27.5 C
Bengaluru
Wednesday, November 6, 2024

ಮನೆಯಲ್ಲಿ ಕೆಲಸದವರು ಉಳಿದುಕೊಳ್ಳುವುದಾದರೆ, ಅವರಿಗೆ ಯಾವ ದಿಕ್ಕಿನಲ್ಲಿ ಕೋಣೆ ಇರಬೇಕು..?

ಬೆಂಗಳೂರು, ಏ. 14 : ಈಗ ಮನೆಯಲ್ಲಿ ಕೆಲಸ ಮಾಡುವವರು ಕೆಲವರು ನಮ್ಮ ಮನೆಯಲ್ಲೇ ಒಂದು ಸ್ಥಳವನ್ನು ಕೊಡಲಾಗುತ್ತದೆ. ಹಿಂದಿನ ಕಾಲದಲ್ಲೂ ಬೇರೆ ಊರುಗಳಿಂದ ಬಂದು ಮನೆ ಕೆಲಸ ಮಾಡುವವರಿಗಾಗಿ ಸಪರೇಟ್ ಆಗಿ ಒಂದು ರೂಮ್ ಅನ್ನು ನೀಡಲಾಗುತ್ತಿತ್ತು. ಇದೀಗ ಇದೇ ಪದ್ಧತಿ ಬೆಂಗಳೂರಿನಲ್ಲೂ ಮುಂದುವರೆದಿದೆ. ಕೆಲವರು ತಮ್ಮ ಕಾಂಪೌಂಡ್ ನಲ್ಲಿರುವ ಗ್ಯಾರೇಜ್ ಸ್ಥಳವನ್ನೇ ಮನೆ ಕೆಲಸದ ಕುಟುಂಬಕ್ಕೆಂದು ನೀಡುತ್ತಾರೆ. ಆದರೆ, ವಾಸ್ತು ಪ್ರಕಾರವಾಗಿ ಹೀಗೆ ಮನೆಯಲ್ಲೇ ಇದ್ದು ಕೆಲಸ ಮಾಡುವವರಿಗೆ ಯಾವ ದಿಕ್ಕಿನಲ್ಲಿ ಸ್ಥಳವನ್ನು ಕೊಟ್ಟರೆ ಸೂಕ್ತ.

ಕೆಲವರು ಮನೆ ಕೆಲಸದವರಿಗಾಗಿ ಕೆಲವರು ಸಪರೇಟ್ ಆಗಿ ಮನೆಯ ಕೋಣೆಯನ್ನು ಖಾಲಿ ಮಾಡಿಕೊಡುವುದಾದರೆ, ವಾಯುವ್ಯ ದಿಕ್ಕಿನಲ್ಲಿ ಕೊಟ್ಟರೆ ಬಹಳ ಒಳ್ಳೆಯದು. ಮೊದಲನೇಯದಾಗಿ ವಾಯುವ್ಯ ದಿಕ್ಕಿನಲ್ಲಿ ಮನೆ ಕೆಲಸದವರಿಗೆ ಸ್ಥಳ ನೀಡಿದರೆ, ಇದು ಚಲನೆಗೆ ಇರುಂತಹ ಜಾಗ. ವಾಯುವ್ಯ ಚಲನೆಯ ಇರುವಮತಹ ಸ್ಥಳವಾದ್ದರಿಂದ ಇಲ್ಲಿದ್ದವರು ನಮ್ಮ ಮನೆಗೆ ಬಂದು ಹೋಗುವುದರ ಜೊತೆಗೆ ಅವರನ್ನು ಅವರು ನೋಡಿಕೊಳ್ಳಬಹುದು. ಓಡಾಡುತ್ತಾ ಕೆಲಸವನ್ನು ಮಾಡಬಹುದು.

