ಬೆಂಗಳೂರು ಮಾರ್ಚ್ 20;:ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಬೆಂಗಳೂರು ವಲಯ ಕಚೇರಿಯು ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಅದರ ಅಧಿಕಾರಿಗಳಿಗೆ ಸೇರಿದ 5.21 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಜಪ್ತಿ ಮಾಡಲಾದ ಆಸ್ತಿಗಳು ಆರೋಪಿಗಳ ಒಡೆತನದ ಆರು ಸ್ಥಿರಾಸ್ತಿಗಳ ರೂಪದಲ್ಲಿವೆ.ವಿಶೇಷ ತನಿಖಾ ತಂಡ ಮತ್ತು ಕರ್ನಾಟಕ ಲೋಕಾಯುಕ್ತ, ಬೆಂಗಳೂರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ಆರಂಭಿಸಿದೆ,ಬಿ.ಪಿ.ಆನಂದ್ ಕುಮಾರ್, ಪಾಂಡುರಂಗ ಸಿಂಗ್, ಗೋಪಾಲ್ ಸಿಂಗ್ ಪಾಲುದಾರಿಕೆಯ ಎಸ್ಬಿ ಮಿನರಲ್ಸ್ ಒಡೆತನದ ದಿನೇಶ್ ಕುಮಾರ್ ಪಾಲುದಾರಿಕೆಯ ಭಾರತ್ ಮಿನರಲ್ಸ್ ಮೈನ್ಸ್ ಹಾಗೂ ಶಾಂತಲಕ್ಷ್ಮಿ ಮತ್ತು ಜೆ.ಮಿಥಿಲೇಶ್ವರ್ ಗಣಿಗೆ ಸೇರಿದ 5.21 ಕೋಟಿ ಮೌಲ್ಯದ ಒಟ್ಟು ಆರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಈ ಎರಡು ಕಂಪನಿಗಳು ಕಬ್ಬಿಣದ ಅದಿರನ್ನು ಪರವಾನಗಿ ಇಲ್ಲದೆ ಅಕ್ರಮವಾಗಿ ಬೇರೆಡೆ ಸಾಗಾಟ ನಡೆಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದವು..ಎರಡು ಕಂಪನಿಗಳು ಕಬ್ಬಿಣದ ಅದಿರನ್ನು ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದವು. ಪ್ರಕರಣ ಸಂಬಂಧ ಎಸ್ಬಿ ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್, ಸರ್ಕಾರಿ ನೌಕರರು ,ಗಣಿ ಮತ್ತು ಖನಿಜಗಳ ಅಭಿವೃದ್ಧಿ ನಿಯಂತ್ರಣ ಕಾಯ್ದೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳ ಆಧಾರದ ಮೇಲೆ ತನಿಖೆ ನಡೆಸಲಾಗುವುದು.
ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಕೇಂದ್ರ ಸಶಕ್ತ ಸಮಿತಿ ರಚಿಸಿತ್ತು. ಅದರಂತೆ ನಡೆದ ತನಿಖೆ ವೇಳೆ ನಾಲ್ಕು ಗಣಿಗಳು ಅಕ್ರಮ ನಡೆಸಿರುವುದು ಪತ್ತೆಯಾಗಿದೆ. ಸದ್ಯ ದಿನೇಶ್ ಕುಮಾರ್ ಪಾಲುದಾರಿಕೆಯ ಭಾರತ್ ಮಿನರಲ್ಸ್ ಮೈನ್ಸ್ ಹಾಗೂ ಶಾಂತಲಕ್ಷ್ಮಿ ಮತ್ತು ಜೆ.ಮಿಥಿಲೇಶ್ವರ್ ಗಣಿಗೆ ಸೇರಿದ ಒಟ್ಟು 5.21 ಕೋಟಿ ಮೌಲ್ಯದ 6 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ ,ಇಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಇನ್ನಷ್ಟು ಅಕ್ರಮದ ಜಾಡು ಹಿಡಿಯಲು ಸಿದ್ಧತೆ ನಡೆಸಿದೆ ಎನ್ನಲಾಗ್ತಿದೆ.ತನಿಖೆ ವೇಳೆ ಭಾರಿ ಮೊತ್ತದ ಅಕ್ರಮ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಈ ಸಂಗತಿ ಇಡಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಲೋಕಾಯುಕ್ತ ದಾಖಲಿಸಿಕೊಂಡ ಎಫ್‌ಐಆರ್ ಆಧರಿಸಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.