Revenue Facts

ಫಡಾ ಮತ್ತು ಪಹಲ್ ಬಗ್ಗೆ ನಿಮಗೆಷ್ಟು ಗೊತ್ತು ? ನಿಮ್ಮ ಜಮೀನಿನ RTC ಯಲ್ಲಿ ‘ಫಡಾ’ ನಮೂದಾಗಿದೆಯಾ ಚೆಕ್ ಮಾಡಿ!

ಬೆಂಗಳೂರು, ಡಿ. 26: ಪಢಾ.. ಕೃಷಿ ಭೂಮಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಇದರ ಬಗ್ಗೆ ಗೊತ್ತಿರಲೇಬೇಕು! ಇಲ್ಲಿದ್ದರೆ ಆಸ್ತಿಯನ್ನೇ ಕೈ ಬಿಡಬೇಕಾದೀತು!ಕರ್ನಾಟಕ ಸರ್ವೆ ದಾಖಲೆಗಳಲ್ಲಿ ಮರಾಠಿ ಪದಗಳೇ ತುಂಬಿ ಹೋಗಿವೆ. ಕನ್ನಡಿಗರಾದ ನಮಗೆ ಆ ಪದಗಳನ್ನು ನಮ್ಮದೇ ಎಂದು ಭಾವಿಸಿದ್ದೇವೆ. ಬಹುತೇಕ ಸರ್ವೆ ದಾಖಲೆಗಳಲ್ಲಿ ಮರಾಠಿ ಪದಗಳೇ ತುಂಬ ಹೊಗಿವೆ. ಅಂತಹ ಮರಾಠಿ ಪದವೇ ಫಡಾ. ಕೃಷಿ ಜಮೀನಿನ ಅರ್‌ಟಿಸಿಯಲ್ಲಿ ಫಡಾ ಎಂದು ನಮೂದಾಗಿರುತ್ತದೆ. ಏನಿದು ಫಡಾ ? ಫಡಾ ಅಂತ ಯಾವಾಗ ನಮೂದಾಗುತ್ತದೆ ? ಅದು ನಮೂದಾದರೆ ಭೂ ಮಾಲೀಕರಿಗೆ ಏನು ಸಮಸ್ಯೆಯಾಗಲಿದೆ ಈ ಕುರಿತ ಸಮಗ್ರ ಮಾಹಿತಿ ರೆವಿನ್ಯೂ ಫ್ಯಾಕ್ಟ್ಸ್ ಇಲ್ಲಿ ವಿವರಿಸಲಾಗಿದೆ.

ಕೆಲವೊಮ್ಮೆ ರೈತರಿಗೆ ಗೊತ್ತಾಗದೇ ಆರ್‌ಟಿಸಿ ( ಪಹಣಿಯಲ್ಲಿ) ಫಡಾ ಎಂದು ನಮೂದಾಗಿರುತ್ತದೆ. ಭೂ ಮಾಲೀಕರ ಹೆಸರು ಇಲ್ಲದಂತಾಗಿರುತ್ತದೆ. ಎನೋ ಬಿಡಿ ಎಂದು ಸುಮ್ಮನೆ ಕೈಕಟ್ಟಿ ಕೂತರೆ ಆ ಜಮೀನನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಇಲ್ಲವೇ ಅದನ್ನು ಭೂ ರಹಿತರಿಗೆ ಮಂಜೂರು ಸಹ ಮಾಡಬೇಕಾಗುತ್ತದೆ.

