ಮನೆ ನಿರ್ಮಾಣ ಮಾಡುವಾಗ ಬಾಲ್ಕನಿಯನ್ನು ಯಾವ ದಿಕ್ಕಿನಲ್ಲಿಟ್ಟರೆ ಸೂಕ್ತ

0
335

ಬೆಂಗಳೂರು, ಫೆ. 24 : ಬಾಲ್ಕನಿ ಅನ್ನು ಇತ್ತೀಚೆಗೆ ಮನೆ ಕಟ್ಟುವವರು ಎಲ್ಲರೂ ಅಳವಡಿಸಿಕೊಳ್ಳುತ್ತಾರೆ. ಬೆಡ್ ರೂಮ್, ಅಡುಗೆ ಮನೆ ಎಲ್ಲಾ ಕಡೆಗೂ ಬಾಲ್ಕನಿಯನ್ನು ಅಳವಡಿಸುತ್ತಾರೆ. ಅಪಾರ್ಟ್ ಮೆಂಟ್ ಗಳಲ್ಲಿ ಮನೆಯ ಹೊರಗೆ ನಿಲ್ಲಲು ಹಾಗೂ ಗಾಳಿ ಬೆಳಕಿಗಾಗಿ ಬಾಲ್ಕನಿ ಯನ್ನು ಕಟ್ಟುವ ಕಲ್ಚರ್ ಬಂದಿದೆ. ಈಗ ಬಾಲ್ಕನಿಗಳಲ್ಲಿ ಓಪನ್ ಬಾಲ್ಕನಿಗಳು ಹೆಚ್ಚಾಗಿವೆ. ಬಾಲಕ್ನಿಗಳಲ್ಲಿ ಎರಡು ರೀತಿ ಇರುತ್ತವೆ. ಒಂದು ಓಪನ್ ಬಾಲ್ಕನಿಗಳು. ಇದು ಎರಡರಿಂದ ಮೂರು ಅಡಿ ಗೋಡೆಗಳನ್ನು ಕಟ್ಟಲಾಗುತ್ತದೆ. ಇದನ್ನು ಖಾಲಿ ಬಿಟ್ಟಿರಲಾಗುತ್ತದೆ. ಇನ್ನು ಕ್ಲೋಸ್ಡ್ ಬಾಲ್ಕನಿ. ಇದರ ಅಗತ್ಯ ಎಲ್ಲಿರಬೇಕು. ಓಪನ್ ಬಾಲ್ಕನಿ ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನು ನೋಡೋಣ.

ಬಾಲ್ಕನಿಯನ್ನು ದಕ್ಷಿಣ, ಪೂರ್ವ, ಉತ್ತರ ಹಾಗೂ ಪಶ್ಚಿಮ ನಾಲ್ಕೂ ದಿಕ್ಕಿನಲ್ಲಿ ಇರಬಹುದು. ಪಶ್ಚಿಮ ಹಾಗೂ ದಕ್ಷಿಣದಲ್ಲಿಡುವ ಬಾಲ್ಕನಿಯನ್ನು ಮುಚ್ಚಿರಬೇಕು. ಮೂರರಿಂದ ನಾಲ್ಕು ಅಡಿ ಎತ್ತರಕ್ಕೆ ಗೋಡೆಯನ್ನ ಕಟ್ಟಿದ್ದರೂ, ಬಾಲ್ಕನಿ ಪೂರ್ತಿ ಗ್ರಿಲ್ ಹಾಕಿ ಮುಚ್ಚ ಬೇಕಾಗುತ್ತದೆ. ಇನ್ನು ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಓಪನ್ ಆಗಿರುವಂತಹ ಬಾಲ್ಕನಿಯನ್ನು ಕೂಡ ಇಟ್ಟುಕೊಳ್ಳಬಹುದು. ಇನ್ನು ಇದರಲ್ಲಿ ಗಮನಿಸಬೇಕಾದ ವಿಚಾರವೂ ಒಂದಿದೆ. ಆದರೆ, ಈಗ ಕೆಲವರು ಬಾಲ್ಕನಿಗಳನ್ನು ಎಕ್ಸ್ ಟೆನ್ಷನ್ ನಲ್ಲಿ ಕೊಡುತ್ತಾರೆ. ಈಗಾಗಲೇ ಹೇಳಿದಂತೆ ಮನೆಯನ್ನು ಎಕ್ಸ್ ಟೆನ್ಷನ್ ಮಾಡಬಹುದು.

