ಮುಂಬೈ: ಆರ್‌ಬಿಐ(RBI) ಬ್ಯಾಂಕ್‌ಗಳು ಮತ್ತು ಇತರ ಸಂಸ್ಥೆಗಳ ಮಟ್ಟದಲ್ಲಿ ಕಾರ್ಡ್-ಆನ್-ಫೈಲ್ (COF) ಟೋಕನ್ ಸೌಲಭ್ಯವನ್ನು ಪರಿಚಯಿಸಿದೆ. ಈ ಕಾರ್ಡ್‌ದಾರರಿಗೆ ಟೋಕನ್‌ಗಳನ್ನು ರಚಿಸಲು ಮತ್ತು ವಿವಿಧ ಇ-ಕಾಮರ್ಸ್ ಅಪ್ಲಿಕೇಶನ್‌ಗಳೊಂದಿಗೆ ತಮ್ಮ ಅಸ್ತಿತ್ವದಲ್ಲಿರುವ ಖಾತೆಗಳಿಗೆ ಲಿಂಕ್ ಮಾಡಲು ಅನುಕೂಲವಾಗುತ್ತದೆ. ಪ್ರಸ್ತುತ ಸಿಓಎಫ್ ಟೋಕನ್ ಅನ್ನು ವ್ಯಾಪಾರಿಯ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮುಖಾಂತರ ಮಾತ್ರ ಪಡೆಯಲು ಸಾಧ್ಯ.
ವ್ಯಾಪಾರಿ ಸೈಟ್‌ಗಳಿಗೆ ಟೋಕನೈಸ್ ಮಾಡಲು ಹೆಚ್ಚುವರಿ ಆಯ್ಕೆಯನ್ನು ಒದಗಿಸುತ್ತದೆ..!
ಸಿಓಎಫ್ (COF) ಗಾಗಿ ಕಾರ್ಡ್, ಟೋಕನ್ ವಿನಂತಿಸುವವರು ಮತ್ತು ವ್ಯಾಪಾರಿಗಳ ಸಂಯೋಜನೆಗಾಗಿ ಟೋಕನ್ 16-ಅಂಕಿಯ ವಿಶಿಷ್ಟ ಅಂಕಿಯನ್ನು ಹೊಂದಿದೆ. ಇದು ಕಾರ್ಡ್, ಟೋಕನ್ ಮನಿ ಹಾಗೂ ಮರ್ಚೆಂಟ್ ಈ ಮೂರರ ಮಿಶ್ರಣವಾಗಿದೆ. ಅದನ್ನು ಉದ್ದೇಶಿತ ವ್ಯಾಪಾರಿಯೊಂದಿಗೆ ಮಾತ್ರ ಬಳಸಬಹುದಾಗಿದೆ. ಕಾರ್ಡ್-ಆನ್-ಫೈಲ್ ಟೋಕನೈಸೇಶನ್ (CoFT) ಅನ್ನು ನೇರವಾಗಿ ಕಾರ್ಡ್ ನೀಡುವ ಬ್ಯಾಂಕ್‌ಗಳ ಮೂಲಕ ಸಕ್ರಿಯಗೊಳಿಸಲು ನಿರ್ಧರಿಸಲಾಗಿದೆ. ಇದು ಒಂದೇ ಪ್ರಕ್ರಿಯೆಯ ಮೂಲಕ ತಮ್ಮ ಕಾರ್ಡ್‌ಗಳನ್ನು ಬಹು ವ್ಯಾಪಾರಿ ಸೈಟ್‌ಗಳಿಗೆ ಟೋಕನೈಸ್ ಮಾಡಲು ಹೆಚ್ಚುವರಿ ಆಯ್ಕೆಯನ್ನು ಒದಗಿಸುತ್ತದೆ. ಇದನ್ನು RBI ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
* RBI ಸೆಪ್ಟೆಂಬರ್ 2021 ರಲ್ಲಿ CoFT ಅನ್ನು ಪರಿಚಯಿಸಿತು ಮತ್ತು ಕಳೆದ ವರ್ಷ ಅಕ್ಟೋಬರ್ 1 ರಿಂದ ಅನುಷ್ಠಾನವನ್ನು ಪ್ರಾರಂಭಿಸಿತು.
* COFT ಉತ್ಪಾದನೆಯನ್ನು ಗ್ರಾಹಕರ ಒಪ್ಪಿಗೆಯ ಮೇರೆಗೆ ಮತ್ತು ದೃಢೀಕರಣದ ಹೆಚ್ಚುವರಿ ಅಂಶ (AFA) ಮೌಲ್ಯೀಕರಣದೊಂದಿಗೆ ಮಾತ್ರ ಮಾಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
* ಕಾರ್ಡ್ ಹೋಲ್ಡರ್ ತನ್ನ ಕಾರ್ಡ್ ಅನ್ನು ಟೋಕನೈಸ್ ಮಾಡಲು ಬಹು ವ್ಯಾಪಾರಿಗಳನ್ನು ಆಯ್ಕೆ ಮಾಡಿದರೆ, ಈ ಎಲ್ಲಾ ವ್ಯಾಪಾರಿಗಳಿಗೆ AFA ಮೌಲ್ಯೀಕರಣವನ್ನು ಸಂಯೋಜಿಸಬಹುದು ಎಂದು RBI ಹೇಳಿದೆ.
* ಕಾರ್ಡ್ ಹೋಲ್ಡರ್ ತನ್ನ ಅನುಕೂಲಕ್ಕಾಗಿ ಯಾವುದೇ ಸಮಯದಲ್ಲಿ ಹೊಸ ಕಾರ್ಡ್ ಅನ್ನು ಸ್ವೀಕರಿಸುವ ಸಮಯದಲ್ಲಿ ಅಥವಾ ನಂತರ ಕಾರ್ಡ್ ಅನ್ನು ಟೋಕನೈಸ್ ಮಾಡಬಹುದು.
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು