Revenue Facts

ಬೋಗಸ್ ದಾಖಲೆಗಳ ನೋಂದಣಿಗೆ ಯಾರು ಹೊಣೆ? ಕಾಸು ಕೊಟ್ರೆ ವಿಧಾನಸೌಧ ಕೂಡ ನೋಂದಣಿ ಮಾಡ್ತಾರೆ ನಿಜ!

ಬೆಂಗಳೂರು, ನ. 07: “ಅವರಿಗೇನು? ಕಾಸು ಕೊಟ್ಟರೆ ವಿಧಾನಸೌಧವನ್ನು ರಿಜಿಸ್ಟರ್ ಮಾಡಿಕೊಡುತ್ತಾರೆ..! ಉಪ ನೋಂದಣಣಾಧಿಕಾರಿಗಳು ಹಾಗೂ ಆಸ್ತಿ ನೋಂದಣಿ ಬಗ್ಗೆ ಲೋಕಾರೂಢಿಯಲ್ಲಿರುವ ಮಾತಿದು. ಹೌದು. ಇದು ಸುಳ್ಳಲ್ಲ. ನ್ಯಾಯಾಲಯ ಕೂಡ ಇದನ್ನೇ ಹೇಳಿದೆ. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತ ಕೇಳ್ತೀರಾ ? ಇಲ್ಲಿದೆ ಅಸಲಿ ವಿಚಾರ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಆಸ್ತಿ ಬೆಲೆ ಚಿನ್ನಕ್ಕಿಂತಲೂ ಜಾಸ್ತಿಯಿದೆ. ಹೀಗಾಗಿ ಯಾರದ್ದೋ ಆಸ್ತಿಗೆ ಇನ್ಯಾರೋ ಕೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನೋಂದಣಿ ಮಾಡಿಸುತ್ತಾರೆ. ನಕಲಿ ದಾಖಲೆಗಳನ್ನು ನೋಂದಣಿ ಮಾಡಿಸುವಾಗ ನೋಂದಣಾಧಿಕಾರಿಗಳು ಗಮನಿಸಿ ಅದನ್ನು ತಡೆಯಬೇಕಲ್ಲವೇ ? ಅವರಿಂದ ಹಣ ಪಡೆದು ನಕಲಿ ದಾಖಲೆಗಳನ್ನು ನೋಂದಣಿ ಮಾಡಿಸಿ ಅವರ ಜತೆ ಕೈ ಜೋಡಿಸಿದ್ದಾರೆ ಎಂದು ಬಹುತೇಕರು ಮಾತನಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ರೋಸಿ ಹೋಗಿ ಬೋಗಸ್ ದಾಖಲೆಗಳ ನೋಂದಣಿ ಸಂಬಂಧ ಉಪ ನೋಂದಣಾಧಿಕಾರಿಗಳ ಮೇಲೆ ನ್ಯಾಯಾಲಯದಲ್ಲಿ ಕೇಸು ಜಡಾಯಿಸಿದ ಉದಾಹರಣೆಗಳು ಇವೆ. ಹೀಗಾಗಿಯೇ ಕಾಸು ಕೊಟ್ಟರೆ ಸಬ್ ರಿಜಿಸ್ಟರ್ ಗಳು ವಿಧಾನಸೌಧವನ್ನು ಸಹ ರಿಜಿಸ್ಟರ್ ಮಾಡಿಕೊಡುತ್ತಾರೆ ಎಂಬ ಮಾತು ಚಾಲ್ತಿಯಲ್ಲಿದೆ.

