Revenue Facts

ವಾಣಿಜ್ಯ ಬಳಕೆಯ ಎಲ್​ಪಿಜಿ​ ಸಿಲಿಂಡರ್​ ಬೆಲೆಯಲ್ಲಿ 83.50 ರೂ.ಗೆ ಇಳಿಕೆ

ವಾಣಿಜ್ಯ ಬಳಕೆಯ ಎಲ್​ಪಿಜಿ​ ಸಿಲಿಂಡರ್​ ಬೆಲೆಯಲ್ಲಿ 83.50 ರೂ.ಗೆ ಇಳಿಕೆ

ನವದೆಹಲಿ ಜೂನ್ 1;ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿಜಿ ದರವನ್ನು ಪರಿಷ್ಕರಿಸುತ್ತವೆ.ಕೇಂದ್ರ ಸರ್ಕಾರವು ಗ್ರಾಹಕರಿಗೆ  ಸಿಹಿಸುದ್ದಿ ನೀಡಿದ್ದು, 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಕೆ ಮಾಡಿದೆ. 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,773 ರೂ.ಗೆ ತಲುಪಿದೆ.ನವದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1856.50-1773 ರೂಪಾಯಿಗೆ ಇಳಿದಿದೆ. ಕೋಲ್ಕತ್ತಾದಲ್ಲಿ ಹಿಂದಿನ 1960.50 ರೂಪಾಯಿಗೆ ಹೋಲಿಸಿದರೆ ಈಗ 1875.50 ರೂಪಾಯಿ ಸಿಲಿಂಡರ್‌ ದರ ಇದೆ. ಅದೇ ರೀತಿ ಈ ಹಿಂದೆ ಮುಂಬೈನಲ್ಲಿ 1808.50 ರೂಪಾಯಿಗೆ ಸಿಲಿಂಡರ್‌ ಲಭ್ಯವಿದ್ದು, ಈಗ 1725 ರೂಪಾಯಿಗೆ ಲಭ್ಯ ಆಗಲಿದೆ. ಚೆನ್ನೈನಲ್ಲಿ 2021.50 ರೂಪಾಯಿಯಿಂದ 1937 ರೂಪಾಯಿಗೆ ಇಳಿದಿದೆ.ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯು ಬದಲಾಗದೆ ಉಳಿದಿದೆ.

Exit mobile version