ಅದರಲ್ಲೂ ಪೂರ್ವ ಈಶಾನ್ಯ ಅಥವಾ ಉತ್ತರ ಈಶಾನ್ಯ ದಿಕ್ಕಿನಲ್ಲಿ ಬಾಲ್ಕನಿಯನ್ನು ಇಟ್ಟರೆ ಅದು ಅಶುಭವಲ್ಲ. ಆದರೆ, ಇನ್ನು ಬೇರೆ ಯಾವ ದಿಕ್ಕಿನಲ್ಲೇ ಆದರೂ ಆದಷ್ಟು ಮನೆಯನ್ನು ಹೆಚ್ಚಿಸದಂತೆ ಇರಬೇಕು. ಯಾಕೆಂದರೆ ಬಾಲ್ಕನಿಯನ್ನು ಹೆಚ್ಚಿಸದಂತೆ ನೋಡಿಕೊಳ್ಳಬೇಕು. ಯಾಕೆಂದರೆ ಅದು ಅಶುಭ ಫಲಗಳನ್ನು ಕೊಡುತ್ತದೆ. ಇನ್ನು ಕೆಲವರು ಅಡುಗೆ ಮನೆಗೆ ಯುಟಿಲಿಟಿಯನ್ನು ಕೂಡ ಎಕ್ಸ್ ಟೆಂಡ್ ಮಾಡುತ್ತಾರೆ. ಆದರೆ, ಇದರಿಂದ ಮನೆಯ ವಾಸ್ತುವಿಗೆ ಸಮಸ್ಯೆ ಆಗುತ್ತದೆ. ಆದಷ್ಟು ಮನೆಯ ಮೂಲೆಗಳನ್ನು ಕಡಿತಗೊಳಿಸದಂತೆ ನೋಡಿಕೊಳ್ಳಬೇಕು. ಇದರಿಂದ ಮನೆಯ ವಾಸ್ತು ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು.

ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಆದಷ್ಟು ಮುಚ್ಚಿದ ಬಾಲ್ಕನಿಗಳು ಇರಬೇಖು. ಹಾಗೆಯೇ ಈ ದಿಕ್ಕುಗಳಲ್ಲಿ ಮನೆಯ ಭಾಗವನ್ನು ಹೆಚ್ಚಿಸದಂತೆ ನೋಡಿಕೊಳ್ಳಬೇಕು. ಪೂರ್ವ, ಈಶಾನ್ಯ ದಿಕ್ಕಿನಲ್ಲಿ ಮನೆಯನ್ನು ಸ್ವಲ್ಪ ಹೆಚ್ಚಿಸಿದರೂ ಸಮಸ್ಯೆ ಆಗುವುದಿಲ್ಲ. ಇದರಿಂದ ಶುಭ ಹಾಗೂ ಅಶುಭ ಎರಡೂ ಫಲಗಳು ಇರುವುದಿಲ್ಲ. ಆದರೆ, ಬೇರೆ ದಿಕ್ಕಿನಲ್ಲಿ ಮನೆಯನ್ನು ಹೆಚ್ಚಿಸಿದರೆ ಅಶುಭ ಫಲಗಳು ಇರುತ್ತವೆ. ಹಾಗಾಗಿ ಯಾವ ದಿಕ್ಕಿನಲ್ಲಿ ಬಾಲ್ಕನಿ, ಯುಟಿಲಿಟಿಯನ್ನು ಇಡುತ್ತಿದ್ದೇವೆ ಎಂಬುದನ್ನು ಆದಷ್ಟು ಗಮನದಲ್ಲಿಟ್ಟುಕೊಳ್ಳಬೇಕು.