32.2 C
Bengaluru
Wednesday, April 17, 2024

ತಮಿಳುನಾಡಿಗೆ ಕಾವೇರಿಯಿಂದ 4 ಸಾವಿರ ಕ್ಯುಸೆಕ್ ನೀರು ಬಿಡುಗಡೆ

#4 thousand #cuses #water #relesed #cauvery #tamilnadu

ಮಂಡ್ಯ: ರೈತರು &ಕನ್ನಡ ಪರ ಸಂಘಟನೆಗಳ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು ಬಿಡುಗಡೆ ಪ್ರಮಾಣದಲ್ಲಿ ಭಾರೀ ಏರಿಕೆ ಮಾಡಲಾಗಿದ್ದು, ನೀರಿನ ಪ್ರಮಾಣವೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೋಮವಾರ ಬೆಳಿಗ್ಗೆ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ 4,105 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನಿನ್ನೆ 3,838 ಕ್ಯೂಸೆಕ್ ಹಾಗೂ ಮೊನ್ನೆ (ಶನಿವಾರ) 2,973 ಕ್ಯೂಸೆಕ್ ನೀರು ಹರಿಸಲಾಗಿತ್ತು.ಇಂದು ಏಕಾಏಕಿ 4,105 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಾಲೆ ಹಾಗೂ ತಮಿಳುನಾಡಿಗೆ ಸೇರಿ ಕೆಆರ್‌ಎಸ್ ಡ್ಯಾಂನಿಂದ 6,716 ಕ್ಯೂಸೆಕ್ ಹೊರ ಹರಿವು ಇದೆ.ಕಬಿನಿ ಜಲಾಶಯದಿಂದಲೂ ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ. ಕಬಿನಿಯಿಂದ 2,500 ಕ್ಯೂಸೆಕ್ ನೀರು ತಮಿಳುನಾಡಿಗೆ ಹೋದರೆ, ಕೆಆರ್‌ಎಸ್ ಹಾಗೂ ಹಾಗೂ ಕಬಿನಿಯಿಂದ ನದಿ ಮೂಲಕ ತಮಿಳುನಾಡಿಗೆ 6,605 ನೀರು ಬಿಡುಗಡೆಯಾಗುತ್ತಿದೆ.

Related News

spot_img

Revenue Alerts

spot_img

News

spot_img