Revenue Facts

ಐಟಿಆರ್ ಸಲ್ಲಿಸಲು ಯಾವ ದಾಖಲೆಗಳು ಬೇಕು?

ವ್ಯಕ್ತಿಯೊಬ್ಬರ ಆದಾಯದ ಕುರಿತು ಐಟಿಆರ್‌ಗೆ ಸಮನಾದ ದೃಢೀಕರಣ ಮತ್ತೊಂದಿಲ್ಲ. ಐಟಿಆರ್‌ ಪ್ರಕ್ರಿಯೆ ಪೂರ್ಣಗೊಂಡು, ಭಾರತ ಸರ್ಕಾರದಿಂದಲೇ ಆದಾಯದ ಸಂಬಂಧ ಪ್ರಮಾಣಪತ್ರ ಸಿಕ್ಕಂತಾಗುತ್ತದೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ವ್ಯಕ್ತಿಯ ಆದಾಯದ ಕುರಿತು ಸಂಪೂರ್ಣ ಮಾಹಿತಿ ಐಟಿಆರ್‌ನಲ್ಲಿ ಲಭ್ಯವಾಗುತ್ತದೆ. ಆ ಆದಾಯ ಪ್ರಮಾಣ ಪತ್ರವು ಹಲವು ಸಂದರ್ಭಗಳಲ್ಲಿ ಬಳಕೆಗೆ ಬರುತ್ತದೆ.ವಾರ್ಷಿಕವಾಗಿ ನೀವು ಎಷ್ಟು ಆದಾಯವನ್ನು ಪಡೆಯುತ್ತೀರಿ ಎಂಬುವುದನ್ನು ಅವಲಂಬಿಸಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಸಂಬಳ, ವ್ಯಾಪಾರ ಲಾಭ, ಹೂಡಿಕೆ ಲಾಭ ಇತ್ಯಾದಿಯನ್ನು ಅವಲಂಭಿಸಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಲಾಗುತ್ತದೆ.

ಐಟಿಆರ್ (ITR) ಸಲ್ಲಿಸುವಾಗ ಯಾವೆಲ್ಲ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

*ಜೀವ ವಿಮೆ ಪಾವತಿ ರಸೀದಿಗಳು
*ನೋಂದಣಿ ಶುಲ್ಕ ಪಾವತಿಸಿದ ರಸೀದಿ
*ಪ್ರಾವಿಡೆಂಟ್ ಫಂಡ್ (ಪಿಎಫ್) ಕೊಡುಗೆಗೆ ಸಂಬಂಧಿಸಿದ ದಾಖಲೆಗಳು
*ಗೃಹ ಸಾಲದ ಮರುಪಾವತಿಯ ವಿವರ
*ಷೇರು ಮಾರುಕಟ್ಟೆ ಸಂಯೋಜಿತ ಹೂಡಿಕೆ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳ
*ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್​ಪಿಎಸ್) ಹೂಡಿಕೆ ಮಾಡುತ್ತಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು.

ಐಟಿಆರ್ ಫೈಲ್ ಮಾಡುವಾಗ ಯಾವೆಲ್ಲ ದಾಖಲೆಗಳು ಬೇಕು?

ಐಟಿಆರ್ ಫೈಲ್ ಮಾಡುವಾಗ ಪ್ರತಿಯೊಬ್ಬರೂ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರ ಒದಗಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಅನ್ವಯ ಆಧಾರ್ ವಿವರ ಒದಗಿಸುವುದು ಕಡ್ಡಾಯವಾಗಿದೆ.

ವೇತನ ಪಡೆದ ದಾಖಲೆ
ಸಂಬಳವನ್ನು ಪಡೆದ ಸಂದರ್ಭದಲ್ಲಿ ನಮಗೆ ಲಭ್ಯವಾಗುವ ಸ್ಯಾಲರಿ ಸ್ಲಿಪ್ ಅನ್ನು ನಾವು ಹೊಂದಿರುವುದು ಅತೀ ಅಗತ್ಯವಾಗಿದೆ. ಮೂಲ ವೇತನ, ಡಿಎ, ಟಿಡಿಎಸ್ ಮೊತ್ತ, ಎಚ್‌ಆರ್‌ಎ, ಟಿಎ, ಸಾಮಾನ್ಯ ಕಡಿತ ಎಲ್ಲವೂ ಈ ಸ್ಯಾಲರಿ ಸ್ಲಿಪ್‌ನಲ್ಲಿ ಇರಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಅನ್ನು ನಾವು ಫೈಲ್ ಮಾಡಲು ಈ ದಾಖಲೆ ಅತ್ಯಗತ್ಯವಾಗಿದೆ.

ಫಾರ್ಮ್ 16
ವೇತನದಾರ ವರ್ಗಕ್ಕೆ ಐಟಿಆರ್ ಫೈಲ್ ಮಾಡುವಲ್ಲಿ ಅತಿಮುಖ್ಯವಾಗಿ ಬೇಕಾಗುವ ದಾಖಲೆ ಫಾರ್ಮ್ 16. ಇದು ಉದ್ಯೋಗದಾತ ಕಂಪನಿಗಳು ಉದ್ಯೋಗಿಯ ವೇತನದಿಂದ ಟಿಡಿಎಸ್ ಕಡಿತವಾಗಿರುವುದಕ್ಕೆ ಸಂಬಂಧಿಸಿದಂತೆ ನೀಡುವ ಪ್ರಮಾಣಪತ್ರವಾಗಿದೆ. ಕಡಿತವಾಗಿರುವ ಟಿಡಿಎಸ್​ ಅನ್ನು ರಿಕ್ಲೇಮ್ ಮಾಡಬೇಕಿದ್ದರೂ ಇದು ಅಗತ್ಯವಾಗಿದೆ.

ಆರೋಗ್ಯ ವಿಮೆ ಪ್ರೀಮಿಯಂ ರಸೀದಿ
ಆರೋಗ್ಯ ವಿಮೆ ಪ್ರೀಮಿಯಂ ರಸೀದಿ ಕೂಡ ಐಟಿಆರ್ ಸಲ್ಲಿಕೆ ವೇಳೆ ಬೇಕಾಗುತ್ತದೆ. ಇದಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಗರಿಷ್ಠ 25,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ತಂದೆ-ತಾಯಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಅವರಿಗೂ ಆರೋಗ್ಯ ವಿಮೆ ಮಾಡಿಸಿದ್ದಲ್ಲಿ 50,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

Exit mobile version