Revenue Facts

Deed of Adoption: ದತ್ತು ಸ್ವೀಕಾರ ಡೀಡ್ ಯಾಕೆ ಮಾಡಿಸಬೇಕು?

Deed of Adoption:  ದತ್ತು ಸ್ವೀಕಾರ ಡೀಡ್ ಯಾಕೆ ಮಾಡಿಸಬೇಕು?

what is Adoption Deed ? Adoption Deed format in Kannada

#Adoption, #Deed of Adoption, #Deed of Adoption format, #Deed of Adoption Registration,

ಬೆಂಗಳೂರು, ಏ. 10: ಮಕ್ಕಳು ಇಲ್ಲದ ದಂಪತಿ ಮಗುವನ್ನು ಕಾನೂನು ಬದ್ಧವಾಗಿ ದತ್ತು ಪಡೆಯುವುದು ಹೇಗೆ ? ಕಾನೂನು ಬದ್ಧವಾಗಿ ದತ್ತು ಪಡೆಯದೇ ಇದ್ದಲ್ಲಿ ಮಗುವಿಗೆ ಭವಿಷ್ಯದಲ್ಲಿ ಏನಾಗುತ್ತದೆ ? ಮಗು ದತ್ತು ಸ್ವೀಕಾರ ಡೀಡ್ ಮಾಡಿಸಿ ನೋಂದಣಿ ಮಾಡಿಸುವ ಪ್ರಕ್ರಿಯೆ ಏನು ? ಈ ಕುರಿತ ಸಮಗ್ರ ಕಾನೂನು ಮಾಹಿತಿ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಮಕ್ಕಳು ಇಲ್ಲದಿರುವ ದಂಪತಿ ಸಂಬಂಧಿಕರ ಅಥವಾ ಪರಿಚಿತರ ಮೂಲಕ ಮಗುವನ್ನು ದತ್ತು ಪಡೆದು ಸಾಕುತ್ತಾರೆ. ಹಿಂದಿನ ಕಾಲದಲ್ಲಿ ಬಾಯಿ ಮಾತಿನಲ್ಲಿ ದತ್ತು ಪಡೆದು ಪೋಷಣೆ ಮಾಡುತ್ತಿದ್ದರು. ಹೀಗೆ ಮಾತುಕತೆ ಮೂಲಕ ಮಗುವನ್ನು ದತ್ತು ಪಡೆದು ಸಾಕಿದರೆ ಅದು ಕಾನೂನು ಬದ್ಧ ದತ್ತು ಸ್ವೀಕಾರ ಆಗುವುದಿಲ್ಲ. ಹೀಗಾಗಿ ಒಂದು ಮಗುವನ್ನು ದುತ್ತು ಸ್ವೀಕರಿಸುವ ಮೊದಲು ಹಲವು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.

ದತ್ತು ಸ್ವಿಕಾರ ಮಾಡುವ ದಂಪತಿ ಮೊದಲು ಮಗು ದತ್ತು ಪಡೆಯಲು ಸಮ್ಮತಿಸಬೇಕು. ದತ್ತು ನೀಡುವ ಮಗುವಿನ ತಂದೆ ತಾಯಿ ದತ್ತು ಕೊಡಲು ಒಪ್ಪಿಗೆ ಸೂಚಿಸಬೇಕು. ಇಬ್ಬರು ದತ್ತು ಸ್ವೀಕಾರಕ್ಕೆ ಒಪ್ಪಿದರೆ ಮಾತ್ರ ಮಗುವನ್ನು ದತ್ತು ಪಡೆಯಬಹುದು.

ಸರ್ಕಾರದಿಂದ ದತ್ತು ಸ್ವೀಕಾರ: ಅನಾಥ ಶಿಶುಗಳನ್ನು ದತ್ತು ಸ್ವೀಕಾರ ಮಾಡಬೇಕಾದರೆ ಮೊದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಮಗು ದತ್ತು ಸ್ವೀಕಾರದ ಬಗ್ಗೆ ಮನವಿಯನ್ನು ಸಲ್ಲಿಸಬೇಕು. ಅನಾಥ ಮಗು ಸಿಕ್ಕಿದಲ್ಲಿ ಅಂತಹ ಮಗುವನ್ನು ದತ್ತು ಸ್ವೀಕಾರ ಮಾಡುವುದಿದ್ದರೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮುಚ್ಚಳಿಕೆ ಬರೆದುಕೊಟ್ಟು ದತ್ತು ಸ್ವೀಕರಿಸಬಹುದು. ಆದರೆ ಈ ವೇಳೆಯೂ ಸಹ ಮಕ್ಕಳ ಕಲ್ಯಾಣ ಸಮಿತಿ ಮತ್ತು ದತ್ತು ಪಡೆಯುವ ಪೋಷಕರ ನಡುವೆ ದತ್ತು ಸ್ವೀಕಾರ ಕಾನೂನು ಪ್ರಕ್ರಿಯೆ ಮಾಡಿಸಲಾಗುತ್ತದೆ. ಮಿಗಿಲಾಗಿ ದತ್ತು ಸ್ವೀಕಾರ ಡೀಡ್ ಮಾಡಿಸಿ ನೋಂದಣಿ ಮಾಡಿಸಲಾಗುತ್ತದೆ.

what is deed of Adoption?

