ಚಂದ್ರನ ಕಕ್ಷೆಯಲ್ಲಿರುವ ಸರ್ಕ್ಯೂಲರಿ ಸ್ಟೇಷನ್​ ಫೇಸ್​​ಗೆ ತಲುಪಿಸುವ ಕಾರ್ಯ ಯಶಸ್ವಿಯಾಗಿದೆ. ಆಗಸ್ಟ್ 16 ರಂದು ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ .ಜುಲೈ 14, 2023 ರಂದು ಆಂಧ್ರದ ಶ್ರೀಹರಿಕೋಟಾದಿಂದ ಚಂದ್ರಯಾನ-3 ನೌಕೆಯನ್ನು ಉಡಾಯಿಸಿದೆ. ಆಗಸ್ಟ್​ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ನೌಕೆಯ ಲ್ಯಾಂಡರ್ ವಿಕ್ರಂ ಸಾಫ್ಟ್​ ಲ್ಯಾಂಡಿಂಗ್ ಆಗಲಿದೆ. ಒಂದು ವೇಳೆ ಸಾಫ್ಟ್​ ಲ್ಯಾಂಡಿಂಗ್ ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗೃಹ ಇಳಿಸಿದ ಏಕೈಕ ರಾಷ್ಟ್ರ ಭಾರತ ಆಗಲಿದೆ.

Related News

spot_img

Revenue Alerts

spot_img

News

spot_img