21 C
Bengaluru
Friday, October 25, 2024

ಮನೆ ಮಾಲೀಕರು ಕಿರಿಕಿರಿ ಮಾಡುತ್ತಿದ್ದಾರಾ : ಇದ್ದಕ್ಕಿದ್ದ ಹಾಗೆ ಖಾಲಿ ಮಾಡಲು ಹೇಳಿದ್ದಾರಾ : ಹಾಗಾದರೆ ತಪ್ಪದೇ ಈ ಸುದ್ದಿ ನೋಡಿ..

ಬೆಂಗಳೂರು, ಏ. 07 : ಈಗ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಸಿಗುವುದೇ ಕಷ್ಟವಾಗಿದೆ. ಹಾಗಿರುವಾಗ ಈಗಾಗಲೇ ಬಾಡಿಗೆ ಮನೆಯಲ್ಲಿರುವವರಿಗೂ ಹೊಸ ತಲೆ ನೋವು ಶುರುವಾಗಿದೆ. ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಮನೆ ಖಾಲಿ ಮಾಡಿಕೊಂಡು ಹೋದರು ಎಂದು ಕೆಲ ಮಾಲೀಕರು ಕಡಿಮೆ ಬಾಡಿಗೆಗೆ ಮನೆಯನ್ನು ನೀಡಿದ್ದಾರೆ. ಆದರೆ, ಈಗ ಬೆಂಗಳೂರಿಗೆ ಎಲ್ಲರೂ ಮರಳುತ್ತಿದ್ದು, ನಗರದಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಎರಡು ವರ್ಷಗಳ ಕಾಲ ಬಾಡಿಗೆ ಇಲ್ಲದೇ, ನಷ್ಟ ಅನುಭವಿಸಿದ್ದ ಮಾಲೀಕರು ಈಗ ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಡುತ್ತಿದ್ದಾರೆ.

ಸಿಲಿಕಾನ್ ನಗರಿಯಲ್ಲಿ ಕಳೆದ ಒಂದು ವರ್ಷದಿಂದ ಬಾಡಿಗೆ ಮನೆಯ ಬೆಲೆಗಳು ಡಬಲ್ ಆಗಿವೆ. ಹೀಗಾಗಿ ಬಾಡಿಗೆದಾರರು ಒದ್ದಾಡುಗತ್ತಿದ್ದಾರೆ. ಇನ್ನು ಕೆಲ ಮಾಲೀಕರು ಬೇರೆಯವರಿಗೆ ಬಾಡಿಗೆ ನೀಡಿ ಹೆಚ್ಚಿನ ಹಣವನ್ನು ಪಡೆಯುವ ಸಲುವಾಗಿ ಹಳೆಯ ಬಾಡಿಗೆದಾರರನ್ನು ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿರುವ ಪ್ರಕರಣಗಳು ಕೂಡ ಕೇಳಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಬಾಡಿಗೆದಾರರು ತಮ್ಮ ಹಕ್ಕಿನ ಬಗ್ಗೆ ಮಾಹಿತಿ ತಿಳಿದಿರುವುದು ಬಹಳ ಮುಖ್ಯ. ಅಷ್ಟೇ ಅಲ್ಲ ಕಾನೂನಿನಲ್ಲಿ ಬಾಡಿಗೆದಾರರ ಕಾಯ್ದೆ ಏನು ಹೇಳುತ್ತದೆ ಎಂಬ ಬಗ್ಗೆಯೂ ತಿಳಿದುಕೊಂಡಿದ್ದರೆ ಒಳ್ಳೆಯದು.

