20.4 C
Bengaluru
Saturday, June 28, 2025

Rules Changes From 1st January 2024 : ಜನವರಿ 1ರಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು

ನವದೆಹಲಿ;2024 ವರ್ಷ ಪ್ರಾರಂಭವಾಗಲು ಕೆಲವೇ ದಿನಗಳು ಮಾತ್ರ ಉಳಿದಿವೆ.ಇನ್ನೇನು ಸ್ವಲ್ಪ ದಿನದಲ್ಲಿ 2024 ರ ಹೊಸ ವರ್ಷ ಪ್ರಾರಂಭ ಆಗುತ್ತಿದೆ., ಹೊಸ ವರ್ಷದಿಂದ ಕೆಲವು ನಿಯಮಗಳು ಸಹ ಬದಲಾಗಲಿವೆ.ಹೊಸ ವರ್ಷ ಪ್ರಾರಂಭವಾದ ತಕ್ಷಣ ಕೆಲವು ನಿಯಮಗಳು ಬದಲಾಗುತ್ತವೆ. ಇವುಗಳ ಬಗ್ಗೆ ಜನರು ತಿಳಿದುಕೊಳ್ಳುವುದು ಬಹಳ ಮುಖ್ಯ ಈ ಬದಲಾವಣೆಗಳು ಜನ ಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ನೋಡಬೇಕಿದೆ.ಬದಲಾವಣೆಗಳು ಜಿಎಸ್‌ಟಿ(GST) ದರದಿಂದ ಸಿಮ್ ಖರೀದಿಸುವವರೆಗಿನ ನಿಯಮಗಳನ್ನು ಒಳಗೊಂಡಿವೆ. 2024 ರಿಂದ ನಡೆಯುತ್ತಿರುವ ಕೆಲವು ಪ್ರಮುಖ ಬದಲಾವಣೆಗಳ ಬಗ್ಗೆ ಇಲ್ಲಿ ನೋಡೋಣ…

ಸಿಮ್ ಕಾರ್ಡ್‌ಗೆ ಹೊಸ ನಿಯಮ

ಇನ್ಮುಂದೆ ಸಿಮ್ ಕಾರ್ಡ್ ಪಡೆಯಲು ಬಯೋಮೆಟ್ರಿಕ್‌ ಕಡ್ಡಾಯವಾಗುವ ಸಾಧ್ಯತೆ ಇದೆ. ‘ಟೆಲಿಕಮ್ಯುನಿಕೇಷನ್ಸ್ ಮಸೂದೆ-2023’ ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಮಸೂದೆಯಲ್ಲಿ ಈ ಅಂಶಗಳು ಇವೆ. ಸಿಮ್ ಕಾರ್ಡ್ ಪಡೆಯಲು ಈ ಮೊದಲು ಆಧಾ‌ರ್ ದಾಖಲೆ ನೀಡಿದರೆ ಸಾಕಿತ್ತು. ಇನ್ನು, ಫೋನ್ ಕದ್ದಾಲಿಕೆ ಮಾಡಿದರೆ ₹2 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆಯೂ ವಿಧಿಸಬಹುದು. ತರ್ತು ಸಂದರ್ಭದಲ್ಲಿ ಯಾವುದೇ ನೆಟ್‌ವರ್ಕ್ ವಶಕ್ಕೆ ಪಡೆಯುವ ಅಧಿಕಾರ ಕೇಂದ್ರ/ ರಾಜ್ಯ ಸರ್ಕಾರಕ್ಕೆ ನೀಡುವ ಅಂಶವೂ ಬಿಲ್‌ನಲ್ಲಿವೆ.

ಲಾಕರ್‌ನ ತಿದ್ದುಪಡಿ ಒಪ್ಪಂದವನ್ನು ಠೇವಣಿ ಇರಿಸಬೇಕಾಗಲಿದೆ.

