Revenue Facts

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಸ್ಬಿಐನಿಂದ ಸ್ಕಾಲರ್ಶಿಪ್

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಸ್ಬಿಐನಿಂದ ಸ್ಕಾಲರ್ಶಿಪ್

ಬೆಂಗಳೂರು, ಏ. 06 : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಲವು ಫೌಂಡೇಶನ್‌ ಗಳು ಸ್ಕಾಲರ್‌ ಶಿಪ್ ಅನ್ನು ನೀಡುತ್ತದೆ. ಇನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ದೇಶದ ಪ್ರಮುಖ ಬ್ಯಾಂಕ್‌ ಆಗಿದ್ದು, ಎಸ್ ಬಿಐ ಫೌಂಡೇಶನ್‌ ಕೂಡ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಆಶಾ ವಿದ್ಯಾರ್ಥಿ ವೇತನವನ್ನು ನೀಡುತ್ತದೆ. 2023-24 ಸಾಲಿನ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇತನವನ್ನು ನೀಡುತ್ತದೆ. ಇದೀಗ ವಿದ್ಯಾರ್ಥಿ ವೇತನ ನೀಡಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯವಾಗಲಿ ಎಂದು ವಿದ್ಯಾರ್ಥಿ ವೇನವನ್ನು ನೀಡಲಾಗುತ್ತದೆ. ವಾರ್ಷಿಕ ರೂ. 50,000 ವಿದ್ಯಾರ್ಥಿ ವೇತನ ನೀಡಲಾಗುವುದು.

ಮೊದಲನೇ ವರ್ಷ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿನಲ್ಲಿ ಕನಿಷ್ಠ 75% ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಇನ್ನು ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷಕ್ಕಿಂತ ಕಡಿಮೆ ಇರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 30, 2023 ಕೊನೆಯ ದಿನವಾಗಿದೆ. ವಿದ್ಯಾರ್ಥಿಯು ಭಾರತದ ಪ್ರಜೆಯಾಗಿರಬೇಕು.

ಇನ್ನು ವಿದ್ಯಾರ್ಥಿಗಳು ಕಳೆದ ವರ್ಷದ ಶೈಕ್ಷಣಿಕ ಪರೀಕ್ಷೆಯ ಅಂಕಪಟ್ಟಿಯನ್ನು ಸಲ್ಲಿಸಬೇಕು. ಸರ್ಕಾರದಿಂದ ನೀಡಿದ ಯಾವುದಾದರು ಒಂದು ಗುರುತಿನ ಚೀಟಿಗಳಾದ ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್ ನಲ್ಲಿ ಯಾವುದಾದರೂ ಒಂದನ್ನು ನೀಡಬೇಕು. ಪ್ರಸಕ್ತ ವರ್ಷದ ಪ್ರವೇಶ ಪ್ರಮಾಣ ಪತ್ರವನ್ನು ಕೂಡ ಆನ್‌ ಲೈನ್‌ ಅರಿಸಲ್ಲಿಸುವಾಗ ದಾಖಲೆಯಾಗಿ ನೀಡಬೇಕು. ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆಯ ವಿವರಗಳು. ಹಾಗೂ ಕೊನೆಯದಾಗಿ ಆದಾಯ ಪ್ರಮಾಣ ಪತ್ರ. ವಿದ್ಯಾರ್ಥಿಗಳ ಇತ್ತೀಚಿನ ಫೋಟೋ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್‌ ಬಿಐ ವಿದ್ಯಾರ್ಥಿ ವೇತನವನ್ನು ನೀಡುತ್ತದೆ.

Exit mobile version