ಬಾಡಿಗೆ ಮನೆಯನ್ನು ನೀಡುವ ಮಾಲೀಕರಿಗೆ ಹೇಗೆ ತಮ್ಮ ಮನೆಯ ಮೇಲೆ ಹಕ್ಕುಗಳಿರುತ್ತವೆಯೋ ಹಾಗೆಯೇ ಬಾಡಿಗೆದಾರರಿಗೆ ಕೂಡ ಮೂಲಭೂತ ಹಕ್ಕುಗಳು ಇರುತ್ತವೆ. ಅದು ಏನೆಂದರೆ, ಬಾಡಿಗೆ ನಿಯಂತ್ರಣ ಕಾಯಿದೆ 1948 ರ ಪ್ರಕಾರ ಬಾಡಿಗೆದಾರರು ಮತ್ತು ಭೂಮಾಲೀಕರು ಲಿಖಿತ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಬೇಕು. ಈ ಲಿಖಿತ ಒಪ್ಪಂದ ಮಾನ್ಯವಾಗಿದ್ದರೆ, ಸಮಸ್ಯೆ ಆದಾಗ ರಕ್ಷಿಸಲು ಅವಕಾಶವಿರುತ್ತದೆ. ಒಂಪ್ಪಂದದ ಸಮಯ ಮುಗಿಯುತ್ತಿದ್ದಂತೆಯೇ ಪುನಃ ಮಾಡಿಸಬೇಕು. ಇಲ್ಲದೇ ಹೋದಲ್ಲಿ ಸಮಸ್ಯೆ ಆಗುತ್ತದೆ.

ಬಾಡಿಗೆದಾರರ ಮನೆಗೆ ಮಾಲೀಕರು ಯಾವಾಗ ಎಂದರೆ, ಆಗ ಪ್ರವೇಶಿಸುವಂತಿಲ್ಲ. ತುರ್ತು ಪರೀಸ್ಥಿತಿಯಲ್ಲಿ ಹೊರತು ಪಡಿಸಿ. ಇನ್ನು ಬಅಡಿಗೆ ಮನೆಯಲ್ಲಿ ರಿಪೇರಿಗಳಿದ್ದರೆ, ಇದಕ್ಕೆ ಖರ್ಚನ್ನು ಮನೆ ಮಾಲೀಕ ಕೂಡ ಭರಿಸಬೇಕು. ನೀರು, ವಿದ್ಯುತ್ ಅನ್ನು ಹೊರತು ಪಡಿಸಿ. ಇನ್ನು ನೆ ಮಾಲೀಕರು ಬಾಡಿಗೆಯನ್ನು ಹೆಚ್ಚಿಸುವುದಾದರೆ, ಮೂರು ತಿಂಗಳ ಮುನ್ನವೇ ಮಾಹಿತಿ ನೀಡಬೇಕು. ಬಾಡಿಗೆ ಮನೆಯಿಂದಲೂ ಸುಖಾ ಸುಮ್ಮನೆ ಹೊರ ಹಾಕುವಂತಿಲ್ಲ. ಒಂಪ್ಪದ ಸಮಯ ಮುಗಿದಿದ್ದರೆ ಮನೆಯಿಂ ದ ಹೊರಗೆ ಕಳಿಸಬಹುದು.

ಇಲ್ಲದೇ ಹೋದಲ್ಲಿ ಬಾಡಿಗೆದಾರರಿಗೆ ಮೂರು ತಿಂಗಳ ಮುನ್ನವೇ ವಿಚಾರವನ್ನು ತಿಳಿಸಿ ಅರ್ಥ ಮಾಡಿಸಬೇಕು. ಇನ್ನು ಬಾಡಿಗೆದಾರ ಮನೆಯನ್ನು ಖಾಲಿ ಮಾಡಿದ ಒಂದು ತಿಂಗಳ ಒಳಗಾಗಿ ಮುಂಗಡ ಹಣವನ್ನು ಹಿಂದಿರುಗಿಸಬೇಕು. ಇಲ್ಲದೇ ಹೋದಲ್ಲಿ ಬಾಡಿಗೆದಾರರು ಕಾನೂನು ಹೋರಾಟವನ್ನು ಮಾಡಬಹುದಾಗಿದೆ.

Related News

spot_img

Revenue Alerts

spot_img

News

spot_img