ಮದ್ಯಪ್ರಿಯರ ಬೇಡಿಕೆಗಳನ್ನು ಈಡೇರಿಸಬೇಕೆಂದು ಮದ್ಯ ಪ್ರಿಯರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಚಳಿ ಅಧಿವೇಶನ ನಡೆಯುತ್ತಿದ್ದು ಅದೇ ಸಮಯದಲ್ಲಿ ಬೆಳಗಾವಿ ಚಲೋ ಎಂದು ಡಿ.೧೩ ಎಂದು ಹೋರಾಟ ಮಾಡಲು ಮದ್ಯಪಾನ ಪ್ರಿಯರ ಹೋರಾಟ ಸಂಘ ತೀರ್ಮಾನ ಮಾಡಿದ್ದಾರೆ. ಹಾಗೂ ಸುಮಾರು ಬೇಡಿಕೆಗಳಿದ್ದು ರಾಜ್ಯ ಸರ್ಕಾರ ಅದ್ದನ್ನು ಈಡೇರಿಸಬೇಕೆಂದು ಅರಸೀಕೆರೆ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ಶಿವಾನಂದಪ್ಪ ತಿಳಿಸಿದ್ದಾರೆ.
ಮಧ್ಯಪ್ರಿಯರ ಕಷ್ಟವನ್ನು ಕೇಳೋರಾದ್ರೂ ಯಾರು..?
ಮದ್ಯ ಪ್ರಿಯರಿದ್ದರೆ ಮಾತ್ರ ರಾಜ್ಯದ ಬೊಕ್ಕಸು ತುಂಬುದು , ಅಂತದ್ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಮಹಿಳೆಯೆರಿಗೆ ಬಿಟ್ಟಿ ಬಸ್ಸು ಬಿಟ್ಟವರು, ಗ್ಯಾರಂಟಿಗಳನ್ನು ಜಾರಿಗೆ ತಂದರು ಅದರಲ್ಲಿ ಒಂದು ಗ್ಯಾರಂಟಿ ಸಹ ಮದ್ಯ ಪ್ರಿಯರಿಗೆ ಅನುಕೂಲವಾಗುವುದು ಏನೂ ಇಲ್ಲ. ಮದ್ಯ ಪ್ರಿಯರ ಕಡೆಯೂ ಸಹ ಯೋಚಿಸಬೇಕಲ್ವ ಸ್ವಾಮಿ ಎಂದು ಮದ್ಯ ಪ್ರಿಯರು ಕೇಳಿದ್ದಾರೆ.
ಮದ್ಯ ಪ್ರಿಯರ ಮನವಿ ಪತ್ರ ಕಡೆಗಣಿಸಿತ್ತಾ ಸರ್ಕಾರ…?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮದ್ಯ ಪ್ರಿಯರು ಸಹ ಒಂದು ಮನವಿ ಪತ್ರವನ್ನು ಸಲ್ಲಿಸಿದ್ದರು. ಮದ್ಯಸೇವನೆ ಮಾಡಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು, ಮದ್ಯ ಪ್ರಿಯರ ಕಲ್ಯಾಣ ಮಂಡಳಿ ಸ್ಥಾಪಿಸ ಬೇಕು, ಮದ್ಯ ಸೇವಿಸಿ ಮೃತ ಪಟ್ಟವರಿಗೆ ೧೦ ಲಕ್ಷ ರೂ ನೀಡಬೇಕು, ವಿಮೆ ಸೌಲಭ್ಯ ಕಲ್ಪಿಸಿ ಕೊಡಬೇಕು, ಕುಡುಕ ಎಂಬ ಪದವನ್ನು ಬಳಬಾರದು, ವಸತಿ ಇಲ್ಲದವರಿಗೆ ಮನೆ ಕಟ್ಟಿಸಿ ಕೊಡಬೇಕು ಎಂದು ಇನ್ನಿತರ ಬೇಡಿಕೆಗಳನ್ನು ಇಟ್ಟಿದ್ದರು .