27.4 C
Bengaluru
Monday, November 4, 2024

ಮನೆಗೆ ರಸ್ತೆ ಕುತ್ತು ಇದ್ದರೆ, ವಾಸ್ತುವಿನಲ್ಲಿ ಪರಿಹಾರವಿದೆಯಾ..?

ಬೆಂಗಳೂರು, ಏ. 24 : ರಸ್ತೆ ಕುತ್ತು ಎಂದರೆ, ಈಗಾಗಲೇ ವಿಧಿಶೂಲ ಎಂದು ಹೇಳಲಾಗಿದೆ. ಪೂರ್ವ ಈಶಾನ್ಯ, ಉತ್ತರ ಈಶಾನ್ಯ, ದಕ್ಷಿಣ ಆಗ್ನೇಯ ಮತ್ತು ಪಶ್ಚಿಮ ವಾಯುವ್ಯ ದಿಕ್ಕುಗಳು ಉಚ್ಛಸ್ಥಾನವಿದ್ದು, ಈ ಉಚ್ಛಸ್ಥಾನಗಳ ಅಗಲಕ್ಕೆ ಸರಿಯಾಗಿ ರಸ್ತೆ ಬಂದು ನಮ್ಮ ನಿವೇಶನವನ್ನು ಮುಟ್ಟಿದ್ದರೆ, ಅದು ಅಶುಭ ಅಲ್ಲ ಎಂದು ಹೇಳಿದ್ದೀವಿ. ಈ ಉಚ್ಛಸ್ಥಾನಗಳು ಹೊರತು ಪಡಿಸಿ ಬೇರೆ ದಿಕ್ಕುಗಳಲ್ಲಿ ಬೀದಿ ಮನೆಯನ್ನು ಮುಟ್ಟಿದ್ದರೆ, ಅದು ವಿಧಿಶೂಲ ಅಥವಾ ಕುತ್ತು ಎಂದು ಹೇಳಲಾಗಿದೆ.

ಈ ದಿಕ್ಕುಗಳಿಂದಾಗಿ ಮನೆಗೆ ಅಶುಭ ಉಂಟಾಗುತ್ತದೆ. ಇದರಿಂದ ಪರಿಹಾರ ಪಡೆದುಕೊಳ್ಳಲು ವಾಸ್ತುವಿನಲ್ಲಿ ಹಲವು ಬಗಡ ಇವೆ. ಹೀಗೆ ಕೊನೆಯಾಗು ರಸ್ತೆಯಲ್ಲಿ ಗಣೇಶನ ವಿಗ್ರಹವನ್ನು ಇಟ್ಟು, ದಿನಕ್ಕೆ ಮೂರು ಬಾರಿ ಪೂಜೆಯನ್ನು ಮಾಡಿದರೆ, ಆ ಮನೆಗೆ ಸಮಸ್ಯೆಗಳು ಬರುವುದಿಲ್ಲ. ಎರಡನೇಯದಾಗಿ, ಮನೆಯ ಗೋಡೆಯಲ್ಲಿ ಕಾನ್ವೆಕ್ಸ್‌ ಕನ್ನಡಿಯನ್ನು ತಂದು ರಸ್ತೆ ಪೂರ್ತಿ ಕಾಣುವಂತೆ ಫಿಕ್ಸ್‌ ಮಾಡಿದರೆ, ನೆಗೆಟಿವ್‌ ಎನರ್ಜಿ ಅನ್ನು ಅದು ವಾಪಸ್‌ ಕಳಿಸುತ್ತದೆ.

ಇನ್ನು ಮನೆಗೆ ಕುತ್ತು ಬಾರದಂತೆ ರಸ್ತೆ ಅಗಲಕ್ಕೂ ಏಳಡಿ ಅಷ್ಟು ಎತ್ತರ ಬೆಳೆಯುವಂತ ಮರಗಳನ್ನು ಬೆಳೆಸಬಹುದು. ನಾಲ್ಕನೇಯದಾಗಿ ಏಳಡಿ ಕಾಂಪೌಂಡ್‌ ಅನ್ನು ರೋಡ್‌ ಎಷ್ಟು ಅಗಲವಿದೆಯೋ ಅಷ್ಟೂ ಅಗಲಕ್ಕೆ ಕಟ್ಟಿದರೆ ಒಳ್ಳೆಯದು ಎಂದು ಹೇಳಲಾಗಿದೆ. ಕೊನೆಯದಾಗಿ ರಸ್ತೆ ಎಷ್ಟು ಅಡಿ ಅಗಲ ವಿದೆಯೋ ಅಷ್ಟು ಅಂದರೆ, 20ಅಡಿ ಅಗಲವಿದ್ದರೆ, 20 ಪಿರಾಮಿಡ್‌ ಗಳನ್ನು ತಂದು, ರಸ್ತೆಯ ಕೊನೆಯಲ್ಲಿ ಒಂದೊಂದು ಅಡಿಗೂ ಚೇಂಬರ್‌ ಗಳನ್ನು ಹಾಕಿ ಅದರೊಂಳಗೆ ಈ ಪಿರಾಮಿಡ್‌ ಗಳನ್ನು ಇಟ್ಟರೆ ಒಳ್ಳೆಯದು ಎಂದು ತಿಳಿಸಲಾಗಿದೆ.

Related News

spot_img

Revenue Alerts

spot_img

News

spot_img