ರಿಸರ್ವ್ ಬ್ಯಾಂಕ್ ಪ್ರಕಾರ, ಬ್ಯಾಂಕಿನಲ್ಲಿ ಲಾಕರ್ ಹೊಂದಿರುವ ಎಲ್ಲಾ ಗ್ರಾಹಕರು ಪರಿಷ್ಕೃತ ಲಾಕರ್ ಒಪ್ಪಂದವನ್ನು ಸಲ್ಲಿಸಬೇಕಾಗುತ್ತದೆ. ಇದರ ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ. ಗ್ರಾಹಕರು ಬ್ಯಾಂಕ್‌ಗೆ ಹೋಗಿ ನವೀಕರಿಸಿದ ಒಪ್ಪಂದವನ್ನು ಸಲ್ಲಿಸಬೇಕು. ಇದನ್ನು ಮಾಡದೆ ಹೋದಲ್ಲಿ ನೀವು ನಿಮ್ಮ ಲಾಕರ್ ಅನ್ನು ಖಾಲಿ ಮಾಡಬೇಕಾಗಬಹುದು.

ಜಿಎಸ್‌ಟಿ ದರದಲ್ಲಿ ಬದಲಾವಣೆ

2024ರಲ್ಲಿ ಜಿಎಸ್‌ಟಿ ದರದಲ್ಲಿ ಬದಲಾವಣೆಯಾಗಲಿದೆ. ಹೆಚ್ಚಿದ GST ದರವು ಜನವರಿ 1, 2024 ರಿಂದ ಅನ್ವಯವಾಗುತ್ತದೆ.ಜಿಎಸ್‌ಟಿ(GST) ದರ ಶೇ 8ರಿಂದ ಶೇ 9ಕ್ಕೆ ಏರಿಕೆಯಾಗಲಿದೆ. ಇದು 2022 ರ ಬಜೆಟ್‌ನಲ್ಲಿ ಡಬಲ್ ದರ ಹೆಚ್ಚಳದ ಅಂತಿಮ ಹಂತವಾಗಿದೆ.ಅದೇ ರೀತಿಯಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಹಲವು ನಿಯಮಗಳು ಹೊಸ ವರ್ಷದಲ್ಲಿ ಬದಲಾಗಲಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ವಿದ್ಯಾರ್ಥಿ ವೀಸಾ (Student Visa) ಗೆ ಹೊಸ ನಿಯಮ ಅನ್ವಯ:

ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಪೂರ್ಣಗೊಳಿಸುವವರೆಗೆ ಕೆಲಸದ ಮಾರ್ಗದ ವೀಸಾಗಳನ್ನು ಪಡೆಯಲು ಆಗುವುದಿಲ್ಲ. ಕೆಲಸ ಮಾಡಲು ಬಯಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸುವ ಮೊದಲು ಕೆಲಸದ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನಿಯಮವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಅನ್ವಯವಾಗುತ್ತದೆ.

ಉದ್ಯೋಗ ಕಾನೂನಿನಲ್ಲಿ ಬದಲಾವಣೆ

ಜನವರಿ 2024 ರಲ್ಲಿ ಅರೆಕಾಲಿಕ ಕಾರ್ಮಿಕರಿಗೆ ರಜೆ ಮತ್ತು ಅನಿಯಮಿತ ಸಮಯವನ್ನು ಲೆಕ್ಕಹಾಕುವ ಹೊಸ ವಿಧಾನ ಒಳಗೊಂಡ ಹಾಗೆ ಉದ್ಯೋಗ ಕಾನೂನಿನಲ್ಲಿ ಅನೇಕ ಬದಲಾವಣೆಯಾಗಲಿದೆ. ಅಂದರೆ, ಬೇರೆ ಬೇರೆ ಗಂಟೆಗಳಲ್ಲಿ ಕೆಲಸ ಮಾಡುವ ಇಲ್ಲವೇ ವರ್ಷದ ಕೆಲವು ಭಾಗಗಳಲ್ಲಿ ಉದ್ಯೋಗದಲ್ಲಿರುವ ಉದ್ಯೋಗಿಗಳು ವಿಶೇಷ ವಿಧಾನದ ಅಡಿಯಲ್ಲಿ ರಜೆ ಪಡೆಯಬಹುದು.

Related News

spot_img

Revenue Alerts

spot_img

News

spot_img