ಮನೆ – ಕಟ್ಟಡ ನಿರ್ಮಾಣಕ್ಕೆ ಗ್ರೀನ್ ಸಿಮೆಂಟ್ ಬಳಕೆ ಆರಂಭವಾಗಿದೆ. ಈ ಗ್ರೀನ್ ಸಿಮೆಂಟ್ ಅಂದ್ರೆ ಏನು? ಗ್ರೀನ್ ಸಿಮೆಂಟ್ ನಿಂದ ಕಟ್ಟುವ ಕಟ್ಟಡಗಳು ಗಟ್ಟಿಯಾಗಿರುತ್ತೇವೆಯೇ?. ಸಾಮಾನ್ಯ ಸಿಮೆಂಟ್ ಗಿಂತಲೂ ಇದರ ಬೆಲೆ ಕಡಿಮೆಯೇ? ಜನರು ಗ್ರೀನ್ ಸಿಮೆಂಟ್ ನತ್ತ ಒಲವು ತೋರುತ್ತಿದ್ದಾರೆಯೇ? ಈ ಗ್ರೀನ್ ಸಿಮೆಂಟ್ ಬಳಸಿ ಕಟ್ಟಡ ಕಟ್ಟುವುದರಿಂದ ಆಗುವ ಲಾಭ ಮತ್ತು ನಷ್ಟ ಕುರಿತು ರೆವಿನ್ಯೂ ಫ್ಯಾಕ್ಟ್ ವಿಶೇಷ ವರದಿ ಇಲ್ಲಿದೆ ನೋಡಿ.
ಗ್ರೀನ್ ಸಿಮೆಂಟ್ ಅನ್ವೇಷಣೆ: ವಿಶ್ವ ಪರಿಸರ ಮಾಲಿನ್ಯ ದಿಂದ ಆತಂಕಗೊಂಡಿದೆ. ಜಾಗತಿಕ ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಇಡೀ ಜಗತ್ತೇ ಚಿಂತನೆ ನಡೆಸುತ್ತಿದೆ. ಇದರ ನಡುವೆ ಕಟ್ಟಡ ನಿರ್ಮಾಣ ವಲಯದಲ್ಲಿ ಸಿಮೆಂಟ್ ಗೆ ಪರ್ಯಾಯವಾಗಿ ಗ್ರೀನ್ ಸಿಮೆಂಟ್ ಅನ್ವೇಷಣೆ ಮಾಡಲಾಗಿದೆ. ಪರಿಸರ ಸ್ನೇಹಿ ಸಿಮೆಂಟ್ ಎಂದೇ ಭಾವಿಸಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಗ್ರೀನ್ ಸಿಮೆಂಟ್ ಬಳಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಭಾರತದಲ್ಲೂ ಸಹ ಗ್ರೀನ್ ಸಿಮೆಂಟ್ ಬಳಕೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಭಾರತದಲ್ಲಿ ಜಿಂದಾಲ್ ಸ್ಟೀಲ್ ಕಂಪನಿ ಗ್ರೀನ್ ಸಿಮೆಂಟ್ ಉತ್ಪಾದನೆಗೆ ಇಳಿದಿದೆ.
ಏನಿದು ಗ್ರೀನ್ ಸಿಮೆಂಟ್ ?: ಸದ್ಯ ನಿರ್ಮಾಣ ಕ್ಷೇತ್ರದಲ್ಲಿ ಬಳಕೆ ಮಾಡುತ್ತಿರುವ ಸಿಮೆಂಟ್ ಗೆ ಪರ್ಯಾಯವಾಗಿ ಹುಟ್ಟು ಹಾಕಿರುವ ಪರಿಸರ ಸ್ನೇಹಿ ಸಿಮೆಂಟ್. ಕಟ್ಟಡಗಳ ನಿರುಪಯುಕ್ತ ವಸ್ತು ಹಾಗೂ ಸ್ಟೀಲ್ ಉದ್ಯಮಗಳು ಹೊರ ಸೂಸುವ ಪುಡಿ ಇನ್ನಿತರ ಕಚ್ಚಾ ವಸ್ತುಗಳಿಂದ ಗ್ರೀನ್ ಸಿಮೆಂಟ್ ತಯಾರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಬಳಸುವ ಸಿಮೆಂಟ್ ಗೆ ಹೋಲಿಸಿದ್ರೆ ಪರಿಸರ ಸ್ನೇಹಿ. ಈ ಸಿಮೆಂಟ್ ಬಳಕೆಯಿಂದ ಪರಿಸರ ಹಾನಿಯಾವುಗುದಿಲ್ಲ ಎಂಬುದು ಗ್ರೀನ್ ಸಿಮೆಂಟ್ ಬಗ್ಗೆ ಈವರೆಗೆ ಹೊರ ಬಿದ್ದಿರುವ ಸಂಶೋಧನಾ ವರದಿಗಳು ಹೇಳುತ್ತವೆ.
