#UPI PayNow #India’s #UPI # available # Singapore
ಹೊಸದಿಲ್ಲಿ: ಕ್ಷಣದಲ್ಲಿ ಹಣ ಪಾವತಿ, ವರ್ಗಾವಣೆಗೆ ಭಾರತದಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ/ UPI) ಬಳಕೆಯಲ್ಲಿದೆ. ಇದೇ ವ್ಯವಸ್ಥೆಯ ಆಧಾರದ ಮೇಲೆ ಭೀಮ್, ಗೂಗಲ್ ಪೇ, ಫೋನ್ ಪೇ, ಪೇಟಿಎಂ ರೀತಿಯ ಅಪ್ಲಿಕೇಷನ್‌ಗಳ ಮೂಲಕ ಡಿಜಿಟಲ್ ಪಾವತಿ (Digital Payment) ಸರಳಗೊಂಡಿದೆ. ಭಾರತಕ್ಕೆ (India) ಸೀಮಿತವಾಗಿದ್ದ ಈ ವ್ಯವಸ್ಥೆಯು ಈಗ ಸಿಂಗಾಪುರದೊಂದಿಗೆ (Singapore) ಸಂಪರ್ಕ ಸಾಧಿಸಿದೆ,ಕಳೆದ ವರ್ಷದ ಫೆಬ್ರುವರಿಯಲ್ಲಿ (2023) ಯುಪಿಐ ಮತ್ತು ಪೇ ನೌ ನಡುವೆ ಕ್ರಾಸ್ ಬಾರ್ಡರ್ ಕನೆಕ್ಟಿವಿಟಿ ಯೋಜನೆಯನ್ನು ಸಿಂಗಾಪುರ ಪ್ರಧಾನಿ ಲೀ ಸಿಯೆನ್ ಲೂಂಗ್ ಮತ್ತು ನರೇಂದ್ರ ಮೋದಿ ಆರಂಭಿಸಿದ್ದರು. ಇದು ಈಗ ಸಾಕಾರಗೊಂಡಿದೆ.ಎಕ್ಸಿಸ್ ಬ್ಯಾಂಕ್, ಡಿಬಿಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ಆ್ಯಪ್ಗಳಲ್ಲೂ ಈ ಸೌಲಭ್ಯ ಇದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಹೇಳಿಕೆಯಲ್ಲಿ ತಿಳಿಸಿದೆ.ಹಾಗೆಯೇ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್ಗಳೂ ಕೂಡ ಪೇನೌಗೆ ಖಾತೆಗಳನ್ನು ಲಿಂಕ್ ಮಾಡಬಹುದು.ಯುಪಿಐ ಬಳಕೆದಾರರ ನಡುವೆ ರಿಯಲ್ ಟೈಮ್ನಲ್ಲಿ ಹಣ ವರ್ಗಾವಣೆ ಆಗುತ್ತದೆ. ಹಾಗೆಯೇ, ಯುಪಿಐ ಮತ್ತು ಪೇನೌ ಮೂಲಕ ನಡೆಯುವ ಹಣ ವರ್ಗಾವಣೆ ಕೆಲವೇ ಕ್ಷಣಗಳಲ್ಲಿ ಪೂರ್ಣಗೊಳ್ಳುತ್ತದೆ