ಕಂದಾಯ ಇಲಾಖೆಯ ನಿಯಮದ ಪ್ರಕಾರ ಪಢಾ ಎಂದರೆ, ಕೃಷಿ ಭೂಮಿಗೆ ಕಂದಾಯ ಪಾವತಿಸದೇ ಇದ್ದರೆ, ಭೂ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ನೀಡಿಯೂ ಭೂ ಕಂದಾಯ ಪಾವತಿ ಮಾಡದಿದ್ದರೆ, ಜಮೀನಿನ ಮಾಲೀಕರ ಹೆಸರಿನ ಜಾಗದಲ್ಲಿ ಫಡಾ ಎಂದು ಕಂದಾಯ ಅಧಿಕಾರಿಗಳು ನಮೂದಿಸುತ್ತಾರೆ. ಇದು ಮರಾಠಿ ಪದ. ಫಡಾ ಎಂದರೆ, ಭೂ ಕಂದಾಯ ಪಾವತಿ ಮಾಡದ ಜಮೀನನ ಮಾಲೀಕತ್ವವನ್ನು ಸರ್ಕಾರ ಪಡೆದುಕೊಳ್ಳುತ್ತದೆ. ಫಡಾ ಪ್ರಕ್ರಿಯೆ ಮೂಲಕ ಸದರಿ ಭೂಮಿಯ ಮಾಲೀಕರ ಮಾಲೀಕತ್ವ ಹಕ್ಕು ರದ್ದಾಗುತ್ತದೆ. ಫಡಾ ಎಂದು ನಮೂದಾದ ಭೂಮಿಯನ್ನು ಭು ಮಾಲೀಕರು ಮಾರಲು ಸಾಧ್ಯವಿಲ್ಲ. ಕೃಷಿ ಚಟುವಟಿಕೆ ಕೈಗೊಳ್ಳಲು ಆಗುವುದಿಲ್ಲ. ಈ ಭೂಮಿಯನ್ನು ಸರ್ಕಾರ ಮನಸು ಮಾಡಿದ್ರೆ ಮಾರಾಟ ಮಾಡಿ ಕಂದಾಯ ವಸೂಲಿ ಮಾಡಬಹುದು. ಇದನ್ನೇ ಪಢಾ ಎಂದು ಕರೆಯುತ್ತೇವೆ.

ಪಹಲ್ ಎಂದರೆ ಏನು ? ಫಹಲ್ ಪ್ರಕ್ರಿಯೆ: ಕೃಷಿ ಭೂಮಿಗೆ ಕಂದಾಯ ಪಾವತಿಸದೇ ಅದರ ಮಾಲೀಕತ್ವವನ್ನು ಸರ್ಕಾರ ಫಡಾ ಮೂಲಕ ಪಡೆದುಕೊಳ್ಳುತ್ತದೆ. ಈ ಪಢಾ ರದ್ದು ಪಡಿಸಿ ಮರಳಿ ಜಮೀಗೆ ಪಾವತಿಸಬೇಕಾದ ಕಂದಾಯ ಮತ್ತು ಬಡ್ಡಿ ಪಾವತಿಸಿ ಮರಳಿ ಪಡೆಯುವ ಪ್ರಕ್ರಿಯೆಗೆ ಫಹಲ್ ಎಂದು ಕರೆಯುತ್ತೇವೆ. ಈ ಫಹಲ್ ಕೂಡ ಮರಾಠಿ ಪದವೆ. ಫಹಲ್ ಪ್ರಕ್ರಿಯೆ ಮೂಲಕ ಭೂ ಕಂದಾಯ ಬಾಕಿ ಪಾವತಿಸಿ ಮರಳಿ ಜಮೀನಿನ ಮಾಲೀಕತ್ವ ಪಡೆಯುವ ವಿಧಾನ ಇದಾಗಿದೆ. ಯಾವುದೇ ಕೃಷಿ ಅಥವಾ ಇನ್ನಿತರೆ ಭೂಮಿಗೆ ಕಂದಾಯ ಪಾವತಿಸದೇ ಫಡಾಗೆ ಒಳಗಾಗಿದ್ದರೆ, ಅದನ್ನುಫಹಲ್ ಪ್ರಕಿಯೆ ಮೂಲಕ ಮರಳಿ ಪಡೆಯಬಹುದಾಗಿದೆ.

Exit mobile version