ವಿಶ್ವಕ್ಕೆ ಗ್ರೀನ್ ಸಿಮೆಂಟ್ ಅನಿವಾರ್ಯ: ವಿಶ್ವದಲ್ಲಿ ಜನ ಸಂಖ್ಯೆ ದಿನೇ ದಿನೇ ಏರುತ್ತಿವೆ. ಜನ ಸಂಖ್ಯೆಗೆ ಅನುಗುಣವಾಗಿ ನೆಲೆಸಲು ಕಟ್ಟಡಗಳು ಅನಿವಾರ್ಯ. ಆದ್ರೆ ಈಗಿನ ಕಟ್ಟಡ ನಿರ್ಮಾಣದಿಂದ ಪರಿಸರದ ಮೇಲೆ ಭಾರೀ ಹಾನಿ ಉಂಟು ಮಾಡುತ್ತಿವೆ. ಇದರ ಬೆನ್ನಲ್ಲೇ ಗ್ರೀನ್ ಸಿಮೆಂಟ್ ಅನ್ವೇಷಣೆ ಜಾಗತಿಕ ಮಟ್ಟದಲ್ಲಿ ನಡೆದು ಅದನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಬಳಕೆ ಶುರುವಾಗಿದೆ. ಕಟ್ಟಡಗಳ ನಿರ್ಮಾಣಕ್ಕೆ, ಸೇತುವೆ, ಅಪಾರ್ಟ್ ಮೆಂಟ್, ಡ್ಯಾಮ್ ನಿರ್ಮಾಣಕ್ಕೂ ಗ್ರೀನ್ ಸಿಮೆಂಟ್ ಬಳಕೆ ಮಾಡಲಾಗುತ್ತಿದೆ. ತಂತ್ರಜ್ಞಾನ ಬಳಿಸಿ ಪರಿಸರ ಸ್ನೇಹಿ ಸಿಮೆಂಟ್ ಕಂಡು ಹಿಡಿಯಲಾಗಿದ್ದು, ಇದಕ್ಕೆ ಗ್ರೀನ್ ಸಿಮೆಂಟ್ ಎಂದೇ ಹೆಸರಿಸಲಾಗಿದೆ. ಕಾರ್ಖಾನೆಗಳ ನಿರುಪಯುಕ್ತ ವಸ್ತು ಹಾಗೂ ನೈಸರ್ಗಿಕವಾಗಿ ಸಿಗುವ ಹಲವು ಉತ್ಪನ್ನ ಬಳಿಸಿ ಗ್ರೀನ್ ಸಿಮೆಂಟ್ ತಯಾರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ನಾವು ಈಗ ಬಳಸುತ್ತಿರುವ ಸಿಮೆಂಟ್ ಗೆ ಹೋಲಿಸಿದ್ರೆ ಇದು ಪರಿಸರ ಸ್ನೇಹಿ ಹಾಗೂ ಖರ್ಚು ಕಡಿಮೆ.