ವಾಸ್ತವದಲ್ಲಿ ನೋಂದಣಿ ಕಾಯ್ದೆ ನಿಯಮಗಳು ಇರುವುದು ಹಾಗೆ. ಮಾತ್ರವಲ್ಲ ಪ್ರಕರಣವದೊಂದರಲ್ಲಿ ಹೈಕೋರ್ಟ್ ಕೂಡ ತೀರ್ಪು ಕೊಟ್ಟಿದೆ. ಯಾವುದೇ ಆಸ್ತಿಗೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳು ಅವುಗಳ ಅಸಲಿತನ ಮತ್ತು ನಕಲಿತನ ಪರಿಶೀಲನೆ ಮಾಡುವ ಕರ್ತವ್ಯ ಅವರದ್ದು ಅಲ್ಲ. ಅವರು ಸರ್ಕಾರಕ್ಕೆ ರಾಜಸ್ವ ಸಂಗ್ರಹಿಸಲು ನೇಮಕ ಗೊಂಡಿರುವ ಅಧಿಕಾರಿಗಳು. ಅವರು ದಾಖಲೆಗಳು ಅಸಲಿನಾ, ನಕಲಿಯೇ ಎಂಬುದನ್ನು ಪರಿಶೀಲಿಸಬಹುದು. ಪರಿಶೀಲಿಸದೇ ನೋಂದಣಿ ಮಾಡಿಸಬಹುದು.

ಒಂದು ವೇಳೆ ನೋಂದಣಿಗೆ ಸಲ್ಲಿಸಿರುವ ದಾಖಲೆಗಳು ನಕಲಿ ಎಂದು ಗೊತ್ತಾಗಿ ಅವನ್ನು ಉಪ ನೋಂದಣಾಧಿಕಾರಿಗಳು ತಿರಸ್ಕರಿಸಿದರೆ, ತಿರಸ್ಕಾರ ಮಾಡಿದ ಬಗ್ಗೆ ಎಂಡಾರ್ಸ್ಮೆಂಟ್ ಕೊಡಿ ಎಂದು ಕೇಳುತ್ತಾರೆ.
ಕಂದಾಯ ಆಧಿಕಾರಿಗಳು ಹಕ್ಕು ಭಾಧ್ಯತೆ ಮತ್ತು ಹಿತಾಸಕ್ತಿ ಖಾತ್ರಿ ಪಡಿಸುವುದಿಲ್ಲಯಾವುದೇ ವ್ಯಕ್ತಿ ಜೀವನದಲ್ಲಿ ಒಂದು ನಿವೇಶನ ಮಾಡಬೇಕು ಎಂಬ ಮಹಾದಾಸೆಯನ್ನು ಹೊಂದಿರುತ್ತಾರೆ. ಇನ್ನೂ ಕೆಲವರು ತುಂಬಾ ಅದೃಷ್ಟವಂತ ಅವರ ಹತ್ತಿರ ಕೃಷಿ ಜಮೀನು, ನಿವೇಶನಗಳು ಇರುತ್ತವೆ. ಜೀವನದಲ್ಲಿ ಎಲ್ಲಾ ರೀತಿಯಲ್ಲಿ ಸರಿ ಇರುವ ಒಂದು ನಿವೇಶನ ಮಾಡುವುದು ಬಹಳ ಕಷ್ಟದ ಕೆಲಸ.

ಇತ್ತಿಚ್ಚಿನ ಸ್ವತ್ತುಗಳ ಬೆಲೆಯು ಗಗನಕ್ಕೆ ಏರಿರುವ ಸಮಯದಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ಸಾಕಸ್ಟು ಜನ ಮೋಸ ಮಾಡುವವರು ಹುಟ್ಟಿಕೊಂಡಿರುತ್ತಾರೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರ ಹಾಗೂ ಇನ್ನಿತರ ವಾಣಿಜ್ಯ ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮವು ಅತೀ ವೇಗವಾಗಿ ನಡೆಯುತ್ತಿದ್ದು, ಅದರಲ್ಲಿ ಎಲ್ಲಾ ರೀತಿಯಲ್ಲಿ ಯಾವುದೇ ತಕರಾರು ಇಲ್ಲದೆ ವ್ಯಾಜ್ಯಗಳಿಲ್ಲದೇ ಸರಿಯಾದ ಒಂದು ನಿವೇಶನ ಪಡೆಯುವುದು ಬಲು ಕಷ್ಟದ ಕೆಲಸ.

