22.1 C
Bengaluru
Monday, July 15, 2024

ಹೃತಿಕ್ ರೋಷನ್ ಅವರ ಸುಂದರವಾದ ಮನೆ ಹೇಗಿದೆ ನೋಡಿ..

ಬೆಂಗಳೂರು, ಜ. 30 : ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರ ಮನೆ ಮುಂಬೈನ ಜುಹುದಲ್ಲಿದ್ದು, ಸ್ವರ್ಗದಂತೆ ಮನೆ ಇದೆ. ಸಮದ್ರದ ದಡದಲ್ಲಿ ಹೃತಿಕ್ ರೋಷನ್ ಅವರ ಮನೆ ಇದೆ. ಈ ಮನೆಯ ಲಿವಿಂಗ್ ಏರಿಯಾದಲ್ಲಿ ಚಾಕಲೇಟ್ ಮಿಷಿನ್ ಇದ್ದು, ಮನೆಯ ಮೂಲೆ ಮೂಲೆಗಳು ಕೂಡ ಅಲಂಕೃತಗಿದೆ. ಮಕ್ಕಳಿಗಾಗಿ ಸಮುದ್ರದ ದಡದಲ್ಲೇ ಮನೆ ಇದ್ದು, ಬಾಲಕನಿಯಿಂದ ಮನೆ ಸುಂದರವಾಗಿ ಕಾಣುತ್ತದೆ. ಹೃತಿಕ್ ರೋಷನ್ ಅವರು ಈ ಮನೆಯನ್ನು 2020 ರಲ್ಲಿ ಖರೀದಿಸಿದರು. ಅಪಾರ್ಟ್ ಮೆಂಟ್ ನ 14, 15 ಮತ್ತು 16 ನೇ ಮಹಡಿಯಲ್ಲಿ ಹೃತಿಕ್‌ ರೋಷನ್‌ ಅವರು ವಾಸವಿದ್ದಾರೆ.

ಈ ಮನೆ ಅರೇಬಿಯನ್‌ ಸಮುದ್ರದ ದಡದಲ್ಲಿದ್ದು, ಮನೆಯಿಂದ ಸಾಗರದ ನೋಟ ಮಹದಾನಂದವನ್ನು ನೀಡುತ್ತದೆ. ಹೆಚ್ಚಿನದಾಗಿ ಸೆಲಬ್ರಿಟಿಗಳ ಮನೆಯ ಗೋಡೆಗಳ ತುಂಬಾ ತ್ತಾರಗಳೇ ಇರುತ್ತವೆ. ಫೋಟೋ, ಪೇಂಟಿಂಗ್‌ ಗಳನ್ನು ಇರಿಸಿರುತ್ತಾರೆ. ಆದರೆ, ಹೃತಿಕ್‌ ರೋಷನ್‌ ಅವರ ಮನೆಯಲ್ಲಿ ವಿಶೇಷವಾದ ವೈಬ್‌ ಇದೆ. ಹೃತಿಕ್‌ ರೋಷನ್‌ ಅವರು ಈ ಮನೆಯಲ್ಲಿ ಇಬ್ಬರು ಮಕ್ಕಳಾದ ಹೃದಯಾನ್ ಮತ್ತು ಹ್ರೇಹಾನ್ ಅವರೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆಗೆ 2020 ರಲ್ಲಿ ಈ ಮನೆಯನ್ನು ಖರೀದಿಸಿದರು. ಈಗ ಇದು ಹೆಚ್ಚಾಗಿರಬಹುದು ಕೂಡ.

