ಬೆಂಗಳೂರು;eCOM’ ಮತ್ತು ‘INSTA EMI ಕಾರ್ಡ್’ ಮೂಲಕ ಸಾಲ ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಬಜಾಜ್ ಫೈನಾನ್ಸ್ಗೆ ನಿರ್ದೇಶಿಸಿದೆ.ಡಿಜಿಟಲ್ ಸಾಲದ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ನ್ಯೂನತೆಗಳನ್ನು ಸರಿಪಡಿಸಿದ ನಂತರ ನಿರ್ಬಂಧಗಳನ್ನು ಮರು ಮೌಲ್ಯಮಾಪನ(Evaluation) ಮಾಡಲಾಗುವುದು ಎಂದು ಅದು ಹೇಳಿದೆ. ಇದರೊಂದಿಗೆ, ಬಜಾಜ್ ಫೈನಾನ್ಸ್ ಸಾಲ ನೀಡುವಿಕೆಯನ್ನು ಸ್ಥಗಿತಗೊಳಿಸುವುದಾಗಿ ಮತ್ತು ದೋಷಗಳನ್ನು ಪರಿಶೀಲಿಸುವುದಾಗಿ ಘೋಷಿಸಿದೆ.ನವೆಂಬರ್ 3 ರಂದು RBI ಮರ್ಸಿಡಿಸ್-ಬೆನ್ಝ್ ಫೈನಾನ್ಷಿಯಲ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ರೂ 10 ಲಕ್ಷದ ದಂಡವನ್ನು ವಿಧಿಸಿತ್ತು.ತನ್ನ ವ್ಯಾಪ್ತಿಯಲ್ಲಿರುವ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಗೆ ಆರ್ಬಿಐ ಹಲವು ಮಾರ್ಗಸೂಚಿಗಳನ್ನು ನೀಡಿರುತ್ತದೆ. ಇವುಗಳನ್ನು ಸರಿಯಾಗಿ ಪಾಲಿಸದೇ ಇದ್ದರೆ ಲೈಸೆನ್ಸ್ ರದ್ದು ಮಾಡುವುದು, ದಂಡ ಇತ್ಯಾದಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಹಿಂದೆ ಸಾಕಷ್ಟು ಸಂದರ್ಭದಲ್ಲಿ ಆರ್ಬಿಐ(RBI) ಇಂಥ ಕ್ರಮ ಕೈಗೊಂಡಿರುವುದಿದೆ.