ಈ ಮಧ್ಯೆ ನಿವೇಶನ ಪಡೆಯಬೇಕಾದರೆ ಬೋಗಸ್ ದಾಖಲೆಗಳ ಅವಳಿಯು ಸಹ ಹೆರಳವಾಗಿದೆ. ಪರಿಸ್ತಿತಿ ಹೀಗಿರುವಾಗ ಸರಿಯಾದ ನಿವೇಶನ ಪಡೆಯಲು, ಸರಿಯಾದ ದಾಖಲೆಗಳು ಇದ್ದರೂ ಸಹ ಭೂಕಂದಾಯ ಕಾಯಿದೆ, ಭೂಸುಧಾರಣ ಕಾಯಿದೆ, ನೊಂಧಾಣಿ ಕಾಯಿದೆ ಹಾಗೂ ಇನ್ನಿತರ ಕಂದಾಯ ಕಾನೂನುಗಳಲ್ಲಿ ಕಂದಾಯ ಅಧಿಕಾರಿಗಳಿಗೆ ಅವರ ಕರ್ತವ್ಯವನ್ನು ಹೇಳಲಾಗಿದೆ. ಅದರ ಪ್ರಕಾರ ಆರ್.ಟಿ.ಸಿ. ಮ್ಯುಟೇಶನ್ ನೋಂದಣಿಯಾದ ಪತ್ರಗಳು ಇದ್ದರೂ ಸಹ ಆ ನಿವೇಶನ ಸರಿಯಾದ ಹಕ್ಕು, ಭಾದ್ಯತೆ, ಹಿತಾಶಕ್ತಿಯುಳ್ಳ ನಿವೇಶನ ಎಂದು ಸರಿಯಾಗಿ ಪರಿಶೀಲಿಸದೇ ಹೇಳಲಾಗದು.

ಯಾವುದೇ ಕಂದಾಯ ಅಧಿಕಾರಿಗಳು(ತಹಶಿಲ್ದಾರ್, ಸಹಾಯಕ ಆಯುಕ್ತರು, ಉಪನೊಂಧಾಣಾಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಇತರೆ) ಹಕ್ಕು ಭಾಧ್ಯತೆ ಮತ್ತು ಹಿತಾಸಕ್ತಿಯನ್ನು ಖಾತ್ರಿ ಪಡಿಸುವುದಿಲ್ಲ. ಈ ಇಲಾಖೆಯ ಮೂಲ ಉದ್ದೇಶವು ಸರ್ಕಾರಕ್ಕೆ ರಾಜಸ್ವ ಸಂಗ್ರಹಿಸುವುದಾಗಿದೆ ಹಾಗೂ ಸರ್ಕಾರಿ ದಾಖಲೆ ಮಾಡುವುದಾಗಿದೆ. ಇದರಿಂದ ಸಾರ್ವಜನಿಕರು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಖರೀದಿದಾರರೇ ಎಚ್ಚರ ಎಂಬ ಧ್ಯೇಯ ವಾಖ್ಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೀತಿ ಎಚ್ಚರಿಕೆವಹಿಸಬೇಕು.

ಖರೀದಾರರು ತಾವು ಕೊಳ್ಳಲು ಬಯಸುವ ಸ್ವತ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒಬ್ಬ ಪರಿಣಿತ ವಕೀಲರಿಂದ ಅಭಿಪ್ರಾಯ ಪಡೆದು ಎಲ್ಲಾ ದಾಖಲೆಗಳ, ಮೂಲ ದಾಖಲೆಗಳನ್ನು ಸಂಬಂಧ ಪಟ್ಟ ಕಚೇರಿಗಳಲ್ಲಿ ಪರಿಶೀಲಿಸಿ ನೊಂದಣಿಯಾಗಿರುವ ವಣಿಯಾಗಿರುವ ಪತ್ರಗಳಲ್ಲಿನ ಪಾಪರ್ಟಿಗಳ ವಂಶವಳಿ ಪ್ರಕಾರ ಸರಿಯಾಗಿ ಪತ್ರಗಳು ಸರಿಯಾಗಿ ನೊಂದಣೆಯಾಗಿವೆ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಆದಾಗ್ಯೂ ಸಹ ಯಾವುದೇ ಸ್ವತ್ತಿಗೆ ಹಕ್ಕು ಬಾಧ್ಯತೆ ಹಿತಾಶಕ್ತಿಗೆ ಸಂಬಂಧ ಪಟ್ಟ ತಕರಾರು ಉಂಟಾದರೆ ಅದನ್ನು ಬಗೆಹರಿಸುವ ಅಧಿಕಾರ ಸಂಬಂಧ ಪಟ್ಟ ಸಿವಿಲ್ ನ್ಯಾಯಾಲಯಕ್ಕೆ ಇದೆ.

