ವಾಸ್ತು ಪ್ರಕಾರ ಮನೆಯೊಳಗಿನ ಗೋಡೆಗಳಿಗೆ ಯಾವ ಬಣ್ಣ ಒಳ್ಳೆಯದು?

0
186

ವಾಸ್ತು ಅನಾದಿ ಕಾಲದಿಂದಲೂ ಪಾಲಿಸುತ್ತಾರೆ. ಒಂದು ಮನೆಗೆ ಬಳಿಯುವ ಬಣ್ಣ ಕೂಡ ಮನೆಯ ವಾಸ್ತು ವಿಚಾರದಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ಅಡುಗೆ ಮನೆ, ಓದುವ ಕೋಣೆ, ಮಾಸ್ಟರ್ ಬೆಡ್ ರೂಮ್, ಹಾಲ್, ಶೌಚಾಲಯ ಎಲ್ಲದಕ್ಕೂ ಯಾವ ಬಣ್ಣ ಬಳಿದರೆ ಒಳಿತಾಗುತ್ತದೆ ಎಂಬುದನ್ನು ವೇದಿಕ್ ವಾಸ್ತು ವಿವರಿಸುತ್ತದೆ. ಒಂದು ಮನೆ ಅಂದವಾಗಿ ಕಾಣಲು ಬಣ್ಣ ಬಳಿಯುತ್ತಾರೆ. ಸಮಸ್ಯೆಗಳು ಕಂಡಾಗ ಅಯ್ಯೋ ಎಂದು ಅಂದುಕೊಳ್ಳುತ್ತಾರೆ. ಮನೆಗೆ ಬಣ್ಣ ಬಳಿಯುವಾಗ ವಾಸ್ತು ಪ್ರಕಾರ ಈ ಕೆಳಕಂಡ ಬಣ್ಣಗಳನ್ನು ಬಳಿಯಬಹುದು.

ಪೂಜಾ ಕೊಠಡಿ: ಬಿಳಿ ಬಣ್ಣ, ಕ್ರೀಮ್ ಅಥವಾ ತಿಳಿ ಹಳದಿ ಬಣ್ಣ ಇರಬೇಕು.

ಓದುವ ಕೋಣೆ: ತಿಳಿ ಬಣ್ಣಗಳು ಅಥವಾ ತಿಳಿ ಹಸಿರು ಒಳ್ಳೆಯದು.

ಡ್ರಾಯಿಂಗ್ ಮತ್ತು ಲಿವಿಂಗ್ ರೂಮ್ : ಬಿಳಿ,ಹಳದಿ, ನೀಲಿ, ಹಸಿರು ಬಣ್ಣ ಸೂಕ್ತ. ಆದರೆ ಕೆಂಪು ಮತ್ತು ಕಪ್ಪು ಬಣ್ಣ ಉಪಯೋಗಿಸಬಾರದು.

ಡೈನಿಂಗ್ ಹಾಲ್ : ಪಿಂಕ್, ಆರೆಂಜ್, ಹಳದಿ, ಕ್ರೀಮ್, ಬಿಳಿ,

ಅಡುಗೆ ಕೋಣೆ: ಆರೆಂಜ್, ರೋಸ್ ಕಲರ್, ( ಚಾಕಲೆಟ್ ಹಾಗೂ ಕೆಂಪು ಕಲರ್ ಬಳಕೆ ಸೂಕ್ತವಲ್ಲ)

ಸ್ನಾನ ಕೋಣೆ: ತಿಳಿ ಬಣ್ಣಗಳು, ನೀಲಿ ಮಿಶ್ರಿತ ವಿವಿಧ ಬಣ್ಣ

ಮಲಗುವ ಕೋಣೆ : ತಿಳಿ ರೋಸ್ ಕಲ್ಲರ್, ಗ್ರೇ, ನೀಲಿ, ಚಾಕಲೆಟ್ ಕಲ್ಲರ್, ಹಸಿರು. (ಬಿಳಿ ಹಾಗೂ ಹಳದಿ ಬಣ್ಣ ಬಳಕೆ ಮಾಡಬಾರದು. ಈ ಬಣ್ಣದ ಮಾರ್ಬಲ್ ಮತ್ತು ಗ್ರಾನೈಟ್ ಕೂಡ ವಾಸ್ತು ಪ್ರಕಾರ ಉಪಯೋಗಿಸಬಾರದು).

ಮಾಸ್ಟರ್ ಬೆಡ್ ರೂಮ್: ಗೋಡೆಗಳು ತಿಳಿ ಬಣ್ಣ ಇರಲಿ, ಮುಖ್ಯವಾಗಿ ಚಿನ್ನದ ಕಲರ್, ನೀಲಿ ಬಣ್ಣ ಉಪಯೋಗಿಸಬೇಕು. ( ನೇರಳೆ ಹಾಗೂ ಕೆಂಪು ಬಣ್ಣ ಬಳಕೆ ಮಾಡಬಾರದು).

ಸ್ಟೋರ್ ರೂಮ್: ಉಗ್ರಾಣ, ಸ್ಟೇರ್ ಕೇಸ್, ಗಾರೇಜ್, ವರಂಡ, ಟಾಯ್ಲೆಟ್ , ಬಾಲ್ಕನಿ ಬೇಸ್ ಮೆಂಟ್ ಅಥವಾ ಸೆಲ್ಲಾರ್, ಪೋಟಿಕೋ: ಯಾವುದೇ ಬಣ್ಣ ಸ್ಪಷ್ಟವಿಲ್ಲ, ಕ್ರೀಮ್ ಬಣ್ಣ ಬಳಕೆ ಮಾಡಿದ್ರೆ ಒಳ್ಳೆಯದು.

ಕಪ್ಪು ಬಣ್ಣದ ಬಗ್ಗೆ ಏನು ಹೇಳುತ್ತದೆ?:
ಕಪ್ಪು ಬಣ್ಣ ಕೊಠಡಿಯ ಯಾವುದೇ ಭಾಗದಲ್ಲಿ ಬಳಕೆ ಮಾಡಬಾರದು. ಅತಿಯಾದ ಬಿಳಿ ಬಣ್ಣ ಸಹ ಒಳ್ಳೆಯದು ಅಲ್ಲ. ಮನೆಗೆ ಅತಿಯಾದ ಬಿಳಿ ಬಣ್ಣ ಬಳಕೆ ಮಾಡಿದರೆ, ತುಂಬಾ ದುರಾಸೆ, ಅದ್ಧುರಿ ಜೀವನಕ್ಕೆ ಮಾರು ಹೋಗಿ ಜೀವನದಲ್ಲಿ ಸಂಕಷ್ಟ ಎದುರಿಸುತ್ತಾರೆ. ಈ ಬಣ್ಣಗಳು, ಆಯಾ ಭಾಗದ ಪಂಚ ಭೂತ ತತ್ವಗಳು, ಗ್ರಹಗಳ ಕಾರಕತ್ವ ದಂತೆ ಕಾರ್ಯ ನಿರ್ವಿಸುತ್ತವೆ. ಹೀಗಾಗಿ ಬಣ್ಣಗಳಿಗೂ ಮಹತ್ವ ಕೊಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.