Revenue Facts

ಮೂರು ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ

ಮೂರು ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ

ದಹಲಿ;ವಿವಿಧ ನಿಯಂತ್ರಕ ನಿಯಮಗಳ ಉಲ್ಲಂಘನೆಗಾಗಿ ಎಸ್‌ಬಿಐ ಮತ್ತು ಇಂಡಿಯನ್ ಬ್ಯಾಂಕ್ ಸೇರಿದಂತೆ ಮೂರು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ದಂಡ ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಸೋಮವಾರ ತಿಳಿಸಿದೆ.3 ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಸ್‌ಬಿಐ, ಇಂಡಿಯನ್ ಬ್ಯಾಂಕ್ ಮತ್ತು ಪಂಜಾಬ್ &ಸಿಂಗ್ ಬ್ಯಾಂಕ್‌ಗೆ ದಂಡವನ್ನು ವಿಧಿಸಿದೆ. ಇಂಡಿಯನ್ ಬ್ಯಾಂಕ್ ಗೂ ಕೂಡ ‘ಸಾಲಗಳು ಮತ್ತು ಮುಂಗಡಗಳ ಶಾಸನಬದ್ಧ ಹಾಗೂ ಇತರ ನಿರ್ಬಂಧಗಳು’, KYC ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನಗಳು, 2016 ರ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ 1.62 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು RBI ಹೇಳಿದೆ,ಪಂಜಾಬ್ & ಸಿಂಧ್ ಬ್ಯಾಂಕ್ ಗೆ 1 ಕೋಟಿ ರೂ. ದಂಡ ವಿಧಿಸಲಾಗಿದೆ, ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಯೋಜನೆಯ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಈ ದಂಡವನ್ನು ವಿಧಿಸಲಾಗಿದೆ.ಸೆಂಟ್ರಲ್ ಬ್ಯಾಂಕ್, ಫೆಡ್‌ಬ್ಯಾಂಕ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ಗೂ ಕೂಡ 8.80 ಲಕ್ಷ ದಂಡವನ್ನೂ ವಿಧಿಸಿದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ (ಎನ್‌ಬಿಎಫ್‌ಸಿ) ವಂಚನೆಯನ್ನು ತಡೆಗಟ್ಟಲು ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಈ ದಂಡವನ್ನು ವಿಧಿಸಲಾಗಿದೆ. ಆರ್‌ಬಿಐನ ಈ ನಿರ್ಧಾರದಿಂದ ಬ್ಯಾಂಕ್ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ,ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐಗೆ ಕೇಂದ್ರ ಬ್ಯಾಂಕ್ 1.3 ಕೋಟಿ ರೂಪಾಯಿ ದಂಡ ವಿಧಿಸಿದೆ. ‘ಸಾಲಗಳು ಮತ್ತು ಮುಂಗಡಗಳು ಶಾಸನಬದ್ಧ ಹಾಗೂ ಇತರ ನಿರ್ಬಂಧಗಳು’ ಮತ್ತು ಗುಂಪಿನೊಳಗಿನ ವಹಿವಾಟುಗಳು ಮತ್ತು ಸಾಲಗಳ ನಿರ್ವಹಣೆಯ ಕುರಿತು ನೀಡಲಾದ ಸೂಚನೆಗಳ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಈ ವಿತ್ತೀಯ ದಂಡವನ್ನು ವಿಧಿಸಲಾಗಿದೆ.

Exit mobile version