ಪಾಪ‌ ಡ್ರೋನ್ ಪ್ರತಾಪ್ ಮನೆ ಕ್ಯಾಪ್ಟನ್ ಆಗೋದು ಯಾರಿಗೂ ಇಷ್ಟವಿಲ್ಲವಂತೆ..!!

0
114

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಕುಟುಂಬದವರು ಬಂದು ಎಲ್ಲಾರಿಗೂ ಸಹ ಧೈರ್ಯ ತುಂಬಿ ಹೋಗಿದ್ದಾರೆ. ಇದರ ಜೊತೆಗೆ ಮನೆಯ ಕ್ಯಾಪ್ಟನ್ ಯಾರಾಗಬೇಕು ಎಂಬ ಬಗ್ಗೆಯೂ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈಗ ತಮ್ಮ ಫ್ಯಾಮಿಲಿ ಸೆಲೆಕ್ಟ್ ಮಾಡಿರುವ ಮೂವರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಕ್ಯಾಪ್ಟನ್ ಮಾಡುವ ಜವಾಬ್ದಾರಿ ಮನೆಯ ಸದಸ್ಯರ ಕೈಯ್ಯಲಿದೆ..

ಇನ್ನು ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಸಮರ ಶಂಖ ಊದುತ್ತಿದ್ದಾರೆ ಬಿಗ್ ಬಾಸ್ ಸ್ಪರ್ಧಿಗಳು..ಮನೆಗೆ ಬಂದ ಎಲ್ಲಾ ಬಿಗ್ ಬಾಸ್ ಸ್ಪರ್ಧಿಗಳ ಸದಸ್ಯರು ಅವರಿಗೆ ಯಾರ್ಯಾರು ಕ್ಯಾಪ್ಟನ್ ಆಗಬೇಕು ಎನ್ನುವ ಹಂಬಲವನ್ನ ವ್ಯಕ್ತಪಡಿಸಿದ್ದರು. ಇನ್ನು ಇದನ್ನ ಪರಿಗಣಿಸಿದಂತಹ ಬಿಗ್ಬಾಸ್ ಈ ಓಟದಲ್ಲಿ ಪ್ರತಾಪ್ ಗೂ ಸಹ ಅವಕಾಶ ನೀಡಿತ್ತು.. ಇದನ್ನ ಅಲ್ಲಗೆಳೆದ ಬಿಗ್ಬಾಸ್ ಸ್ಪರ್ಧಿಗಳು ಪ್ರತಾಪ್ ಗೆ ಅವಕಾಶ ಕೊಡಲ್ಲ ಎಂದಿದ್ದಾರೆ‌..

ಈ ಮೂವರಲ್ಲಿ ಒಬ್ಬರನ್ನು ಮನೆಯ ಇತರ ಸದಸ್ಯರು ಯಾರು ಕ್ಯಾಪ್ಟನ್ ಆಗಬಾರದು ಎಂದು ಆಯ್ಕೆ ಮಾಡಬೇಕಿದೆ. ಹೀಗಾಗಿ ಮನೆ ಮಂದಿ ತನಿಷಾ, ಸಂಗೀತಾ ಹಾಗೂ ಪ್ರತಾಪ್ ಅವರಲ್ಲಿ ಪ್ರತಾಪ್ ಅವರನ್ನು ಹೊರಗಿಡುತ್ತಿದ್ದಾರೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೋ ಪ್ರಕಾರ ಎಲ್ಲರು ಪ್ರತಾಪ್ ವಿರುದ್ಧವಾಗಿಯೇ ಮಾತನಾಡಿದ್ದಾರೆ ಹೀಗಾಗಿ ಡ್ರೋನ್ ಪ್ರತಾಪ್ ಸಾಕಷ್ಟು ನೊಂದುಕೊಂಡಿದ್ದಾರೆ‌.