ಗ್ರೀನ್ ಸಿಮೆಂಟ್ ಅನ್ವೇಷಣೆಯಾದರೂ ಹಾಲಿ ಬಳಕೆಯಲ್ಲಿರುವ ಸಿಮೆಂಟ್ ಉತ್ಪಾದನೆ ನಿಲ್ಲದು. ಜಾಗತಿಕ ಬೇಡಿಕೆ ಈಡೇರಿಸಲು ದುಪ್ಪಟ್ಟು ಸಿಮೆಂಟು ಉತ್ಪಾದನೆ ಮಾಡಿದರೂ ಸಾಕಾಗುತ್ತಿಲ್ಲ. ಆದ್ರೆ ಇದರಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿ ತಪ್ಪಿಸಲು ಗ್ರೀನ್ ಸಿಮೆಂಟ್ ಕಂಡು ಹಿಡಿಯಲಾಗಿದ್ದು, ಜಾಗತಿಕವಾಗಿ ಇದರ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಗ್ರೀನ್ ಸಿಮೆಂಟ್ ಉತ್ಪಾದನೆಯಿಂದ ಪರಿಸರ ಮೇಲಿನ ಹಾನಿ ತಪ್ಪಿಸಬಹುದು ಎಂಬುದು ತಜ್ಞರ ಅಭಿಪ್ರಾಯ.
ಸಾಂಪ್ರದಾಯಿಕ ಸಿಮೆಂಟ್ ಉತ್ಪಾದನೆ ವೇಳೆ ಹೊರ ಬರುವ ಕಾರ್ಬನ್ ಡಯಾಕ್ಸಡ್ ನಿಂದ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದನ್ನ ತಪ್ಪಿಸುವ ಸಲುವಾಗಿ ಗ್ರೀನ್ ಸಿಮೆಂಟ್ ಅನ್ವೇಷಣೆ ಮಾಡಲಾಗಿದೆ. ಸಾಮಾನ್ಯ ಸಿಮೆಂಟ್ ತಯಾರಿಕೆಗೆ ಹೋಲಿಸಿದ್ರೆ ಶೇ. 40 ರಷ್ಟು ಮಾಲಿನ್ಯ ನಿಯಂತ್ರಣ ಮಾಡಬಹದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಗ್ರೀನ್ ಸಿಮೆಂಟ್ ನಿಂದ ಲಾಭ: ಈ ಗ್ರೀನ್ ಸಿಮೆಂಟ್ ಬಳಿಸಿ ಕಟ್ಟಡ ನಿರ್ಮಾಣ ಮಾಡುವುದರಿಂದ ಅನೇಕ ಲಾಭ ಆಗಲಿದೆ. ಕಡಿಮೆ ನೈಸರಿಕ ಉತ್ಪನ್ನ ಬಳಿಸಿ ತಯಾರಿಸಿರುವ ಕಾರಣದಿಂದ ಕಡಿಮೆ ಕಾರ್ಬನ್ ಡಯಾಕ್ಸೈಡ್ ಹೊರ ಸೂಸುತ್ತದೆ. ಈ ಗ್ರೀನ್ ಸಿಮೆಂಟ್ ನಿಂದ ಕಟ್ಟಿದ ಕಟ್ಟಡಗಳನ್ನು ನೆಲಸಮ ಮಾಡಿ ಮಣ್ಣಿಗೆ ಹಾಕಿದರೂ ಮಣ್ಣಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪರಿಸರಕ್ಕೆ ಹಾನಿಯಾಗುವುದಿಲ್ಲ. ಇನ್ನು ಸಾಂಪ್ರದಾಯಿಕ ಸಿಮೆಂಟ್ ಉತ್ಪಾದನೆಗೆ ಅತಿ ಹೆಚ್ಚು ಇದ್ದಿಲು ಮತ್ತು ಗ್ಯಾಸ್ ಮತ್ತಿತರ ಎಜರ್ನಿ ಬಳಸಬೇಕು. ಗ್ರೀನ್ ಸಿಮೆಂಟ್ ಉತ್ಪಾದನೆಗೆ ಅಷ್ಟು ಇಂಧನ ಬಳಸು ಅಗತ್ಯತೆ ಬೀವುದಿಲ್ಲ. ಇನ್ನು ಗ್ರೀನ್ ಸಿಮೆಂಟ್ ಸೂರ್ಯನ ತಾಪಮಾನ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಗ್ರೀನ್ ಸಿಮೆಂಟ್ ನಿಂದ ಕಟ್ಟಿದ ಕಟ್ಟಡಗಳು ತಂಪಾಗಿರುತ್ತವೆ. ಈ ಗ್ರೀನ್ ಸಿಮೆಂಟ್ ನ್ನು ಉತ್ಪಾದನೆ ವೇಳೆ ಅದನ್ನು ಬಿಸಿ ಮಾಡಲು ಬಳಸುವ ಇಂಧನ ಬಳಕೆ ತೀರಾ ಕಡಿಮೆ. ಸಾಂಪ್ರದಾಯಿಕ ಸಿಮೆಂಟ್ ಗೆ ಹೋಲಿಸಿದ್ರೆ ಶೇ. 80 ರಷ್ಟು ಕಡಿಮೆ ಕಾರ್ಬನ್ ಡಯಾಕ್ಸೈಡ್ ಹೊರ ಸೂಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಗ್ರೀನ್ ಸಿಮೆಂಟ್ ಬಳಕೆ ಮಾಡುವುದರಿಂದ ಗ್ಯಾಸ್ ನಿಂದ ಹಾಗುವ ಪರಿಸರ ಹಾನಿ ತಪ್ಪಿಸಬಹುದು. ಸಿಮೆಂಟ್ ಉದ್ಯಮ ಹೊರ ಸೂಸುತ್ತಿರುವ ಕಾರ್ಬನ್ ಡಯಾಕ್ಸೈಡ್ ಕಡಿಮೆ ಮಾಡಬಹುದು. ಸುಣ್ಣದ ಕಲ್ಲು, ಕ್ಲೇ, ನೈಸರ್ಗಿಕ ನದಿಯ ಮಣ್ಣು, ನೈಸಗಿರ್ಕ ಕಲ್ಲಿನ ಪುಡಿ ಬಳಿಸಿ ತಯಾರಿಸುವ ಕಾರಣದಿಂದ ಸಾಂಪ್ರದಾಯಿಕ ಸಿಮೆಂಟ್ ಗಿಂತಲೂ ಇದು ಹೆಚ್ಚು ಬಾಳಿಕೆಗೆ ಬರುತ್ತದೆ.
ಕೈಗಾರಿಕೆಗಳ ನಿರುಪಯುಕ್ತ ವಸ್ತು ಸಿಲಿಕಾ, ಹಾರುವ ದೂಳು ಬಳಸಿ ಗ್ರೀನ್ ಸಿಮೆಂಟ್ ತಯಾರಿಸುವ ಕಾರಣ ಈ ಸಿಮೆಂಟ್ ತಯಾರಿಕೆ ಕಡಿಮೆ ಇಂಧನ ಸಾಕು. ಸಿಮೆಂಟ್ ಉತ್ಪಾದನೆ ಮೌಲ್ಯ ಕೂಡ ಕಡಿಮೆ. ಅಗ್ನಿ ಅವಘಡಗಳ ಸಮಯದಲ್ಲಿ ಗ್ರೀನ್ ಸಿಮೆಂಟ್ ಕಟ್ಟಡಗಳು ಹೊತ್ತಿಕೊಳ್ಳುವುದಿಲ್ಲ. ಸುದೀರ್ಘ ಬಾಳಿಕೆ ಹಾಗೂ ಅಗ್ನಿ ನಿರೋಧಕ ತಡೆಯುವ ಶಕ್ತಿ ಹೊಂದಿದೆ.
