28.3 C
Bengaluru
Thursday, October 10, 2024

2023-24ರ ಮಾರ್ಕೆಟಿಂಗ್ ಸೀಸನ್ ಗಾಗಿ ಮುಂಗಾರು(ಖಾರಿಫ್) ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ (ಎಂ.ಎಸ್.ಪಿ) ಪಟ್ಟಿ ಅನುಮೋದಿಸಿದ ಕೇಂದ್ರ ಸಚಿವ ಸಂಪುಟ!

ನವದೆಹಲಿ ಜೂನ್ 16: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿ.ಸಿ.ಇ.ಎ.) 2023-24 ರ ಮಾರ್ಕೆಟಿಂಗ್ ಸೀಸನ್ ಗಾಗಿ ಎಲ್ಲಾ ಕಡ್ಡಾಯ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂ.ಎಸ್.ಪಿ) ಹೆಚ್ಚಿಸಲು ಅನುಮೋದಿಸಿದೆ.

ರೈತರಿಗೆ(ಬೆಳೆಗಾರರಿಗೆ) ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಕೆಳಗಿನ ಕೋಷ್ಟಕದಲ್ಲಿ ಒದಗಿಸಿದಂತೆ ಬೆಳೆ ವೈವಿಧ್ಯತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 2023-24 ರ ಮಾರುಕಟ್ಟೆಗಾಗಿ ಮುಂಗಾರು ಬೆಳೆಗಳ ಎಂ.ಎಸ್.ಪಿ. ಅನ್ನು ಹೆಚ್ಚಿಸಿದೆ:

ಖಾರಿಫ್ ಮಾರ್ಕೆಟಿಂಗ್ ಸೀಸನ್ (ಕೆ.ಎಂ.ಸಿ) 2023-24 ಕ್ಕೆ ಕನಿಷ್ಠ ಬೆಂಬಲ ಬೆಲೆಗಳು
ಬೆಳೆಗಳು
1.ಎಂ.ಎಸ್.ಪಿ 2014-15
2.ಎಂ.ಎಸ್.ಪಿ 2022-23
3.ಎಂ.ಎಸ್.ಪಿ 2023-24
4.ಕೆ.ಎಂ.ಸಿ 2023-24 ಆಧಾರಿತ ವೆಚ್ಚ*
5.2022-23ರ ಎಂ.ಎಸ್.ಪಿ. ಗಿಂತ ಹೆಚ್ಚಳ
6.ಸೆಂಟ್ ಆಧಾರದಲ್ಲಿ ವೆಚ್ಚದ ಮೇಲಿನ ಮಾರ್ಜಿನ್ ಮೊತ್ತ

