20 C
Bengaluru
Friday, June 20, 2025

ಬೆಂಗಳೂರು- ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AE

ಬೆಂಗಳೂರು : ಬೆಂಗಳೂರಿನ HSR ಲೇಔಟ್​ನ ಬೆಸ್ಕಾಂ AE ಸಂತೋಷ್‌ ಮತ್ತು ಅಧಿಕಾರಿಯ ಪರವಾಗಿ ಲಂಚದ ಹಣ ಪಡೆದುಕೊಂಡ ಮಧ್ಯವರ್ತಿ ಮಲ್ಲಿಕಾರ್ಜುನ್‌ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. HSR ಲೇಔಟ್​ನ ಎಸ್​-20 ಉಪವಿಭಾಗದಲ್ಲಿ ಟ್ರ್ಯಾಪ್​​​​ ಮಾಡಲಾಗಿದೆ.ಸುಜಿತ್‌ ಕುಮಾರ್‌ ಮತ್ತು ಇತರರು ಎಚ್‌ಎಸ್‌ಆರ್‌ ಲೇಔಟ್​ ನಲ್ಲಿ ಹೊಸ ಮನೆ ನಿರ್ಮಿಸಿದ್ದಾರೆ. ಮನೆಗೆ ವಿದ್ಯುತ್‌ ಸಂಪರ್ಕ ಪಡೆಯಲು ಗುತ್ತಿಗೆದಾರ ಪುಟ್ಟೇನಹಳ್ಳಿಯ ವೇಣುಗೋಪಾಲ್‌ ಎಸ್‌. ಎಂಬುವವರ ಮೂಲಕ ಅರ್ಜಿ ಸಲ್ಲಿಸಿದ್ದರು.ವಿದ್ಯುತ್‌ ಸಂಪರ್ಕಕ್ಕೆ ಮಂಜೂರಾತಿ ನೀಡಲು ₹ 2.30 ಲಕ್ಷ ಲಂಚ ನೀಡುವಂತೆ ಆನಂದ್‌ ಬೇಡಿಕೆ ಇಟ್ಟಿದ್ದರು.ಮತ್ತೆ ಗುತ್ತಿಗೆದಾರರನ್ನು ಭೇಟಿಮಾಡಿ ಚೌಕಾಸಿ(bargaining) ನಡೆಸಿದ್ದರು.₹1.5 ಲಕ್ಷ ಲಂಚ ನೀಡಿದರೆ ಅನುಮೋದನೆ ನೀಡುವುದಾಗಿ ಆರೋಪಿ ತಿಳಿಸಿದ್ದರು.

ಗುತ್ತಿಗೆದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ವಿಭಾಗಕ್ಕೆ ದೂರು ನೀಡಿದ್ದರು.ಮಂಗಳವಾರ ಬೆಸ್ಕಾಂ ಕಚೇರಿಯಲ್ಲಿ ಅಧಿಕಾರಿಯ ಸೂಚನೆಯಂತೆ ದೂರುದಾರರು ಭೇಟಿಮಾಡಿದ್ದರು.ಮಧ್ಯವರ್ತಿ ಮಲ್ಲಿಕಾರ್ಜುನ್‌ಗೆ ಲಂಚದ ಹಣವನ್ನು ಕೊಡುವಂತೆ ಆನಂದ್ ಸೂಚಿಸಿದ್ದರು,ಅದೇ ಪ್ರಕಾರವಾಗಿ ದೂರುದಾರರು ಹಣವನ್ನು ನೀಡಿದರು.ಅದೇ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿಮಾಡಿ ಇಬ್ಬರನ್ನೂ ಬಂಧಿಸಿದರು,ವಿದ್ಯುತ್‌ ಸಂಪರ್ಕಕ್ಕೆ ಮಂಜೂರಾತಿ ಸಲ್ಲಿಸಿದ್ದ ಅರ್ಜಿ ಹಾಗೂ ಅದಕ್ಕೆ ಸಂಬಂಧಿಸಿದ ಕಡತವನ್ನೂ ವಶಕ್ಕೆ ಪಡೆಯಲಾಗಿದೆ.ಸಂತೋಷ್ ಮತ್ತು ಮಲ್ಲಿಕಾರ್ಜುನ್ ಅವರನ್ನುಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.ವಿಚಾರಣೆ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು.ಲೋಕಾಯುಕ್ತ ಡಿವೈಎಸ್ಪಿ ಬಸವರಾಜ್, ಇನ್ಸ್​ಪೆಕ್ಟರ್ ಶ್ರೀಕಾಂತ್ ,ಬೆಂಗಳೂರು ನಗರ ಎಸ್‌ಪಿ ಕೆ.ವಿ. ಅಶೋಕ್‌ ನೇತೃತ್ವದಲ್ಲಿ ದಾಳಿ ನಡೆಸಿ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ.

Related News

spot_img

Revenue Alerts

spot_img

News

spot_img