Revenue Facts

PAN ಕಾರ್ಡ್‌ನಲ್ಲಿ ಮದುವೆಯ ನಂತರ ಗಂಡನ ಹೆಸರು ಸೇರಿಸಲು ಹೀಗೆ ಮಾಡಿ

PAN ಕಾರ್ಡ್‌ನಲ್ಲಿ ಮದುವೆಯ ನಂತರ  ಗಂಡನ ಹೆಸರು ಸೇರಿಸಲು ಹೀಗೆ ಮಾಡಿ

#Add #husband’s #name #after marriage #PAN card

ಬೆಂಗಳೂರು;ಪ್ಯಾನ್ ಕಾರ್ಡ್ (PAN card) ಭಾರತೀಯ ನಾಗರಿಕರ ವೈಯಕ್ತಿಕ ವಿವರಗಳನ್ನು ಹೊಂದಿರುವ ಬಹಳ ಪ್ರಮುಖವಾದ ದಾಖಲೆಯಾಗಿದೆ,ಆದಾಯ ತೆರಿಗೆ ರಿಟರ್ನ್ಸ್ (Income tax returns) ಸಲ್ಲಿಕೆಗೆ ಪ್ಯಾನ್ ಕಾರ್ಡ್ (PAN Card)ಗುರುತು ದೃಢೀಕರಣ (Confirmation)ದಾಖಲೆಯಾಗಿದೆ. ಭಾರತದಲ್ಲಿ ಇಂದು ಗುರುತು ದೃಢೀಕರಣಕ್ಕಾಗಿ ಕೇಳೋ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ (PAN Card) ಕೂಡ ಸೇರಿದೆ,ಪ್ಯಾನ್ ಸಂಖ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಮದುವೆಯ ಬಳಿಕ ಹೆಚ್ಚಿನ ಹುಡುಗಿಯರು ತಮ್ಮ ಉಪನಾಮವನ್ನು ಬದಲಾಯಿಸುವುದು ಸಹಜ. ಈ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ಎಲ್ಲಾ ದಾಖಲೆಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.ಒಂದು ವೇಳೆ ನೀವು ಕೂಡ ಉಪನಾಮ ಸೇರಿಸಿಕೊಳ್ಳಲು ಬಯಸಿದರೆ ಈ ಹಂತಗಳ ಮೂಲಕ ಮಾಡಬಹುದು.

ಹೆಸರು ಬದಲಾವಣೆಗೆ ಯಾವೆಲ್ಲ ದಾಖಲೆಗಳು ಅಗತ್ಯ

-ವಿವಾಹ ಪ್ರಮಾಣಪತ್ರ(Marriage certificate)

-ಹೆಸರು ಬದಲಾವಣೆಗೆ ಸಂಬಂಧಿಸಿದ ಅಧಿಕೃತ ಪತ್ರ(Official letter)

-ಪಾಸ್ಫೋರ್ಟ್ ಪ್ರತಿ(Passport copy)

-ಗಜೆಟೆಡ್ ಅಧಿಕಾರಿಯಿಂದ ಪಡೆದ ಪ್ರಮಾಣಪತ್ರ

ಮದುವೆಯ ಬಳಿಕ ನಿಮ್ಮ ವಿಳಾಸ ಮತ್ತು ಉಪನಾಮವನ್ನು ಹೇಗೆ ಬದಲಾಯಿಸಬಹುದು?

*ಮೊದಲಿಗೆ ನೀವು NSDL ವೆಬ್ ಸೈಟ್ https://tin.tin.nsdl.com/pan/changerequest.html ಭೇಟಿ ನೀಡಿ.

*ಇಲ್ಲಿ ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ

*ನೀವು ನಿಮ್ಮ ಮುಂದೆ ಪಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಇಲ್ಲಿ ನೀಡಲಾದ ನಮೂನೆಯಲ್ಲಿ ನೀವು ಬಯಸಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು

*ನಿಮ್ಮ ಪ್ಯಾನ್ ಕಾರ್ಡ್ ಜೊತೆಗೆ ಮೊಬೈಲ್ ಸಂಖ್ಯೆ ಇ-ಮೇಲ್ ಐಡಿ ಅಡ್ರೆಸ್ ಪ್ರೂಫ್ (address proof) ಮೊದಲಾದ ಮಾಹಿತಿಗಳನ್ನು ಭರ್ತಿ ಮಾಡಿ.

*ಆ ಬಳಿಕ Validate ಆಯ್ಕೆ ಕ್ಲಿಕ್ ಮಾಡಿ. ಎಲ್ಲ ಮಾಹಿತಿಗಳು ಸರಿ ಇದೆಯಾ ಎಂದು ಪರಿಶೀಲಿಸಿ.ನೀವು ನಮೂದಿಸಿರೋ ಎಲ್ಲ ಮಾಹಿತಿಗಳು ಸರಿಯಿದ್ದರೆ Submit ಆಯ್ಕೆ ಮೇಲೆ ಕ್ಲಿಕ್ ಮಾಡಿ

*ನೆಟ್ ಬ್ಯಾಂಕಿಂಗ, ಡೆಬಿಟ್/ಕ್ರೆಡಿಟ್ ಕಾರ್ಡ್, ಕ್ಯಾಶ್ ಕಾರ್ಡ್ ಇತ್ಯಾದಿ ಮೂಲಕ ಪಾವತಿ ಮಾಡಬಹುದು

*ನಿಮ್ಮ ಹೆಸರು ಬದಲಾವಣೆ ಆದ ನಂತರ ಆನ್ಲೈನ್ ನಲ್ಲಿ 107 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಅನಿವಾಸಿ ಭಾರತೀಯರಿಗೆ 1011 ರೂಪಾಯಿಗಳನ್ನು ಪಾವತಿ ಮಾಡಬೇಕು.

* ನಿಮಗೆ ನಿಮ್ಮ ಹೆಸರಿನಲ್ಲಿ ಬದಲಾವಣೆ ಆದ ಪ್ಯಾನ್ ಕಾರ್ಡ್ ಪ್ರತಿ ಇಮೇಲ್ ಐಡಿಗೆ ಬರುತ್ತದೆ. ಇದನ್ನ ನೀವು ಡೌನ್ಲೋಡ್ (Download) ಮಾಡಿಕೊಳ್ಳ ಬಹುದು.ಪೋಸ್ಟ್ ನಲ್ಲಿ ಪ್ಯಾನ್ ಕಾರ್ಡ್ ನಿಮ್ಮ ಅಡ್ರೆಸ್ ಗೆ ಬಂದು ತಲುಪುತ್ತದೆ. ಒಂದು ವಾರದ ಒಳಗೆ ನೀವು ಹೆಸರು ಬದಲಾವಣೆಯಾದ ಹೊಸ ಪ್ಯಾನ್ ಕಾರ್ಡ್ ಸ್ವೀಕರಿಸುತ್ತೀರಿ

Exit mobile version