ಭತ್ತ -ಸಾಮಾನ್ಯ
1.1360
2.2040
3.2183
4.1455
5.143
6.50

ಭತ್ತ-ದರ್ಜೆ ಎ ^
1400
2060
2203

143

ಜೋಳ-ಹೈಬ್ರಿಡ್
1530
2970
3180
2120
210
50

ಜೋಳ- ಮಾಲ್ದಂಡಿ^
1550
2990
3225

235

ಸಜ್ಜೆ
1250
2350
2500
1371
150
82

ರಾಗಿ
1550
3578
3846
2564
268
50

ಮೆಕ್ಕೆಜೋಳ
1310
1962
2090
1394
128
50

ತೊಗರಿ ಬೇಳೆ
4350
6600
7000
4444
400
58

ಹೆಸರು ಬೇಳೆ
4600
7755
8558
5705
803
50

ಉದ್ದು
4350
6600
6950
4592
350
51

ನೆಲಗಡಲೆ
4000
5850
6377
4251
527
50

ಸೂರ್ಯಕಾಂತಿ ಬೀಜ
3750
6400
6760
4505
360
50

ಸೋಯಾಬೀನ್ (ಹಳದಿ)
2560
4300
4600
3029
300
52

ಸಾಸಿವೆ
4600
7830
8635
5755
805
50

ಕಪ್ಪು ಎಳ್ಳು
3600
7287
7734
5156
447
50

ಹತ್ತಿ (ಮಧ್ಯಮ ಸ್ಟೇಪಲ್)
3750
6080
6620
4411
540
50

ಹತ್ತಿ (ಉದ್ದನೆಯ ಸ್ಟೇಪಲ್) ^
4050
6380
7020

640

* ಮಾನವ ಕೂಲಿ ಕಾರ್ಮಿಕರು, ಎತ್ತಿನ-ಗೂಳಿ ಗಾಡಿ ಕಾರ್ಮಿಕರು/ಯಂತ್ರ ಕಾರ್ಮಿಕರು, ಭೂಮಿಯಲ್ಲಿ ಗುತ್ತಿಗೆಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕ, ಕೃಷಿ ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ ಗಳ ಕಾರ್ಯಾಚರಣೆಗೆ ಡೀಸೆಲ್/ ವಿದ್ಯುತ್ ಇತ್ಯಾದಿ., ವಿವಿಧ ವೆಚ್ಚಗಳು ಮತ್ತು ಕುಟುಂಬದ ದುಡಿಮೆಯ ಲೆಕ್ಕಹಾಕಿದ ಮೌಲ್ಯ, ಒಳಹರಿವಿನ ವೆಚ್ಚಗಳಂತಹ ಎಲ್ಲಾ ಪಾವತಿಸಿದ ಕೃಷಿ ಪೂರಕ ವೆಚ್ಚಗಳನ್ನು ಒಳಗೊಂಡಿರುವ ಒಟ್ಟಾರೆ ವೆಚ್ಚವನ್ನು ಉಲ್ಲೇಖಿಸುತ್ತದೆ.
^ ಭತ್ತ (ಗ್ರೇಡ್ ಎ), ಜೋಳ(ಮಾಲ್ದಂಡಿ) ಮತ್ತು ಹತ್ತಿ (ಉದ್ದನೆಯ ಸ್ಟೇಪಲ್) ಗಾಗಿ ವೆಚ್ಚದ ಡೇಟಾವನ್ನು ಪ್ರತ್ಯೇಕವಾಗಿ ಸಂಕಲಿಸಲಾಗಿಲ್ಲ.

2023-24 ರ ಮಾರ್ಕೆಟಿಂಗ್ ಸೀಸನ್ ಗಾಗಿ ಮುಂಗಾರು(ಖಾರಿಫ್)ಬೆಳೆಗಳಿಗೆ ನೀಡುವ ಎಮ್.ಎಸ್.ಪಿ ಹೆಚ್ಚಳವು ಕೇಂದ್ರ ಬಜೆಟ್ 2018-19 ರ ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಎಂ.ಎಸ್.ಪಿ.ಯನ್ನು ನಿಗದಿಪಡಿಸುವ ತನ್ನ ಘೋಷಣೆಗೆ ಅನುಗುಣವಾಗಿದೆ, ಹಾಗೂ ಇದು ರೈತರಿಗೆ ಸಮಂಜಸ ಹಾಗೂ ನ್ಯಾಯಯುತ ಸಂಭಾವನೆಯ ಗುರಿಯನ್ನು ಹೊಂದಿದೆ. ರೈತರಿಗೆ ಅವರ ಬೆಳೆಗಳ ಉತ್ಪಾದನಾ ವೆಚ್ಚದ ಮೇಲೆ ನಿರೀಕ್ಷಿತ ಮಾರ್ಜಿನ್ ಗಳು ಸಜ್ಜೆ (82%) ನಂತರ ತೊಗರಿಬೇಳೆ (58%), ಸೋಯಾಬೀನ್ (52%) ಮತ್ತು ಉದ್ದು (51%) ಸಂದರ್ಭದಲ್ಲಿ ಅತ್ಯಧಿಕ ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ಅವರ ಉತ್ಪಾದನಾ ವೆಚ್ಚದ ಮೇಲೆ ರೈತರಿಗೆ ಮಾರ್ಜಿನ್ ಗಳನ್ನು ಕನಿಷ್ಠ 50% ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳು/ಸಿರಿಧಾನ್ಯ(ಶ್ರೀಅನ್ನ)ಗಳಂತಹ ಧಾನ್ಯಗಳನ್ನು ಹೊರತುಪಡಿಸಿ, ಇತರ ಬೆಳೆಗಳಿಗೆ ಹೆಚ್ಚಿನ ಎಮ್.ಎಸ್.ಪಿ.ಯನ್ನು ನೀಡುವ ಮೂಲಕ ಸರ್ಕಾರವು ಇತರ ಬೆಳೆಗಳ ಕೃಷಿಯನ್ನು ಉತ್ತೇಜಿಸುತ್ತಿದೆ. ಹೆಚ್ಚುವರಿಯಾಗಿ, ರೈತರು ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸುವುದನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ನಂತಹ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳನ್ನು ಕೂಡಾ ಸರ್ಕಾರವು ಪ್ರಾರಂಭಿಸಿದೆ.

2022-23ರ ಮೂರನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು ದಾಖಲೆಯ 330.5 ದಶಲಕ್ಷ ಟನ್ ಗಳನ್ನು ಮೀರಿದೆ ಎಂದು ಅಂದಾಜಿಸಲಾಗಿದೆ, ಹಿಂದಿನ 2021-22 ವರ್ಷಕ್ಕೆ ಹೋಲಿಸಿದರೆ ಇದು 14.9 ದಶಲಕ್ಷ ಟನ್ ಗಳಷ್ಟು ಹೆಚ್ಚಾಗಿದೆ. ಇದು ಕಳೆದ 5 ವರ್ಷಗಳಲ್ಲೇ ಗರಿಷ್ಠ ಆಹಾರ ಧಾನ್ಯ ಉತ್ಪಾದನೆಯ ಏರಿಕೆಯಾಗಿದೆ.

Related News

spot_img

Revenue Alerts

spot_img

News

spot_img