ಗ್ರೀನ್ ಸಿಮೆಂಟ್ ನ ಹಲವು ವಿಧಗಳಿವೆ: ಈ ಗ್ರೀನ್ ಸಿಮೆಂಟ್ ನಲ್ಲಿ ಹಲವಾರು ವಿಧಗಳಿವೆ. ಈ ವಿಧವಾದ ಗ್ರೀನ್ ಸಿಮೆಂಟ್ ಗಳನ್ನು ನಾನಾ ಭಾಗದಲ್ಲಿ ಬಳಕೆ ಮಾಡಲಾಗುತ್ತದೆ. ಅದರಲ್ಲಿ ಮೆಗ್ನೇಷಿಯಂ ಆಕ್ಸೈಡ್ ಆಧಾರಿತ ಗ್ರಿನ್ ಸಿಮೆಂಟ್. ಇದು ತುಂಬಾ ಗಟ್ಟಿಯಾದ ಸಿಮೆಂಟ್. ಈ ಸಿಮೆಂಟ್ ಬಳಿಸಿ ಕಟ್ಟಡ ನಿರ್ಮಿಸಿದರೆ ಯಾವುದೇ ಕ್ರಾಕ್ ಬಿಡುವುದಿಲ್ಲ. ಬದಲಿಗೆ ತುಂಬಾ ಗಟ್ಟಿಯದ ಸಿಮೆಂಟ್ . ಇದನ್ನು ಕೈಗಾರಿಕೆಗಳಲ್ಲಿ, ಶಿಫ್ ನಿರ್ಮಾಣಕ್ಕೆ, ರೈಲ್ವೇ ಪ್ಯಾಸೆಂಜರ್ ಕೋಚ್ ನಿರ್ಮಾಣಕ್ಕೆ, ಹಾಸ್ಪಿಟಲ್ ಫ್ಲೋರ್ ಗಳ ನಿರ್ಮಾಣಕ್ಕೆ, ಅಂಡರ್ ಗ್ರೌಂಡ್ ಫ್ಯಾಕ್ಟರಿ, ಬಂಕರ್ ನಿರ್ಮಾಣಕ್ಕೆ ಬಳಸಲಾಗುತ್ತದೆ.
ಜಿಯೋಪಾಲಿಮರ್ ಸಿಮೆಂಟ್ : ಇನ್ನು ಗ್ರೀನ್ ಸಿಮೆಂಟ್ ನಲ್ಲಿ ಜಿಯೋ ಪಾಲಿಮರ್ ಮಾದರಿಯ ಸಿಮೆಂಟ್ ಇದೆ. ಕೈಗಾರಿಕೆಗಳ ಉಪ ಉತ್ಪನ್ನ ಬಳಿಸಿ ಈ ಮಾದರಿಯ ಸಿಮೆಂಟ್ ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಸಿಮೆಂಟ್ ಕಟ್ಟಡಗಳಿಗೆ ಹೋಲಿಸಿದ್ರೆ ಇದು ಸಹ ತುಂಬಾ ಶಕ್ತಿಶಾಲಿಯಾದುದು. ಇದು ಆರ್ಥಿಕವಾಗಿಯೂ ತುಂಬಾ ಮಿತವ್ಯಯಕಾರಿ. ಕಟ್ಟಡ ಬಿರುಕು ಬಿಟ್ಟಿದ್ದಲ್ಲಿ ಕಟ್ಟಡಗಳ ರಿಪೇರಿಗೆ ಹೆಚ್ಚಾಗಿ ಈ ಸಿಮೆಂಟ್ ಬಳಸುತ್ತಾರೆ.
