ಬೆಂಗಳೂರು, ಮಾ. 07 : ಕೋವಿಡ್ ಬಂದ ಕಾರಣ ಬೆಂಗಳೂರಿನ ,ಮನೆಗಳು, ಅಪಾರ್ಟ್ ಮೆಂಟ್ ಗಳು ಖಾಲಿ ಬಿದ್ದಿವೆ. ವರ್ಕ್ ಫ್ರಮ್ ಪರಿಣಾಮವಾಗಿ ಬೆಂಗಳೂರಿನಲ್ಲಿ ಬಾಡಿಗೆಗೆ ಇದ್ದ ಸಾಕಷ್ಟು ಮಂದಿ ಮನೆ ಖಾಲಿ ಮಾಡಿಕೊಂಡು ಕೋವಿಡ್ ಸಂದರ್ಭದಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಸುಮಾರು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಸಾಕಷ್ಟು ಮನೆಗಳು ಖಾಲಿ ಇದ್ದವು. ಈಗ ಒಂದು ವರ್ಷದಿಂದ ಆಫೀಸಿಗೆ ಹೋಗಬೇಕಾಗಿರುವುದರಿಂದ ಮತ್ತೆ ಎಲ್ಲರೂ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ, ಮನೆಗಳು ಕಾಸ್ಟ್ಲಿ ಎಂಬ ಕಾರಣದಿಂದಾಗಿ ಬೆಂಗಳೂರಿನ ಸಾಕಷ್ಟು ಮನೆಗಳು ಖಾಲಿ ಬಿದ್ದಿವೆ.
ಎರಡು ವರ್ಷಕ್ಕೂ ಅಧಿಕ ಸಮಯದಿಂದ ಖಾಲಿ ಬಿದ್ದ ಮನೆ ಮಾಲೀಕರು ಈಗ ತಮ್ಮ ಬಾಡಿಗೆಯನ್ನು ಹೆಚ್ಚಿಸಿದ್ದಾರೆ. ಶೇ. 40 ರಷ್ಟು ಮನೆ ಬಾಡಿಗೆಯನ್ನು ಹೆಚ್ಚಿಸಿದ್ದಾರೆ. ಈಗಾಗಲೇ ಲಕ್ಷಗಟ್ಟಲೆ ಮನೆಗಳು ಖಾಲಿ ಇವೆ. ಹೀಗಿರುವಾಗ ಮನೆ ಬಾಡಿಗೆಯನ್ನು ಕಟ್ಟಲಾಗದೆ ಖಾಲಿ ಮಾಡುತ್ತಿದ್ದಾರೆ. ಐಟಿ ಹಬ್ ಹಾಗೂ ಟೆಕ್ ಪಾರ್ಕ್ ಗಳ ಸುತ್ತ ಮುತ್ತ 2-3 ಕಿಲೋ ಮೀಟರ್ ದೂರದವರೆಗೂ ಮನೆ ಬಾಡಿಗೆಯ ಬೆಲೆಗಳು ಗಗನಕ್ಕೇರಿವೆ. 10,000 ಸಾವಿರ ರೂಪಾಯಿಗಿಂತ ಕಡಿಮೆ ಪುಟ್ಟ ರೂಮ್ ಕೂಡ ಸಿಗುತ್ತಿಲ್ಲ.
ಇನ್ನು ಈ ಬಗ್ಗೆ ವರದಿಯೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ ಎರಡರಿಂದ ಮೂರು ಲಕ್ಷ ಮನೆಗಳು ಖಾಲಿ ಇವೆಯಂತೆ. ಅಪಾರ್ಟ್ ಮೆಂಟ್ ಗಳು, ಮನೆಗಳು ಖಾಲಿ ಬಿದ್ದಿವೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಮಾರತಹಳ್ಳಿಯಲ್ಲಿ ವಾಸವಿದ್ದ ಕುಟುಂಬ ಒಂದು ಬಾಡಿಗೆಯನ್ನು 15,000 ದಿಂದ 22,000ಕ್ಕೆ ಏರಿಕೆ ಮಾಡಿದ್ದರಿಂದ ಮನೆ ಖಾಲಿ ಮಾಡಿದ್ದಾರೆ. ಈಗ ಅವರು ಚಿಕ್ಕ ಮನೆಗೆ ಶಿಫ್ಟ್ ಆಗಿದ್ದಾರೆ.
ಇನ್ನು ರಿಯಲ್ ಎಸ್ಟೇಟ್ ಸಂಶೋಧನಾ ಹಾಗೂ ಸಲಹಾ ಕಂಪನಿಯ ವರದಿ ಪ್ರಕಾರ ಬೆಂಗಳೂರು ನಗರದಲ್ಲಿ 77,260 ವಸತಿ ಸಮುಚ್ಚಯಗಳು ಮಾರಾಟವಾಗದೇ ಖಾಲಿ ಉಳಿದಿವೆ. ಇವುಗಳಲ್ಲಿ ಕೆಲವು ರಾಜ್ಯ ಸರ್ಕಾರದ ಮಾದರಿ ಹಿಡುವಳಿ ಕಾಯ್ದೆ ಸಂಬಂಧ ವ್ಯಾಜ್ಯದ ಹಲವು ಮನೆಗಳನ್ನು ಬಾಡಿಗೆ ನೀಡಿಲ್ಲ ಎಂಬುದು ತಿಳಿದು ಬಂದಿದೆ. ಹೀಗಿದ್ದರು, ಬೆಂಗಳೂರಿನ ಟೆಕ್ ಪಾರ್ಕ್ ಸುತ್ತಮುತ್ತಲ ಮನೆಗಳಿಗೆ ಹೆಚ್ಚಿನ ಬೇಡಿಕೆಗಳು ಇವೆ ಎಂಬುದು ತಿಳಿದು ಬಂದಿದೆ.
ಇನ್ನು ಹೀಗೆ ಮನೆ ಬಾಡಿಗೆಯನ್ನು ಹೆಚ್ಚಿಸಿರುವುದು ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ. ಆಟೋ ಚಾಲಕರು, ಭದ್ರತಾ ಸಿಬ್ಬಂದಿ, ಗೃಹ ಕೆಲಸಗಾರರು, ಎಲೆಕ್ಟ್ರೀಶಿಯನ್, ಪ್ಲಂಬರ್ ಗಳಿಗೆ ಬರುವ ಆದಾಯವೇ ಕಡಿಮೆ ಆದರೆ, ಇಂಥವರು ಕೂಡ ಮನೆ ಬಾಡಿಗೆ ಹೆಚ್ಚಾಗಿರುವುದರಿಂದ 10,000 ಬಾಡಿಗೆಯನ್ನು ಕಟ್ಟುವುದು ಕಷ್ಟವಾಗುತ್ತಿದೆ. ಬರುವ ಆದಾಯವೇ ಕಡಿಮೆ ಅದರಲ್ಲಿ ಬಂದಿದ್ದನ್ನೆಲ್ಲಾ ಬಾಡಿಗೆಗೆ ಕೊಟ್ಟರೆ, ಹೊಟ್ಟೆಗೆ ಬೇರೆ ಕಮಿಟ್ ಮೆಂಟ್ ಗಳಿಗೆ ಏನು ಮಾಡುವುದು ಎಂಬ ಯೋಚನೆ ಶುರುವಾಗಿದೆ ಎನ್ನುತ್ತಿದ್ದಾರೆ.