Revenue Facts

ಟೈಟಲ್ ಡೀಡ್‌ಗಳು ಎಂದರೇನು? ವ್ಯಾಜ್ಯ ಮುಕ್ತ ಆಸ್ತಿ ಖರೀದಿಗೆ ಇದು ಹೇಗೆ ಮುಖ್ಯ?

ಬಹುತೇಕರು ಜೀವದದಲ್ಲಿ ಒಂದು ಆಸ್ತಿ ಮಾಡುವ ಗುರಿ ಹೊಂದಿರುತ್ತಾರೆ. ಆದರೆ, ಹೀಗೆ ಖರೀದಿಸಿದ ಆಸ್ತಿ ಯಾವುದೇ ಕಾನೂನಾತ್ಮಕ ಅಡಚಣೆಗಳು ಇಲ್ಲದೆ ತಮ್ಮದಾಗಬೇಕು ಎಂದು ಬಯಸುತ್ತಾರೆ. ಹಾಗೆ ಬಯಸುವವರು ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ಅದರಲ್ಲಿ ಒಂದು ಪ್ರಮುಖವಾದುದು ಟೈಟಲ್‌ ಡೀಡ್‌.

ಟೈಟಲ್ ಡೀಡ್ ಎಂದರೆ ಆಸ್ತಿ ಅಥವಾ ಜಮೀನಿನ ಮೂಲ ಪತ್ರಗಳು. ಆಸ್ತಿ ಮಾರಾಟ ಮಾಡುವಾಗ ಕೊಡುವವರು ಮತ್ತು ತೆಗೆದುಕೊಳ್ಳುವವರು ಕ್ರಯದ ಕಾರಾರು ಪತ್ರವನ್ನು ಮಾಡಿಕೊಳ್ಳುತ್ತಾರೆ. ಸಾಧಾರಣವಾಗಿ ಕ್ರಯದ ಕರಾರು ಪತ್ರ ಮಾಡಿಕೊಂಡ ದಿನದಿಂದ ಮೂರು ತಿಂಗಳ ಒಳಗಾಗಿ ಕ್ರಯಪತ್ರ ಮಾಡುವ ಬಗ್ಗೆ ಕ್ರಯದ ಕರಾರಿನಲ್ಲಿ ಉಲ್ಲೇಖ ಮಾಡಿರುತ್ತಾರೆ.

ನಂತರ ಖರೀದಿದಾರರು ಸಾಲ ಪಡೆಯುವುದಕ್ಕಾಗಲೀ ಅಥವಾ ನುರಿತ ನ್ಯಾಯವಾದಿಯವರಿಂದ ಆಸ್ತಿಯ ನೈಜತೆ ಬಗ್ಗೆ ಪರಿಶೀಲನೆ ಮಾಡುತ್ತಾರೆ. ಕೆಲವರು ಆಸ್ತಿ ಪತ್ರಗಳು ಎಲ್ಲಿ ನೀಡಿರುತ್ತಾರೆ ಅಲ್ಲೇ ಹೋಗಿ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿ ನೈಜತೆಯನ್ನು ಪರಿಶೀಲಿಸುವ ಕ್ರಮವೂ ಇದೆ. ಈ ಮಧ್ಯೆ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರ ಕೊಡುವವರು ಅವರ ಫೈಲಿನಲ್ಲಿ ಇಡುವ ಮೂಲ ದಾಖಲೆಗಳನ್ನು ಸಹ ಪರಿಶೀಲಿಸುವ ಕ್ರಮವಿದೆ. ಇದನ್ನೇ ಟೈಟಲ್ ಡೀಡ್ ಪರಿಶೀಲನೆ ಎಂದು ಕರೆಯುತ್ತಾರೆ.

ಟೈಟಲ್ ಡೀಡ್ ಪರಿಶೀಲನೆ ಯಾಕೆ ಮಾಡಬೇಕು
ಟೈಟಲ್ ಡೀಡ್ ಪರಿಶೀಲನೆ ಯಾಕೆ ಮಾಡಬೇಕು ಎಂದರೆ ಕೆಲವು ಬ್ಯಾಂಕ್‌ಗಳು ಅಥವಾ ವ್ಯಕ್ತಿಗಳು ಸಾಲ ನೀಡುವಾಗ ಮೂಲ ಟೈಟಲ್ ಡೀಡ್‌ಗಳನ್ನು ಒತ್ತೆ ಇಟ್ಟುಕೊಂಡು ಹಣ ಕೊಡುತ್ತಾರೆ. ಕೆಲವೊಮ್ಮೆ ನೋಂದಣಿ ಮಾಡಿಸಿದರೆ ಅದು ಖರೀದಿದಾರರ ಗಮನಕ್ಕೆ ಬರುತ್ತದೆ. ನೋಂದಣಿ ಮಾಡಿಸದೆ ಇದ್ದರೆ ಕೊಡುವವರು ಹೇಳಿದರೆ ಮಾತ್ರ ಗೊತ್ತಾಗುತ್ತದೆ.

ಆದ್ದರಿಂದ ಮುಂದಿನ ಕಾನೂನಾತ್ಮಕ ಅಡೆತಡೆ, ತೊಂದರೆಗಳನ್ನು ತಡೆಯಲು ಟೈಟಲ್ ಪರಿಶೀಲನೆ ಅತೀ ಅಗತ್ಯ. ಇದನ್ನು ಮಾಡುವುದರಿಂದ ಖರೀದಿದಾರರಿಗೆ ವ್ಯಾಜ್ಯ ಮುಕ್ತರಾಗುತ್ತಾರೆ. ಕ್ರಯಪತ್ರ ನೋಂದಣಿ ಆದ ನಂತರ ಎಲ್ಲಾ ಮೂಲ ದಾಖಲೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

Exit mobile version