ಕಾಲ್ಸಿಯಮ್ ಸಲ್ಪೋಮಿನೇಟ್ ಸಿಮೆಂಟ್ : ಗ್ರೀನ್ ಸಿಮೆಂಟ್ ನಲ್ಲಿ ಕ್ಯಾಲ್ಸಿಯಂ ಸಲ್ಪೋಮಿನೇಟ್ ವಿಧವಾದ ಸಿಮೆಂಟ್ ಕೂಡ ಇದೆ. ಇದನ್ನು ಟ್ಯೂನಲ್ ಬಳಕೆ ಹಾಗೂ ಅಂಡರ್ ಗ್ರೌಂಡ್ ಕನ್‌ಸ್ಟ್ರಕ್ಷನ್ ಕ್ಷೇತ್ರದಲ್ಲಿ ಬಳಸಾಗುತ್ತದೆ. ಅಂಡರ್ ಗ್ರೌಂಡ್ ವಾಟರ್ ಪ್ರಾಜೆಕ್ಟ್ ಗಳಿಲ್ಲಿ ಬಳಸುತ್ತಾರೆ. ಇದು ಅತಿ ಬೇಗ ಕಾಂಪ್ರೆಸ್ ಅಗುತ್ತದೆ. ಕೆಲವೇ ಗಂಟೆಗಳಲ್ಲಿ ಈ ಸಿಮೆಂಟ್ ತುಂಬಾ ಗಟ್ಟಿಯಾಗುತ್ತದೆ. ಸಾಂಪ್ರದಾಯಿಕ ಸಿಮೆಂಟ್ 28 ದಿನ ತೆಗೆದುಕೊಂಡರೆ, ಈ ಸಿಮೆಂಟ್ ಕೇವಲ 26 ತಾಸು ಸಾಕು. ಏರ್ ಪೋರ್ಟ್ ರನ್ ವೇ ನಿರ್ಮಾಣಕ್ಕೂ ಇದನ್ನು ಉಪಯೋಗಿಸುತ್ತಾರೆ. ಅದೇ ರೀತಿ ಸೀಕ್ವೇಸ್ಟ್ರೇಟೆಡ್ ಕಾರ್ಬನ್ ಸಿಮೆಂಟ್ ಕೂಡ ಗ್ರೀನ್ ಸಿಮೆಂಟ್ ನ ಒಂದು ಮಾದರಿಯಿದೆ ಇದು ಅತಿ ಗುಣಮಟ್ಟದ ಸಿಮೆಂಟ್ ಎಂದೇ ಪರಿಗಣಿಸಲಾಗಿದೆ. ಸಾಂಪ್ರದಾಯಿಕ ಸಿಮೆಂಟ್ ಗೆ ಹೋಲಿಸಿದ್ರೆ ಇದು ಕೂಡ ತುಂಬಾ ಗಟ್ಟಿಯಾದ ಸಿಮೆಂಟ್.
ಭಾರತದಲ್ಲಿ ಗ್ರೀನ್ ಸಿಮೆಂಟ್ ಗೆ ಬೇಡಿಕೆ : ಕಾಲ ಬದಲಾದಂತೆ ಭಾರತದಲ್ಲಿ ಗ್ರೀನ್ ಸಿಮೆಂಟ್ ಮಾರುಕಟ್ಟೆ ಹೆಚ್ಚಾಗುತ್ತಿದೆ. ಪರಿಸರ ಸ್ನೇಹಿ ಗ್ರೀನ್ ಸಿಮೆಂಟ್ ಬಳಕೆ ಸಂಬಂಧ ಅದರಿಂದ ಆಗುವ ಉಪಯೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಪರಿಸರ ಸ್ನೇಹಿ ಗ್ರೀನ್ ಸಿಮೆಂಟ್ ಬಳಕೆಯಿಂದ ನಮ್ಮ ಭೂಮಿಯನ್ನು ರಕ್ಷಣೆ ಮಾಡಬಹದು. ನೈಸರ್ಗಿಕ ಸಂಪತ್ತನ್ನು ಉಳಿಸಬಹುದು. ಗ್ರೀನ್ ಸಿಮೆಂಟ್ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿದೆ ಎಂಬ ಆಶಾ ಭಾವನೆ ಉಂಟು ಮಾಡಿದೆ. ಇನ್ನು ಗ್ರೀನ್ ಸಿಮೆಂಟ್ ಉತ್ಪಾದನೆ, ತಾಯಾರಿಕೆ ಕ್ಷೇತ್ರದಲ್ಲಿ ಕಟ್ಟಡ ನಿರ್ಮಾಣ ದೈತ್ಯ ಕಂಪನಿಗಳು ಲಕ್ಷಾಂತರ ಕೋಟಿ ಹೂಡಿಕೆ ಮಾಡಿವೆ. ಇನ್ನೂ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗ್ರೀನ್ ಸಿಮೆಂಟ್ ಗೆ ಭಾರೀ ಬೇಡಿಕೆ ಉಂಟಾಗುವ ಕಾಲ ದೂರವಿಲ್ಲ ಎಂದೇ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