ಹೃತಿಕ್‌ ರೋಷನ್‌ ಅವರ ಈ ಮನೆಯಲ್ಲಿ ಗ್ರ್ಯಾಂಡ್‌ ಪಿಯಾನೋ ಇದೆ. ಇದನ್ನು ಆಗಾಗ ಹೃತಿಕ್‌ ರೋಷನ್‌ ನುಡಿಸುತ್ತಿರುತ್ತಾರೆ. ಇದರ ವೀಎಡಿಯೋಗಳಲ್ಲು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಈ ಮನೆಯ ನೆಲಹಾಸು ಮರದಿಂದ ಕೂಡಿದೆ. ಈ ಮನೆಯಲ್ಲಿ ದೊಡ್ಡ ಚೆಸ್‌ ಟೇಬಲ್‌ ಇದ್ದು, ಆಗಾಗ ಮಕ್ಕಳ ಜೊತೆಗೆ ಚೆಸ್‌ ಆಡುತ್ತಿರುತ್ತಾರೆ. ಸಮುದ್ರ ದಡದಲ್ಲಿ ಮನೆಳು ಇರುವುದರಿಂದ ವಿಶ್ರಾಂತಿ ಪಡೆಯಲು ಸೂಕ್ತವಾಗಿದೆ. ಹೃತಿಕ್‌ ಅವರ ಮನೆಯ ಒಳಾಂಗಣದಲ್ಲಿ ಲಂಡನ್‌ ನ ಕೆಂಪು ಫೋನ್‌ ಭೂತ್‌ ಮಾದರಿಯ ಪುಸ್ತಕದ ಕಪಾಟು ಇದೆ. ಇದರ ಜೊತೆಗೆ ಮಂಕಿ ಬಾರ್‌ ಕೂಡ ಮನೆಯಲ್ಲಿ ಇದೆ. ಇನ್ನು ಈ ಮನೆಯಲ್ಲಿ ಹೃತಿಕ್‌ ರೋಷನ್‌ ಅವರ ಇಬ್ಬರು ಮಕ್ಕಳು ಹಾಗೂ ಪ್ರೀತಿಯ ನಾಯಿ ಕೂಡ ವಾಸವಿದೆ.

ಹೃತಿಕ್‌ ರೋಷನ್‌ ಅವರ ಮನೆಯ ಬಾಲ್ಕನಿಯಲ್ಲಿ ಕುಳಿತು ಸಮುದ್ರವನ್ನು ನೋಡುತ್ತಾ, ತಿಂಡಿ, ಕಾಫಿ, ಟೀ ಅನ್ನು ಎಂಜಾಯ್‌ ಮಾಡಬಹುದು. ಪ್ರಕೃತಿಯ ಸೌಂದರ್ಯವನ್ನು ಸವಿಯಲು ಸೂಕ್ತವಾಗಿದೆ. ಈ ಮನೆಯನ್ನು ಹೃತಿಕ್‌ ರೋಷನ್‌ ಕೋವಿಡ್‌ ಸಂದರ್ಭದಲ್ಲಿ ಖರಿದಿಸಿದರು. ಡ್ಯುಪ್ಲೆಕ್ಸ್‌ ಮನೆಯಾಗಿದ್ದು, ಇದಕ್ಕೆ ಹೃತಿಕ್‌ ರೋಷನ್‌ ಅವರು ಬರೋಬ್ಬರಿ 97.5 ಕೋಟಿ ಹಣವನ್ನು ನೀಡಿ ಖರೀದಿಸಿದ್ದಾರೆ. ಇನ್ನು ಈ ಮನೆಯು 27534 ಚದರ ಅಡಿ ಮತ್ತು 11165 ಚದರ ಅಡಿಯ ಒಂದೇ ಅಂತಸ್ತಿನ ಮನೆ ಇದೆ. ಸದ್ಯ ಈ ಮನೆಯಲ್ಲಿ ಹೃತಿಕ್‌ ರೋಷನ್‌ ಹಾಗೂ ಅವರ ಮಕ್ಕಳು ವಾಸವಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಬಿಡುವು ಸಿಕ್ಕಾಗ ಹೃತಿಕ್‌ ಅವರು ತಮ್ಮ ಮಕ್ಕಳೋಂದಿಗೆ ಆಡುವುದನ್ನು ವೀಡಿಯೋ ಮಾಡಿ ಪೋಸ್ಟ್‌ ಮಾಡುತ್ತಿರುತ್ತಾರೆ.

Related News

spot_img

Revenue Alerts

spot_img

News

spot_img