ನಂಜುಂಡಸ್ವಾಮಿ ಪ್ರಕರಣದಲ್ಲಿ ದಾಖಲೆಗಳನ್ನು ಪರಿಶೀಲಿಸುವ ರೆವಿನ್ಯೂ ಅಧಿಕಾರಿಗಳು ದಾಖಲೆ ನೈಜತೆ ಪ್ರಶ್ನಿಸುವಂತಿಲ್ಲ ಎಂದು ತೀರ್ಪು ನೀಡಿದೆ. ಒಬ್ಬ ವ್ಯಕ್ತಿ ದಾನ ಪತ್ರವನ್ನು ನೋಂದಣಿ ಮಾಡಿಸಲು ಉಪ ನೋಂದಣಾಧಿಕಾರಿಗಳ ಮುಂದೆ ಹಾಜರು ಪಡಿಸಿದ್ದ. ದಾನ ಪತ್ರಗಳಿಗೆ ನಿಗದಿತ ಮುದ್ರಾಂಕ ಶುಲ್ಕ ಇರುವುದರಿಂದ ಕುಟುಂಬ ಸದಸ್ಯರು ಖಾತ್ರಿ ಪಡಿಸಿಕೊಳ್ಳಲು ಉಪ ನೋಂದಣಾಧಿಕಾರಿ ದಾಖಲೆ ಕೇಳಿದ್ದಾರೆ. ವ್ಯಕ್ತಿ ನೀಡಲು ನಿರಾಕರಿಸಿದ್ದಾರೆ.

ವಂಶಾವಳಿಯನ್ನು ನೀಡದ ಕಾರಣ ನೋಂದಣಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಹೈಕೋರ್ಟ್ ನ್ಯಾ. ಜಸ್ಟೀಸ್ ವಿ. ಗೋಪಾಲಗೌಡ ಅವರು, ಉಪ ನೋಂದಣಾಧಿಕಾರಿಗಳು ದಾಖಲೆಗಳ ನೈಜತೆ ಬಗ್ಗೆ ಪ್ರಶ್ನಿಸುವಂತಿಲ್ಲ ಎಂದು ತೀರ್ಪು ನೀಡಿದ್ದರು. ಹೈಕೋರ್ಟ್ ತೀರ್ಪು ಆಧರಿಸಿ ನೋಂದಣಿ ಮಾಡಿಸಿದ್ದರು. ಇದರ ತಾತ್ಪರ್ಯ ಇಷ್ಟೇ. ಯಾವುದೇ ದಾಖಲೆಗಳ ನೈಜತೆಯನ್ನು ಉಪ ನೋಂದಣಾಧಿಕಾರಿಗಳು ಅಥವಾ ಕಂದಾಯ ಅಧಿಕಾರಿಗಳು ಪರಿಶೀಲಿಸುವಂತಿಲ್ಲ. ಅವರು ಸರ್ಕಾರಕ್ಕೆ ರಾಜಸ್ವ ಸಂಗ್ರಹಿಸಲು ನೇಮಕಗೊಂಡಿರುವ ಅಧಿಕಾರಿಗಳು. ದಾಖಲೆಗಳು ಸುಳ್ಳು ಇದ್ದರೆ ಅದಕ್ಕೆ ನೋಂದಣಾಧಿಕಾರಿಗಳು ಅಥವಾ ಕಂದಾಯ ಅಧಿಕಾರಿಗಳು ಹೊಣೆಯಲ್ಲ.

Exit mobile version