Revenue Facts

Udyog Aadhaar : ಉದ್ಯೋಗ್ ಆಧಾರ್ ಉದ್ಯೋಗ ಆಧಾರ್ ಎಂದರೇನು? ಉದ್ಯೋಗ ಆಧಾರ್‌ನ ಪ್ರಯೋಜನಗಳೇನು

ಬೆಂಗಳೂರು;ಆಧಾರ್ ಕಾರ್ಡ್ ಎಂಬುವುದು ಪ್ರಸ್ತುತ ಅತೀ ಅಗತ್ಯ ದಾಖಲೆಯಾಗಿದೆ,ಆಧಾರ್ ಕಾರ್ಡ್‌ನಂತೆಯೇ ಉದ್ಯೋಗ ಆಧಾರ್ ಎಂಬ ಇನ್ನೊಂದು ಕಾರ್ಡ್ ಇದೆ. ಬಹುಶಃ ಎಲ್ಲರಿಗೂ ಅದರ ಬಗ್ಗೆ ತಿಳಿದಿಲ್ಲ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ (MSME) ಸಚಿವಾಲಯವು ನೀಡುವ ವಿಶಿಷ್ಠ ಗುರುತಿನ ಸಂಖ್ಯೆಯೇ ಉದ್ಯೋಗ ಆಧಾರ್ ಆಗಿದೆ.ಪ್ರಸ್ತುತ ಇದನ್ನು ಉದ್ಯೋಗ್ ಆಧಾರ್ ಎಂದು ಕರೆಯಲಾಗುತ್ತದೆ. ಇದನ್ನು ಉದ್ಯಮಿಗಳಿಗೆ ನೀಡಲಾಗುತ್ತದೆ. ಉದ್ಯೋಗ್ ಆಧಾರ್ ಅನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ 2015 ರಲ್ಲಿ ಪ್ರಾರಂಭಿಸಿತು,ಕೇಂದ್ರ ಸರ್ಕಾರವು ಜುಲೈ 2020 ರಲ್ಲಿ, ಹಿಂದಿನ ಉದ್ಯೋಗ್ ಆಧಾರ್ ಅನ್ನು ಬದಲಿಸಲು MSME ಗಳಿಗಾಗಿ ಉದ್ಯೋಗ್ ನೋಂದಣಿ ಪೋರ್ಟಲ್ ಅನ್ನು ಪ್ರಾರಂಭಿಸಿತು,ಉದ್ಯಮ ನೋಂದಣಿಗಾಗಿ PAN ಸಂಖ್ಯೆ ಅಥವಾ GSTIN ಆಧರಿಸಿ ಎಂಟರ್‌ಪ್ರೈಸ್ ವಿವರಗಳನ್ನು ಪರಿಶೀಲಿಸಬಹುದು. ಇದು 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ (UIN) ಆಗಿದ್ದು ಇದನ್ನು ಉದ್ಯೋಗ ಆಧಾರ್ ಅಥವಾ ವ್ಯವಹಾರಗಳಿಗೆ ಆಧಾರ್, MSME ನೋಂದಣಿ, ಇತ್ಯಾದಿ ಎಂದು ಕರೆಯಲಾಗುತ್ತದೆ.

ಉದ್ಯೋಗ ಆಧಾರ್‌ಗೆ ಬೇಕಾದ ದಾಖಲೆಗಳು,

* ಆಧಾರ್ ಕಾರ್ಡ್ * ಮಾಲೀಕರ ಹೆಸರು * ಉದ್ಯಮದ ಹೆಸರು * ಸಂಸ್ಥೆಯ ಬಗ್ಗೆ ಮಾಹಿತಿ * ಬ್ಯಾಂಕ್ ವಿವರ * ನ್ಯಾಷನಲ್ ಇಂಡಸ್ಟ್ರಿಯಲ್ ಕ್ಲಾಸಿಫಿಕೇಷನ್ ಕೋಡ್ * ಉದ್ಯೋಗದಲ್ಲಿರುವ ವ್ಯಕ್ತಿಗಳ ಸಂಖ್ಯೆ * ಜಿಲ್ಲಾವಾರು ಎಷ್ಟು ಕೇಂದ್ರಗಳು ಇವೆ ಎಂಬ ಮಾಹಿತಿ * ಉದ್ಯಮ ಆರಂಭ ಮಾಡಿದ ದಿನಾಂಕ

ಉದ್ಯೋಗ ಆಧಾರ್‌ನ ಪ್ರಯೋಜನಗಳು

* ನಿಮ್ಮ ಸಂಸ್ಥೆಯನ್ನು ಎಂಎಸ್‌ಎಂಇ ಆಗಿ ನೊಂದಾಯಿಸುವ ಪ್ರಕ್ರಿಯೆ ಬಹಳ ಸರಾಗವಾಗಿ ಆಗುತ್ತದೆ.

* ಸ್ವಘೋಷಣೆ ಸೌಲಭ್ಯ

* ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ

* ಸರಕಾರದ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ

* ಒಂದಕ್ಕಿಂತ ಹೆಚ್ಚು ಉದ್ಯೋಗ್ ಆಧಾರ್ ಅರ್ಜಿಗಳನ್ನು ಸಲ್ಲಿಸಬಹುದು.

*ನೇರ ತೆರಿಗೆಯ ತೆರಿಗೆ ವಿನಾಯಿತಿಗೆ ಸಹಾಯ ಮಾಡುತ್ತದೆ

*ನೀವು ಕಡಿಮೆ ದರದಲ್ಲಿ ಬಡ್ಡಿಯನ್ನು ಪಡೆಯಬಹುದು

*ಪೇಟೆಂಟ್ ನೋಂದಣಿಯ ಸಂದರ್ಭದಲ್ಲಿ 50% ಅನುದಾನ ಲಭ್ಯವಿದೆ

*ISO ಪ್ರಮಾಣೀಕರಣದ ಮರುಪಾವತಿ

 

Exit mobile version