Revenue Facts

ಉಳಿತಾಯ ಖಾತೆಯ ಬಡ್ಡಿ ಮೇಲೆ ಆದಾಯ ತೆರಿಗೆ ವಿನಾಯ್ತಿ ಪಡೆಯಿರಿ

ಬೆಂಗಳೂರು, ಜೂ. 28 : 2023-24ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ. ಹಳೆಯ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ತೆರಿಗೆದಾರಿಗೆ ಹಲವು ವಿನಾಯ್ತಿಗಳನ್ನು ಪಡೆಯಬಹುದಾಗಿದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಟಿಟಿಎ ಅಡಿಯಲ್ಲಿ ಕೆಲ ವಿನಾಯ್ತಿಗಳು ಸಿಗಲಿವೆ. ನೀವು ಪಡೆಯುತ್ತಿರುವ ಬಡ್ಡಿ ಮೊತ್ತಕ್ಕೆ ಆದಾಯ ತೆರಿಗೆಯಲ್ಲಿ ಉಳಿತಾಯವನ್ನು ಪಡೆಯಬಹುದಾಗಿದೆ.

ನಿಮ್ಮ ಬಳಿ ಬ್ಯಾಂಕ್‌ ಉಳಿತಾಯ ಖಾತೆ, ಕೋ-ಆಪರೇಟಿವ್‌ ಸೊಸೈಟಿ ಖಾತೆ, ಅಂಚೆ ಕಚೇರಿಯಲ್ಲಿ ಖಾತೆಗಳಿದ್ದು, ವಾರ್ಷಿಕವಾಗಿ 10,000 ರೂಪಾಯಿ ವರೆಗಿನ ಬಡ್ಡಿಯ ಮೇಲೆ ವಿನಾಯ್ತಿಯನ್ನು ಪಡೆಯಬಹುದು. ಒಂದು ಅಥವಾ ಹೆಚ್ಚಿನ ಸಂಖ್ಯೆಯ ಖಾತೆಗಳಿಂದ ಗಳಿಸಿದ ಬಡ್ಡಿ ಹಣಕ್ಕೆ ತೆರಿಗೆ ವಿನಾಯ್ತಿ ಸಿಗುತ್ತದೆ. ಸೆಕ್ಷನ್ 80ಟಿಟಿಎ ಅಡಿಯಲ್ಲಿ ಗರಿಷ್ಠ 10,000ರೂ. ತನಕ ತೆರಿಗೆ ರಿಯಾಯಿತಿಗೆ ಅವಕಾಶವಿದೆ. ಸೆಕ್ಷನ್ 80ಟಿಟಿಎ ನಲ್ಲಿ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..

ಟರ್ಮ್‌ ಡೆಪಾಸಿಟ್‌, ಫಿಕ್ಸೆಡ್‌ ಡೆಪಾಸಿಟ್‌, ಇತರೆ ಠೇವಣಿಗಳ ಮೇಲೆ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ರಿಯಾಯಿತಿ ಇರುವುದಿಲ್ಲ. ಆದರೆ, ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಸಿಗುವ ಬಡ್ಡಿಯಲ್ಲಿ ಕಡಿತ ಸಿಗಲಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80TTA ಅಡಿಯಲ್ಲಿ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿದ್ದ ಮೊತ್ತಕ್ಕೆ ಬರುವ ಬಡ್ಡಿಗೆ ತೆರಿಗೆ ಪಾವತಿಸುವಂತಿಲ್ಲ. ಇನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುವಾತ ಪಡೆಯುವ ಗ್ರಾಚ್ಯುಟಿಗೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಸಿಗುತ್ತದೆ. ವಿಆರ್ ಎಸ್ ಪಡೆಯುವ ವ್ಯಕ್ತಿ ತೆಗೆದುಕೊಳ್ಳುವ ಹಣಕ್ಕೂ ತೆರಿಗೆ ಇರುವುದಿಲ್ಲ.

 

Exit mobile version