ಗರ್ಭಿಣಿಯರಿಗಾಗಿ ಸಹಾಯಧನ ನೀಡುವ ಈ ಯೋಜನೆ ಯಾವುದು ಗೊತ್ತೇ..?

0
103

ಬೆಂಗಳೂರು, ಮೇ. 05 : ಕೇಂದ್ರ ಸರ್ಕಾರ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. ಭಾರತದ ಪ್ರತಿಯೊಬ್ಬ ನಾಗರಿಕರೂ ಹಸಿವಿಲ್ಲದೇ ಇರಬಾರದು ಎಂದು ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಆಗಾಗ ಜಾರಿಗೆ ತರುತ್ತಲೇ ಇರುತ್ತದೆ. ರೈತರಿಗಾಗಿ, ಬಡವರಿಗಾಗಿ, ಕೂಲಿ ಕಾರ್ಮಿಕರಿಗೆ, ವಿಕಲಚೇತನರಿಗೆ, ವೃದ್ಧರಿಗೆ, ವಿಧವೆಯರಿಗೆ, ಗರ್ಭಿಣಿಯರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ನಾನಾ ಬಗೆಯ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ ಲಕ್ಷಾಂತರ ಮಂದಿ ಹಲವು ಯೋಜನೆಗಳ ಪ್ರಯೋಜನವನ್ನು ಪಡೆದಿದ್ದಾರೆ.

ಇದೀಗ ಗರ್ಭಿಣಿಯರಿಗಾಗಿ ಪ್ರಧಾನ ಮಂತ್ರಿ ಮಾತೃ ವೃಂದಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಗರ್ಭಿಣಿಯರು ಹಣವನ್ನು ಪಡೆಯಬಹುದು. ಈ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 5 ಸಾವಿರ ರೂಪಾಯಿಯನ್ನು ನೀಡುತ್ತದೆ. ಗರ್ಭಿಣಿ ಹಾಗೂ ಆಕೆಯ ಮಗುವಿನ ಆರೋಗ್ಯಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶದ ಆಹಾರ ಸಿಗಲಿ, ವೈದ್ಯಕೀಯ ಚಿಕಿತ್ಸೆಗೆ ಅನುಕೂಲವಾಗಲಿ ಎಂದು ಈ ಯೋಜನೆಯನ್ನು ಬಿಡುಗಡೆಗೊಳಿಸಲಾಗಿದೆ.

ಈ ಯೋಜನೆಗೆ ಗರ್ಭಿಣೀಯರು ಫಲಾನುಭವಿಗಳಾಗಿದ್ದಾರೆ. ಕೂಲಿ ಮಾಡಿಕೊಂಡು, ಬಡತನದಲ್ಲಿರುವ ಮಹಿಳೆಯರು ಗರ್ಭಿಣಿಯಾದಾಗ ದುಡಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ಯೋಜನೆಯ ಮೂಲಕ ಹಣ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಮೂಲಕ ಗರ್ಭಿಣಿಯರಿಗೆ ಮೂರು ಭಾಗವಾಗಿ 5000 ರೂಪಾಯಿಯನ್ನು ವಿಂಗಡಣೆ ಮಾಡಿ ನೀಡುತ್ತದೆ. ಪಿಎಂಎಂವಿವೈ ಯೋಜನೆ ಅಡಿಯಲ್ಲಿ ಹಣ ಪಡೆಯಲು ಗರ್ಭಿಣಿಯರು https://wcd.nic.in/schemes/pradhan-mantri-matru-vandana-yojana ಲಿಂಕ್‌ ಗೆ ಭೇಟಿ ಕೊಡಿ.

ಇದರಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ, ನಿಮ್ಮ ಬ್ಯಾಂಕ್‌ ಖಾತೆಯ ಮಾಹಿತಿಯನ್ನು ನೀಡಿ. 19ವರ್ಷ ಮೇಲ್ಪಟ್ಟ ಗರ್ಭಿಣಿಯರು ಮಾತ್ರವೇ ಈ ಯೋಜನೆಯ ಫಲಾನುಭವಿಗಳು ಆಗಬಹುದು. ಅರ್ಝಿ ಭರ್ತಿ ಮಾಡಿದ ಬಳಿಕ ಗರ್ಭೀಣಿಯಾದಾಗ ಕೇಂದ್ರ ಸರ್ಕಾರ ಮೊದಲು ಒಂದು ಸಾವಿರ ರೂಪಾಯಿಯನ್ನು ಖಾತೆಗೆ ಜಮೆ ಮಾಡುತ್ತದೆ. ಇದು ಚಿಕಿತ್ಸೆಗೆಂದು ಕೊಡುತ್ತದೆ. ಪ್ರಸವದ ವೇಳೆಗೆ ಎರಡು ಸಾವಿರ ರೂಪಾಯಿಯನ್ನು ಆಸ್ಪತ್ರೆ ಕರ್ಚಿಗೆಂದು ನೀಡುತ್ತದೆ. ಕೊನೆಯದಾಗಿ ಮಗು ಜನಿಸಿದ ಬಳಿಕ ಮೂರನೇ ಕಂತು ಎರಡು ಸಾವಿರ ರೂಪಾಯಿಯನ್ನು ನೀಡುತ್ತದೆ.