ಬೆಂಗಳೂರು, ಜ. 10 :worlds stubborn home owners : ಕೆಲ ಮನೆಗಳು ನೋಡಲು ವಿಚಿತ್ರವಾಗಿ ಕಾಣುತ್ತವೆ. ಕೆಲ ಮನೆಗಳನ್ನು ನೀವು ಫೋಟೋದಲ್ಲಿಯೋ ಅಥವಾ ವೀಡಿಯೋಗಳಲ್ಲೋ ನೋಡಿರಬಹುದು. ರಸ್ತೆ ಮಧ್ಯೆ, ಹಳ್ಳದಲ್ಲಿ ಒಂಟಿ ಮನೆಗಳು ಇರುತ್ತವೆ. ಇದಕ್ಕೆ ಕಾರಣವೂ ಇರುತ್ತದೆ. ಜಗತ್ತಿನಲ್ಲಿ ಹಣವೊಂದಿದ್ದರೆ ಎಲ್ಲವೂ ಸಾಧ್ಯ ಎನ್ನುವವರು ಈ ಸುದ್ದಿಯನ್ನು ನೋಡಲೇಬೇಕು. ಅದೇನು ಎಂದು ತಿಳಿದುಕೊಳ್ಳೋಣ ಬನ್ನಿ.

ರಸ್ತೆ ಮಧ್ಯೆ ಮನೆ: ಚೀನಾ ದೇಶದಲ್ಲಿ ಅಲ್ಲಿನ ಸರ್ಕಾರ ಒಂದು ಹಳ್ಳಿಯನ್ನು ಡೆವಲಪ್ ಮಾಡಲು ರಸ್ತೆಯನ್ನು ನಿರ್ಮಾಣಕ್ಕೆ ಮುಂದಾಗುತ್ತೆ. ಆಗ ಅಲ್ಲಿ ಮನೆಗಳ ಮಾಲೀಕರಿಗೆ ಹಣಕೊಟ್ಟು, ರಸ್ತೆಗೆ ಜಾಗವನ್ನು ಪಡೆಯುತ್ತಾರೆ. ಆದರೆ, ಒಬ್ಬ ವ್ಯಕ್ತಿ ಮಾತ್ರ, ತನ್ನ ಮನೆಯನ್ನು ಖಾಲಿ ಮಾಡುವುದಿಲ್ಲ ಎಂದು ಹಠ ಹಿಡಿಯುತ್ತಾನೆ. ಆತನನ್ನು ಸರ್ಕಾರ ಎಷ್ಟೇ ರಿಕ್ವೆಸ್ಟ್ ಮಾಡಿದರೂ ಒಪ್ಪುವುದಿಲ್ಲ. ಆಗ ಸರ್ಕಾರ ಆ ಮನೆಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಆದರೂ ಆತ ಮನೆಯನ್ನು ಬಿಡುವುದಿಲ್ಲ. ಚೀನಾ ಆ ಜಾಗವನ್ನು ಮಾತ್ರ ಬಿಟ್ಟು ರಸ್ತೆಯನ್ನು ನಿರ್ಮಾಣ ಮಾಡುತ್ತದೆ. ಆ ಮನೆ ಮಾತ್ರ ರಸ್ತೆಯ ಮಧ್ಯದಲ್ಲಿ ಹಾಗೆಯೇ ಉಳಿಯುತ್ತದೆ.
ಕಟ್ಟಡಗಳ ನಡುವೆ ಒಂಟಿ ಮನೆ: ಇದೇ ರೀತಿ ಅಮೇರಿಕದ ಎಡಿತ್ ಮೇಸ್ಫೀಲ್ಡ್ ಎಂಬ ಅಜ್ಜಿ ಒಬ್ಬರು ಕಳೆದ 50 ವರ್ಷದಿಂದ ಮನೆಯಲ್ಲಿ ವಾಸವಿರುತ್ತದೆ. ಆ ಮನೆ ಮೇಲೆ ಅಜ್ಜಿ ಭಾವನಾತ್ಮಕವಾದ ಸಂಪರ್ಕವನ್ನು ಹೊಂದಿರುತ್ತದೆ. ಸುಮಾರು 2004ರಲ್ಲಿ ಆ ಊರಿಗೆ ಐಟಿ ಕಂಪನಿಗಳು ಲಗ್ಗೆ ಇಡುತ್ತವೆ. ಅಲ್ಲಿನ ರಿಯಲ್ ಎಸ್ಟೇಟ್ ಉದ್ಯಮವೂ ಬೆಳೆಯುತ್ತದೆ. ಆಗ ಅಲ್ಲೊಂದು ಕಂಪನಿ ಶುರು ಮಾಡಲು ಮುಂದಾಗುತ್ತಾರೆ. ಅಜ್ಜಿ ಇರುವ ಮನೆಯನ್ನು ಬಿಟ್ಟು ಕೊಡಲು ಎಷ್ಟು ಕೇಳಿದರೂ ಬಿಡುವುದಿಲ್ಲ. ಅಜ್ಜಿ ಮನೆಯ ಅಕ್ಕ-ಪಕ್ಕದಲ್ಲಿದ್ದರು ಸುಮಾರು 20 ರಿಂದ 30 ಮನೆಗಳ ಕುಟುಂಬದವರು ಮನೆಗಳನ್ನು ಮಾರಿ ಬೇರೆ ಕಡೆ ಹೋಗುತ್ತಾರೆ. ಆದರೆ, ಅಜ್ಜಿ ಮಾತ್ರ ಹಠ ಮಾಡುತ್ತದೆ. ಎಷ್ಟೇ ಹಣದ ಆಮೀಷ ಒಡ್ಡಿದರೂ ಬಿಡುವುದಿಲ್ಲ. ಆಗ ಅಲ್ಲಿ ಅಜ್ಜಿ ಇರುವ ಮನೆಯನ್ನು ಬಿಟ್ಟು, ಸುತ್ತಾ ಬಿಲ್ಡಿಂಗ್ ಅನ್ನು ಕನ್ಸ್ಟ್ರಕ್ಟ್ ಮಾಡಲಾಗುತ್ತದೆ.