 

ಇನ್ನು ಎರಡನೇಯದಾಗಿ ವಾಯುವ್ಯ ಚಂದ್ರನ ಜಾಗವಾಗಿದೆ. ಮನೆ ಕೆಲಸದವರಾದರೂ ಕೂಡ ಮಮತೆ, ಪ್ರೀತಿಯಿಂದ ತಾಯಿಯಂತೆ ನೋಡಿಕೊಲ್ಳುತ್ತಾರೆ. ಮನೆಯ ಏಳಿಗೆಗಾಗಿ ಕಷ್ಟಪಟ್ಟು ಒಳ್ಳೆಯ ಮನಸ್ಸಿನಲ್ಲಿ ಕೆಲಸವನ್ನು ಮಾಡಬೇಕು. ಮನೆಗೆ ಸದಾ ಒಳ್ಳೆಯದನ್ನು ಬಯಸಬೇಕು ಎಂದರೆ, ಅವರಿಗೆ ವಾಯುವ್ಯ ದಿಕ್ಕಿನಲ್ಲಿ ಸ್ಥಳ ಕೊಟ್ಟರೆ, ಸಾಧ್ಯವಾಗುತ್ತದೆ.

ಆದರೆ, ವಾಯುವ್ಯದಲ್ಲಿ ಜಾಗ ಕೊಡುವ ಬದಲು, ನೈರುತ್ಯದಲ್ಲಿ ಏನಾದರೂ ಸ್ಥಳ ಕೊಟ್ಟರೆ, ಕೆಲಸದವರೇ ಮನೆಯ ಯಜಮಾನರಂತೆ ನಡೆದುಕೊಳ್ಳುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ನೈರುತ್ಯದಲ್ಲಿ ಮನೆಯನ್ನು ಕಟ್ಟಿಕೊಡಬಾರದು. ಇನ್ನು ದಕ್ಷಿಣದಲ್ಲೋ ಇಲ್ಲ ಪಶ್ಚಿಮದಲ್ಲೋ ಮನೆಯನ್ನು ಕಟ್ಟಿಕೊಟ್ಟಾಗ ಅವರು ನಮ್ಮ ಮನೆಯವರಂತೆಯೇ ಹೊಂದಿಕೊಂಡು ಮನೆ ಕೆಲಸ ಮಾಡಿಕೊಂಡು ಇರುತ್ತಾರೆ. ಆದರೆ, ಅವರಿಗೆ ಜಾಸ್ತಿ ಕೆಲಸವನ್ನು ಕೊಡಲು ಸಾಧ್ಯವಾಗುವುದಿಲ್ಲ.

ನಮ್ಮ ಮನೆಯವರೇ ಆಗಿರುವಂತಾ ಭಾವನೆ ಬರುವುದರಿಂದ ಅವರಿಗೆ ಹೆಚ್ಚಿನ ಕೆಲಸವನ್ನು ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಆಗ ನಮಗೆ ಕೆಲಸ ಆಗುವುದಕ್ಕಿಂತ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ದಕ್ಷಿಣ ಹಾಗೂ ಪಶ್ಚಿಮದಲ್ಲಿ ಕೆಲಸದವರಿಗೆ ಜಾಗ ಕೊಡದೇ ಇರುವುದು ಸೂಕ್ತ. ಇನ್ನು ಆಗ್ನೇಯದಲ್ಲಿ ಅಡುಗೆ ಮನೆ ಬರುವುದರಿಂದ ಅಲ್ಲಿ ಕೆಲಸದವರಿಗೆ ಜಾಗ ಕೊಡಲು ಆಗದು. ಪೂರ್ವ ಹಾಗೂ ಈಶಾನ್ಯದಲ್ಲಿ ಕೆಲಸದವರಿಗೆ ರೂಮ್ ಅನ್ನು ಮಾಡಿಕೊಡುವುದು ಸರಿ ಹೋಗುವುದಿಲ್ಲ. ಹಾಗಾಗಿ ವಾಯುವ್ಯ ದಿಕ್ಕಿನಲ್ಲಿ ಮಾತ್ರವೇ ಕೆಲಸದವರಿಗೆ ಕೋಣೆ ನೀಡುವುದು ಸೂಕ್ತ.

Related News

spot_img

Revenue Alerts

spot_img

News

spot_img