ಬೆಂಗಳೂರು, ಮೇ. 01 : ದೇವರ ಮನೆಯ ಎದುರು ಅಥವಾ ಸುತ್ತ ಮುತ್ತಲು ಯಾವ ವಸ್ತುವನ್ನು ಇಡಬೇಕು ಎಂಬುದನ್ನು ಮೊದಲು ತಿಳಿದಿರಬೇಕು. ದೇವರ ಮನೆಯಲ್ಲಿ ಆಧ್ಯಾತ್ಮ ಮಾಡಲು ನಿರ್ಮಾಣ ಮಾಡಿಕೊಳ್ಳುತ್ತೇವೆ. ಹೀಗಿರುವಾಗ ದೇವರ ಮನೆಯ ಎದುರುಗಡೆ ಸ್ಟೇರ್ ಕೇಸ್ ಇರುವುದು, ಇಲ್ಲವೇ ಶೌಚಾಲಯ ಕಟ್ಟಿಸುವುದು. ಬೆಡ್ ರೂಮ್ ಡೋರ್ ಹೀಗೆ ಯಾವುದು ಇರಬಾರದು. ಇದೆಲ್ಲವೂ ಡಿಸ್ಟರ್ಬ್ ಮಾಡುತ್ತಿರುತ್ತವೆ. ಎಲ್ಲರೂ ಓಡಾಡುತ್ತಿರುತ್ತಾರೆ. ಇದರಿಂದ ಆಧ್ಯತ್ಮ ಮಾಡಲು ಸಾಧ್ಯವಾಗುವುದಿಲ್ಲ.
ಇನ್ನು ಕೆಲವರು ಕೆಳಗಡೆ ದೇವರ ಮನೆ ಇರುತ್ತದೆ. ಮೇಲೆ ಅದೇ ಜಾಗದಲ್ಲಿ ಬೆಡ್ ರೂಮ್ ಬಂದಿರುತ್ತದೆ. ಕೇಳಗೆ ದೇವರಿರುವಾಗ ಮೇಲೆ ಮಲಗುವುದು ಸರಿಯಲ್ಲ. ಇನ್ನು ಕೆಲವರು ವಾಯುವ್ಯದಲ್ಲಿ ದೇವರ ಮನೆಯನ್ನು ಕೆಳಗಡೆ ನಿರ್ಮಿಸಿರುತ್ತಾರೆ. ಮೇಲೆ ಅದೇ ಜಾಗದಲ್ಲಿ ಅಡುಗೆ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಈಶಾನ್ಯದಲ್ಲಿ ದೇವರ ಮನೆಯಿದ್ದು, ಮೇಲೆಗಡೆ ಅದೇ ಸ್ಥಳದಲ್ಲಿ ಟಾಯ್ಲೆಟ್ ಅನ್ನು ಕಟ್ಟಿಕೊಳ್ಳುತ್ತಾರೆ. ಇದೆಲ್ಲವೂ ದೇವರ ಮನೆಯಲ್ಲಿನ ವಾತಾವರಣವನ್ನೇ ಬದಲು ಮಾಡಿ ಬಿಡುತ್ತದೆ.
ಹೀಗೆ ಅವರಿಗೆ ತಿಳಿಯದ ಹಾಗೂ ವಾಸ್ತು ದೋಷಗಳನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಜಾಗವನ್ನು ಉಳಿಸುವ ಸಲುವಾಗಿ ಹೇಗೆಂದರೆ ಹಾಗೆ ಕಟ್ಟಿರುತ್ತಾರೆ. ದೇವರು ಮನೆಗೆ ಬೆಡ್ ರೂಮ್, ಟಾಯ್ಲೆಟ್ ಗಳ ಗೋಡೆಗಳು ಅಟ್ಯಾಚ್ಡ್ ಆಗಿರುತ್ತವೆ. ಇದು ಕೂಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇವರ ಮನೆಗೆ ಯಾವುದೇ ಕಾರಣಕ್ಕೂ ನೆಗೆಟಿವ್ ಎನರ್ಜಿ ಸೋಕದಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ ದೇವರ ಮನೆಯ ಮೇಲೆ ಅಥವಾ, ಅಕ್ಕ ಪಕ್ಕದಲ್ಲಿ ಹುಷಾರಾಗಿ ನೋಡಿ ನಿರ್ಮಾಣ ಮಾಡಬೇಕು.
ಹಾಗೊಂದು ವೇಳೆ ದೇವರ ಮನೆಯ ಮೇಲೆ ಬೆಡ್ ರೂಮ್ ಬರಲೇ ಬೇಕು ಎಂದಿದ್ದರೆ, ದೇವರಮನೆಯನ್ನು 7 ಅಡಿಗೆ ಮುಗಿಸಿ ಮೇಲೆ 3 ಅಡಿ ಖಾಲಿ ಜಾಗವನ್ನು ಬಿಟ್ಟು ನಂತರ ಬೆಡ್ ರೂಮ್ ಅನ್ನು ಕಟ್ಟಬಹುದು. ಇದೇ ರೀತಿಯಲ್ಲಿ ಕಾಮನ್ ವಾಲ್ ನಲ್ಲಿ ಟಾಯ್ಲೆಟ್, ಅಡುಗೆ ಮನೆಗಳು ಬರಬೇಕು ಎಂದರೆ, 6 ಇಂಚಿನಷ್ಟು ಗ್ಯಾಪ್ ಕೊಟ್ಟು ಗೋಡೆಗಳನ್ನು ನಿರ್ಮಾಣ ಮಾಡುವುದು ಬಹಳ ಮುಖ್ಯವಾಗುತ್ತದೆ. ದೇವರ ಮನೆಯ ಶುಭತ್ವವನ್ನು ಕೆಡಿಸದಂತೆ ನೋಡಿಕೊಳ್ಳಬೇಕು.