ದತ್ತು ಸ್ವೀಕಾರ ಡೀಡ್ ಎಂದರೆ ಮಗುವನ್ನು ದತ್ತು ಪಡೆಯುವರ ಹಾಗೂ ದತ್ತು ಕೊಡುವರ ನಡುವಿನ ವ್ಯವಹಾರಿಕ ದಾಖಲೆಪತ್ರ. ಈ ಅಡಪ್ಷನ್ ಡೀಡ್ ಮಾಡಿಸುದರಿಂದ ದತ್ತು ಸ್ವೀಕಾರಕ್ಕೆ ಒಳಗಾಗುವ ಮಗುವಿನ ಪೋಷಣೆ, ಪಾಲನೆ ಮಾಡುವ ಹಕ್ಕುಗಳು ಸೃಷ್ಟಿಯಾಗುತ್ತವೆ. ದತ್ತು ಸ್ವೀಕಾರಕ್ಕೆ ಒಳಗಾಗುವ ಮಗುವಿಗೆ ಇರುವ ಹಕ್ಕುಗಳನ್ನು ತಿಳಿಸುವ ಕಾನೂನು ದಾಖಲೆ. ಜನ್ಮ ನೀಡಿದ ಪೋಷಕರಿಂದ ಮಗುವಿಗೆ ಸಿಗುವ ಎಲ್ಲಾ ಹಕ್ಕುಗಳು ದತ್ತು ಸ್ವೀಕರಿಸಿದ ಪೋಷಕರಿಂದಲೂ ಮಗು ಪಡೆಯಬಹುದಾಗಿದೆ.

why is Deed of Adoption required ?

ದತ್ತು ಸ್ವೀಕಾರಕ್ಕೆ ಒಳಪಡುವ ಮಗುವನ್ನು ಪೋಷಣೆ ಮಾಡುವರು ತಮ್ಮ ಕರ್ತವ್ಯದಿಂದ ವಿಮುಕ್ತಿಯಾಗಿ ಅನ್ಯಾಯ ಮಾಡಿದಾಗ ಈ ಡೀಡ್ ಅಧರಿಸಿ ದತ್ತು ಮಗು ಕಾನೂನಾತ್ಮಕವಾಗಿ ಪರಿಪಾರ ಪಡೆಯಲು ಈ ಡೀಡ್ ಸಹಕಾರಿಯಾಗಲಿದೆ. ಈ ದತ್ತು ಸ್ವೀಕಾರ ಡೀಡ್ ನ್ನು ಹಿಂದು ದತ್ತು ಸ್ವೀಕಾರ ಹಾಗೂ ನಿರ್ವಹಣೆ ಕಾಯ್ದೆ ಅಡಿ ನೋಂದಣಿ ಮಾಡಿಸಲಾಗುತ್ತದೆ. ದತ್ತು ಮಗು ತನ್ನ ದತ್ತು ಪಾಲಕರಿಂದ ಅಸ್ತಿ, ಪ್ರೀತಿ ವ್ಯಾತ್ಸಲ್ಯದಿಂದ ವಂಚಿತವಾದ ಸಂದರ್ಭದಲ್ಲಿ ಆ ಹಕ್ಕುಗಳನ್ನು ಪಡೆಯಲು ದತ್ತು ಸ್ವಿಕಾರ ಪತ್ರ ನೆರವಿಗೆ ಬರುತ್ತದೆ.

what should a Deed of Adoption cover ? :ದತ್ತು ಸ್ವಿಕಾರ ಡೀಡ್ ನಲ್ಲಿ ಏನೆಲ್ಲಾ ಅಂಶಗಳು ಇರಬೇಕು?:

