19.7 C
Bengaluru
Sunday, February 16, 2025

ಒಂದೇ ದಿನದಲ್ಲಿ 48 ಸಾವಿರ ಕೋಟಿ ರೂ. ಕಳೆದುಕೊಂಡ ಗೌತಮ್ ಅದಾನಿ ‌;ಹಿಂಡೆನ್‌ಬರ್ಗ್ ವರದಿ ಎಫೆಕ್ಟ್:

ಮುಂಬೈ:ಹಿಂಡನ್​ಬರ್ಗ್ ವರದಿ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಅಂಗ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ. ಪರಿಣಾಮವಾಗಿ ಅದಾನಿ ಸಮೂಹ 46,086 ಕೋಟಿ ರೂ. ಕಳೆದುಕೊಂಡಿದೆ. ಅಕ್ರಮಕ್ಕೆ ಸಂಬಂಧಿಸಿ ಹಿಂಡನ್​ಬರ್ಗ್ ರಿಸರ್ಚ್​ (Hindenburg Research) ಆರೋಪ ಮಾಡಿದ ಬೆನ್ನಲ್ಲೇ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿ (Gautam Adani) ಒಡೆತನದ ಅದಾನಿ ಸಮೂಹ (Adani Group) ಕಂಪನಿಗಳ ಷೇರು ಮೌಲ್ಯದಲ್ಲಿ ಗಣನೀಯವಾಗಿ ಕುಸಿತ ಕಂಡುಬಂದಿದೆ. ಒಂದೇ ದಿನ ಕಂಪನಿಯು ಸುಮಾರು 46,086 ಕೋಟಿ ರೂ. ಕಳೆದುಕೊಂಡಿದೆ. ಇದರೊಂದಿಗೆ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದ ಬೆನ್ನಲ್ಲೇ ಅದಾನಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದಾನಿ ಸಮೂಹವು ಷೇರುಗಳ ತಿರುಚುವಿಕೆಯಲ್ಲಿ ತೊಡಗಿಕೊಂಡಿರುವುದಲ್ಲದೆ ದಶಕಗಳಿಂದ ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಹಿಂಡನ್​ಬರ್ಗ್ ರಿಸರ್ಚ್ ಆರೋಪಿಸಿತ್ತು.

ಹಿಂಡನ್​ಬರ್ಗ್​ ವರದಿ;
ಅದಾನಿ ಸಮೂಹವು ಷೇರುಗಳ ಅಕ್ರಮದಲ್ಲಿ ತೊಡಗಿಕೊಂಡಿರುವುದಲ್ಲದೆ ದಶಕಗಳಿಂದ ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಹಿಂಡನ್​ಬರ್ಗ್ ರಿಸರ್ಚ್ ವರದಿ ಆರೋಪಿಸಿತ್ತು. ಗೌತಮ್ ಅದಾನಿ 120 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 100 ಶತಕೋಟಿ ಡಾಲರ್​​ನಷ್ಟು ಸಂಪತ್ತು ಹೆಚ್ಚಿಸಿಕೊಂಡಿದ್ದರು. ಅವರ ಒಡೆತನದ ವಿವಿಧ ಕಂಪನಿಗಳ ಷೇರುಗಳ ದರ ಸರಾಸರಿ ಶೇ 819ರಷ್ಟು ಹೆಚ್ಚಾಗಿತ್ತು. ಅದಾನಿ ಸಮೂಹದ ಮಾಜಿ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಸಂದರ್ಶನ ನಡೆಸಿದ್ದ ಕಂಪನಿ ಸಾವಿರಾರು ದಾಖಲೆಗಳನ್ನು ಪರಿಶೀಲಿಸಿ, ವಿವಿಧ ರಾಷ್ಟ್ರಗಳ ವೆಬ್​​ಸೈಟ್​ಗಳನ್ನೂ ಪರಿಶೀಲಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಹಿಂಡನ್​ಬರ್ಗ್ ತನಿಖಾ ವರದಿ ಹೇಳಿದೆ.

ಹಿಂಡನ್​ಬರ್ಗ್ ವರದಿ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಅಂಗ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್​​ಪ್ರೈಸಸ್, ಅದಾನಿ ಟ್ರಾನ್ಸ್​ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್, ಅದಾನಿ ಪವರ್, ಅದಾನಿ ವಿಲ್ಮರ್ ಷೇರುಗಳು ಶೇ 1ರಿಂದ 4ರಷ್ಟು ಕೆಳಮಟ್ಟದಲ್ಲಿ ವಹಿವಾಟು ನಡೆಸಿವೆ. ಪರಿಣಾಮವಾಗಿ ಅದಾನಿ ಸಮೂಹ 46,086 ಕೋಟಿ ರೂ. ಕಳೆದುಕೊಂಡಿದೆ.

 

ಅದಾನಿ ಗ್ರೂಪ್‌ನ ಎಲ್ಲ 10 ಸ್ಟಾಕ್‌ಗಳು ಕೂಡಾ ರೆಡ್‌ ಝೋನ್‌ನಲ್ಲಿದೆ. ಅದಾನಿ ಗ್ಯಾಸ್‌ ಷೇರು ಎನ್‌ಎಸ್‌ಇಯಲ್ಲಿ ಶೇಕಡ 14.28ರಷ್ಟು ಇಳಿದರೆ, ಮಾರುಕಟ್ಟೆ ಮೌಲ್ಯದಲ್ಲಿ ಒಟ್ಟು ಶೇಕಡ 19.6ರಷ್ಟು ಕಳೆದುಕೊಂಡಿದೆ. ಸ್ಟಾಕ್ ದರವು 2,961.55 ರೂಪಾಯಿಗೆ ಇಳಿದಿದೆ.ಮಂಗಳವಾರ ಪ್ರಕಟಗೊಂಡಿದ್ದ ವಿಶ್ವದ ಶ್ರೀಮಂತ ವ್ಯಕ್ತಿಗಳಿಗೆ ಸಂಬಂಧಿಸಿದ ‘ಬ್ಲೂಮ್​ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕ’ದಲ್ಲಿ ಉದ್ಯಮಿ ಗೌತಮ್ ಅದಾನಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಮೂರನೇ ಸ್ಥಾನಕ್ಕೇರಿದ್ದರು. ಇದರ ಬೆನ್ನಲ್ಲೇ ಹಿಂಡನ್​ಬರ್ಗ್ ವರದಿಯು ಅದಾನಿ ಸಮೂಹವನ್ನು ತತ್ತರಿಸುವಂತೆ ಮಾಡಿದೆ.

Related News

spot_img

Revenue Alerts

spot_img

News

spot_img