ಎಷ್ಟೇ ಹಣ ಸಂಪಾದನೆ ಮಾಡಿದ್ರೂ ಕೆಲವೊಮ್ಮೆ ಒಂದು ರೂಪಾಯಿ ಕೂಡ ಉಳಿತಾಯ ಅಗಿರಲ್ಲ. ಹಣ ಬರುವ ವೇಳೆಗೆ ಹತ್ತಾರು ಸಮಸ್ಯೆಗಳು ಎದುರಾಗಿರುತ್ತವೆ. ಒಂದು ರೂಪಾಯಿ ಕೂಡ ಕೈಯಲ್ಲಿ ಉಳಿಯುವುದಿಲ್ಲ. ಹಣ ಕೈಯಲ್ಲಿ ಉಳಿಯದೇ ಇರುವುದಕ್ಕೆ ಕಾರಣ ಜಾತಕದಲ್ಲಿನ 12 ನೇ ಮನೆಯ ಕಾರಣವಾಗಿರುತ್ತದೆ ಎನ್ನುತ್ತದೆ ಜೋತಿಷ್ಯ ವಾಸ್ತು ಶಾಸ್ತ್ರ.
ಒಬ್ಬ ವ್ಯಕ್ತಿಯ ಗ್ರಹಗಳ ಪರಿಸ್ಥಿತಿಯು ಹಿಂದಿನ ಜನ್ಮದಲ್ಲಿ ಆತ್ಮಗಳು ಮಾಡಿರುವ ಕರ್ಮದ ಮುಖೇನ ಈ ಜನ್ಮದಲ್ಲಿ ಅನುಭವಿಸಿರುತ್ತಾರೆ. ಹಣ ನಿಲ್ಲದೇ ಇರಲು ಹಿಂದಿನ ಜನ್ಮದಲ್ಲಿ ಸಂಬಳ ಕೊಡುವ ಮೇಲಾಧಿಕಾರಿಗಳಿಗೆ ನಿಷ್ಠೆ ಇಲ್ಲದೇ ಇರುವ ಕಾರಣ ಈ ಜನ್ಮದಲ್ಲಿ ಅದು ಅನುಭವಿಸಿರುತ್ತಾರೆ. ಇಲ್ಲವೇ ಹಿಂದಿನ ಜನ್ಮದಲ್ಲಿ ತಂದೆ ತಾಯಿ ಬಳಿ ಹಣ ಕದ್ದಿರುವುದು, ಇಲ್ಲವೇ ಹಣಕ್ಕಾಗಿ ಸುಳ್ಳು ಹೇಳಿರುವುದು, ಸ್ನೇಹಿತರಿಗೆ ಹಣ ಮೋಸ ಮಾಡಿದ್ದ ಪಕ್ಷದಲ್ಲಿ ಅದು ಈ ಜನ್ಮದಲ್ಲಿ ಸಮಸ್ಯೆ ಎದುರಿಸಿರುತ್ತಾರೆ.
ಈ ರೀತಿಯ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜ್ಯೋತಿಷ್ಯ ವಾಸ್ತು ಶಾಸ್ತ್ರದಲ್ಲಿ ಅವಕಾಶವಿದೆ. ಇದಕ್ಕೆ ನಿತ್ಯ ಲಕ್ಷ್ಮೀ ಅಥವಾ ವಾಸ್ತು ಲಕ್ಷ್ಮೀಯ ಕಾರಣ ಕರ್ತರಾಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಮತ್ತು ಶನಿ ಗ್ರಹಗಳು ಈ ರೀತಿಯ ದೋಷಗಳಿಗೆ ಕಾರಣಕರ್ತರಾಗಿರುತ್ತಾರೆ. ಇದಕ್ಕೆ ಪರಿಹಾರವಾಗಿ ಮನೆಯಲ್ಲಿ ಈ ಕೆಳಗಿನಂತೆ ಪೂಜೆ ಮಾಡಿದ್ರೆ ಪರಿಹಾರ ಸಿಗುತ್ತದೆ.
ಮನೆಯಲ್ಲಿ ತುಳಸಿ ಗಿಡ ( ಲಿವಿಂಗ್ ಗಾಡೆಸ್ ) ವನ್ನು ದೇವ ಮೂಲೆಯಲ್ಲಿ (ಈಶಾನ್ಯ ಭಾಗದಲ್ಲಿ) ಇಡಬೇಕು.
ಪ್ರತಿ ದಿನ ಅದಕ್ಕೆ ನೀರು ಹಾಕಿ ಪೂಜೆ ಮಾಡಬೇಕು.
ಪ್ರತಿ ದಿನ ತುಳಸಿ ಗಿಡಕ್ಕೆ ನೈವೇದ್ಯ ಕೊಡಬೇಕು.
ಭಕ್ತಿಯಿಂದ ದೀಪ ಹಚ್ಚಿ, ಅಕ್ಷತೆ, ಕುಂಕುಮ, ಅರಶಿನ, ಉಪ್ಪು ಹಾಕಿ ಪೂಜೆ ಮಾಡಬೇಕು.
ಪೂಜೆ ಮಾಡುವಾಗ ಈ ಮಂತ್ರವನ್ನು 108 ಸಲ ಪೂಜಾ ಕಾಲದಲ್ಲಿ ಹೇಳಬೇಕು.
ಮಂತ್ರ
ಓಂ.. ರೀಂ ಶ್ರೀಂ
ಕ್ಲೀಂ ಶ್ರೀಂ
ಲಕ್ಷ್ಮೀ, ಆಗಚ್ಯ, ಆಗಚ್ಯ
ಮಮ ಮಂದಿರೆ, ತೀಸ್ತಾ, ತೀಸ್ತಾ ಸ್ವಾಹಃ
ಈ ಮಂತ್ರ ಪಠಣೆ ಮಾಡಿ ಪ್ರತಿ ನಿತ್ಯ ತುಳಸಿ ಗಿಡಕ್ಕೆ ಪೂಜೆ ಮಾಡಿದ್ರೆ ದುಡಿದ ಹಣ ಉಳಿತಾಯವಾಗುತ್ತದೆ ಎಂದು ಜೋತಿಷ್ಯ ವಾಸ್ತು ಶಾಸ್ತ್ರ ಹೇಳುತ್ತದೆ.