ದತ್ತು ಸ್ವಿಕಾರ ಡೀಡ್ ನಲ್ಲಿ ದತ್ತು ಪಡೆಯುವ ಪಾಲಕರ ಹೆಸರು ವಿಳಾಸ, ವಯಸ್ಸು ವೈಯಕ್ತಿಕ ವಿವರಗಳು ಇರಬೇಕು. ಇದರ ಜತೆಗೆ ಮಗುವಿನ ಸ್ವಂತ ತಂದೆ ತಾಯಿಯ ವಿವರಗಳು ಉಲ್ಲೇಖವಾಗಿರಬೇಕು. ದತ್ತು ಸ್ವೀಕಾರಕ್ಕೆ ಒಳಗಾಗುತ್ತಿರುವ ಮಗುವಿನ ಹೆಸರು, ಇದ್ದರೆ, ವಯಸ್ಸು, ಜನ್ಮ ದಿನಾಂಕ, ಮುಗುವಿನ ಗುರುತಿನ ವಿವರ ಉಲ್ಲೇಖಿಸಬೇಕು. ಇದರ ಜತೆಗೆ ಮಗುವನ್ನು ದತ್ತು ನೀಡಲು ಪೋಷಕರು ಸಮ್ಮತಿಸಿರುವ ಅಂಶಗಳ ಜತೆಗೆ ದತ್ತು ಸ್ವೀಕಾರ ಮಾಡುವ ಪೋಷಕರ ಸಮ್ಮತಿಯನ್ನು ವಿವರಿಸಿರಬೆಕು. ದತ್ತಕ ಪತ್ರದಲ್ಲಿ ಪೋಷಕರು ಸಹಿ ಮಾಡಿರಬೇಕು. ಇಬ್ಬರು ಸಾಕ್ಷಿಗಳು ಸಹ ವಿಳಾಸ ಸಮೇತ ಸಹಿ ಮಾಡಿರಬೇಕು.

Documents required for Adoption Deed:

ದತ್ತು ಸ್ವೀಕಾರ ಪತ್ರ ಮಾಡಿಸುವ ಸಂದರ್ಭದಲ್ಲಿ ಈ ಕೆಳಕಂಡ ದಾಖಲೆಗಳನ್ನು ಹಾಜರುಪಡಿಸಬೇಕು. ದತ್ತಕ ಪೋಷಕರ ಮತ್ತು ನೈಸರ್ಗಿಕ ದಂಪತಿಯ ಗುರುತಿನ ಚೀಟಿ ದಾಖಲೆಗಳನ್ನು ಹಾಜರು ಪಡಿಸಿರಬೇಕು. ಜತೆಗೆ ದತ್ತಕ ಮಗುವಿನ ಜನ ಪ್ರಮಾಣ ಪತ್ರವನ್ನು ಹಾಜರು ಪಡಿಸಬೇಕು. ಅ ಜನನ ಪ್ರಮಾಣ ಪತ್ರದ ಅಂಶಗಳನ್ನು ಡೀಡ್ ನಲ್ಲಿ ಉಲ್ಲೇಖಿಸಬೇಕು.

Adoption Deed Registration:

Deed of Adoption format

ದತ್ತು ಸ್ವೀಕಾರ ಕುರಿತ ಡೀಡ್ ರಚಿಸಿದ ಬಳಿಕ ದತ್ತು ನೀಡುವ ಪೋಷಕರು ಹಾಗೂ ಪಡೆಯುತ್ತಿರುವ ಪೋಷಕರು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಡೀಡ್ ನನ್ನು ನೋಂದಣಿ ಮಾಡಬಹುದು. ನೋಂದಣಿ ಮಾಡುವ ಈ ಡೀಡ್ ಗೆ ಕಾನೂನು ಮಾನ್ಯತೆ ಇರುತ್ತದೆ. ಭವಿಷ್ಯದಲ್ಲಿ ದತ್ತು ಮಗು ತನ್ನ ಹಕ್ಕುಗಳಿಂದ ವಂಚನೆಗೆ ಒಗಾದಲ್ಲಿ ಈ ಡೀಡ್ ಮೂಲಕ ಕಾನೂನು ಸಮರ ಸಾರಿ ಪಡೆಯಲು ಸಹಕಾರಿಯಾಗಲಿದೆ. ಭವಿಷ್ಯದಲ್ಲಿ ಮಗುವನ್ನು ದತ್ತು ಪಡೆದಿಲ್ಲ ಎಂದು ನಿರಾಕರಿಸಲು ಸಾಧ್ಯವಿಲ್ಲ. ಹೀಗಾಗಿ ಮಗುವನ್ನು ದತ್ತು ಸ್ವೀಕಾರ ಪ್ರಕ್ರಿಯೆ ವೇಳೆ ದತ್ತು ಸ್ವೀಕಾರ ಪತ್ರವನ್ನು ಕಡ್ಡಾಯವಾಗಿ ಮಾಡಿಸುವುದು ಒಳಿತು. ದತ್ತು ಸ್ವೀಕಾರ ಡೀಡ್ ಮಾಡಿಸುವ ಸಂಬಂಧ ಕಾನೂನು ಸಲಹೆ, ನೋಂದಣಿ ಕುರಿತು ಗೊಂದಲ ಇದ್ದರೆ, www.revenuefacts.com ಸಂಪರ್ಕಿಸಿ.

 

Exit mobile version