ದಂಪತಿಗಳ ಒಂಟಿ ಮನೆ: ಚೀನಾ ಸರ್ಕಾರ ಹೊಸ ರೈಲ್ವೇ ಸ್ಟೇಷನ್ ನಿರ್ಮಿಸುತ್ತದೆ. ಆ ರೈಲ್ವೇ ಸ್ಟೇಷನ್ ಗೆ ರಸ್ತೆ ನಿರ್ಮಾಣ ಮಾಡುತ್ತದೆ. ಅದಕ್ಕಾಗಿ ಅಲ್ಲಿದ್ದ ಹಳ್ಳಿಯನ್ನು ನೆಲಸಮ ಮಾಡುತ್ತದೆ. ಈ ವೇಳೆ, ಎಲ್ಲರೂ ತಮ್ಮ ಜಾಗಕ್ಕೆ ಹಣವನ್ನು ಪಡೆದು ಖಾಲಿ ಮಾಡುತ್ತಾರೆ. ಆದರೆ, ಅಜ್ಜ-ಅಜ್ಜಿ ವಾಸವಿದ್ದ ಮನೆ ಮಾತ್ರ ಖಾಲಿಯಾಗುವುದಿಲ್ಲ. ಬೇರೆ ದಾರಿಯಿಲ್ಲ. ಆ ಮನೆಯ ಸುತ್ತ ಚೀನಾ ಸರ್ಕಾರ ರಸ್ತೆ ನಿರ್ಮಾಣ ಮಾಡುತ್ತದೆ. ಅಜ್ಜ-ಅಜ್ಜಿ ಇದ್ದ ಮನೆಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಆಗ ದಾರಿಯಿಲ್ಲದೇ, ಆ ದಂಪತಿಗಳು ಮನೆಯನ್ನು ಖಾಲಿ ಮಾಡುತ್ತಾರೆ.

ಹಳ್ಳದಲ್ಲಿ ಮನೆ : ಚೀನಾದಲ್ಲಿ 1990 ರಲ್ಲಿ ನೆಲಸಮಕ್ಕೆ ಒಬ್ಬ ವ್ಯಕ್ತಿ ಮನೆಯನ್ನು ಕಟ್ಟಿಕೊಂಡಿದ್ದ. 2012 ಹರ್ಬಲ್ ಡೆವಲೆಪ್ಮೆಂಟ್ ಕಂಪನಿ ಬರುತ್ತದೆ. ಆ ಊರಿನಲ್ಲಿ ಕಟ್ಟಡ ಕಟ್ಟಲು ಮುಂದಾಗುತ್ತೆ. ಆಗ ಅಲ್ಲಿದ್ದವರೆಲ್ಲಾ ಹಣ ಪಡೆದು ಹೋಗುತ್ತಾರೆ. ಆದರೆ ಒಬ್ಬ ವ್ಯಕತಿ ಸುತಾರಾಂ ಒಪ್ಪುವುದಿಲ್ಲ. ಆಗ ಕಟ್ಟಡಗಳೇನೋ ಅಲ್ಲಿ ನಿರ್ಮಾಣವಾಗುತ್ತದೆ. ಆಗ ಅಲ್ಲಿನ ಮಣ್ಣನ್ನು ಈ ಮನೆಯ ಸುತ್ತ ಹಾಕಲಾಗುತ್ತದೆ. ಹಾಗಾಗಿ ಈ ಮನೆ ಹಳ್ಳದಲ್ಲಿ ಕಟ್ಟಿದಂತೆ ಕಾಣುತ್ತದೆ. ಇನ್ನು ಈ ಮನೆಗೂ ಚೀನಾ ಸರ್ಕಾರ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸುತ್ತೆ. ಇದರ ವಿರುದ್ಧ ಆ ವ್ಯಕ್ತಿ ಕೋರ್ಟ್ ಮೊರೆ ಹೋದರೂ ಪ್ರಯೋಜನವಾಗುವುದಿಲ್ಲ. ಇನ್ನು ಮಳೆ ಬಂದಾಗ ಈತನ ಮನೆಯ ಸುತ್ತ ನೀರು ನಿಲ್ಲುತ್ತೆ. ಅದಾಗಲೇ ಮನೆ ಬಿರುಕು ಬಿಟ್ಟಿದೆ. ಆದರೂ ಈ ತ ಇಲ್ಲೇ ವಾಸವಿದ್ದು, ರಾತ್ರಿಯಲ್ಲಿ ಕ್ಯಾಂಡಲ್ ಬಳಸುತ್ತಾನೆ. ನೀರಿಗಾಗಿ ಒಂದು ಕಿಲೋ ಮೀಟರ್ ದೂರದಲ್ಲಿರುವ ನದಿಗೆ ಹೋಗಿ ನಿತ್ಯ ತರುತ್ತಾನೆ.


