Revenue Facts

ಆರ್‌ಬಿಐ(RBI) ಬಡ್ಡಿದರ ಯಥಾಸ್ಥಿತಿ ಸಾಧ್ಯತೆ

#RBI #intrest #rate #hold #likely

ದೆಹಲಿ;ರಿಸರ್ವ್ ಬ್ಯಾಂಕಿನ(RBI) ಹಣಕಾಸು ನೀತಿ ಪರಿಷ್ಕರಣಾ ಸಭೆಯು ಅ.4-6ರವರೆಗೆ ನಡೆಯಲಿದ್ದು, ಸತತ 4ನೇ ಬಾರಿಗೆ ರೆಪೋ ರೇಟ್ ಹೆಚ್ಚಳ ಮಾಡದಿರಲು ನಿರ್ಧರಿಸಲಾಗಿದೆ. ಪರಿಣಾಮ ಸಾಲಗಳ ಮೇಲಿನ ಬಡ್ಡಿ ದರ ಏರಿಕೆ ಆಗುವುದಿಲ್ಲ ಎನ್ನಲಾಗಿದೆ. ಕಳೆದ ಫೆ.8ರಂದು ಬೆಂಚ್ ಮಾರ್ಕ್ ರೆಪೋ(Bench markrepo) ದರವನ್ನು 6.5ಕ್ಕೆ ಹೆಚ್ಚಿಸಿತ್ತು. ಅಂದಿನಿಂದ ಇದುವರೆಗೆ ರೆಪೋ ರೇಟ್ ಹೆಚ್ಚಿಸದೆ ಯಥಾಸ್ಥಿತಿ ಕಾಯ್ದುಕೊಂಡು ಬಂದಿದೆ. ಹಣದುಬ್ಬರ ಹೆಚ್ಚಿದ್ದು, ಲಿಕ್ವಿಡಿಟಿ(Liqidity) ವಿಷಮ ಸ್ಥಿತಿಯಲ್ಲಿರುವುದರಿಂದ ಇದು ಅನಿವಾರ್ಯ ಎಂದು ಹೇಳಲಾಗಿದೆ.ಸತತ ನಾಲ್ಕನೇ ಬಾರಿಯೂ ಬಡ್ಡಿದರವನ್ನು ಯಥಾ ಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಚಿಲ್ಲರೆ ಹಣದುಬ್ಬರವು ಹೆಚ್ಚಾ ಗಿಯೇ ಇದೆ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್ ತನ್ನ ಆಕ್ರಮಣಶೀಲ ವರ್ತನೆಯನ್ನು ಮುಂದು ವರಿಸಲಿರುವ ಕಾರಣ ನಿರ್ಧಾರಕ್ಕೆ ಬರಬಹುದು ಎಂದು ಪರಿಣತರು ಹೇಳಿದ್ದಾರೆ. RBI ಗವರ್ನರ್ ಅವರ ನೇತೃತ್ವದ ಹಣಕಾಸು ನೀತಿ ಸಮಿತಿಯ (ಎಐಪಿಸಿ) ಸಭೆಯು ಅಕ್ಟೋಬರ್ 4-6ರವರೆಗೆ ನಿಗದಿಯಾಗಿದೆ. ರೆಪೊ ದರ ನಿಗದಿ ಮಾಡುವ ಈ ಹಿಂದಿನ ಸಭೆಯು ಆಗಸ್ಟ್‌ನಲ್ಲಿ ನಡೆದಿತ್ತು.

Exit mobile version