ಬೆಂಗಳೂರು, ಆ. 08 : ನಿಮ್ಮ ಮೊಬೈಲ್ ಗೆ ಆಗಾಗ ಕರೆಯೊಂದು ಬರುತ್ತಿರಬಹುದು. ನಾವು ಬ್ಯಾಮಕ್ ನಿಂದ ಕರೆ ಮಾಡುತ್ತಿದ್ದೇವೆ. ನಿಮಗೆ ಪರ್ಸನಲ್ ಲೋನ್ ತೆಗೆದುಕೊಳ್ಳುವ ಆಸಕ್ತಿ ಇದೆಯಾ.? ವಯಕ್ತಿಕ ಸಾಲದ ಮೇಲೆ ಆಫರ್ ಇದೆ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಕೆಲವು ಫೇಕ್ ಕಾಲ್ ಗಳು ಎಂದು ಹಲವರು ಕಾಲ್ ಅನ್ನು ಕಟ್ ಮಾಡಿ ಬಿಡುತ್ತಾರೆ. ಇನ್ನು ಕೆಲವರು ಲೋನ್ ಬೇಕು ಎಂದುಕೊಂಡಿರುವವರು ಇಂಥಹ ಕಾಲ್ ಗಳನ್ನು ಸ್ವೀಕರಿಸುತ್ತಾರೆ.
ಪೂರ್ವ ಅನುಮೋದಿತ ಸಾಲದಲ್ಲಿ ನಿಮಗೆ ಕಡಿಮೆ ಬಡ್ಡಿಯನ್ನು ವಿಧಿಸಲಾಗುತ್ತದೆ. ಬ್ಯಾಂಕ್ ಗೆ ಗ್ರಾಹಕನ ಆದಾಯದ ಮಾಹಿತಿ ಮೊದಲೇ ಇರುತ್ತದೆ. ಅವರ ವಹಿವಾಟು ಉತ್ತಮವಾಗಿರುತ್ತದೆ. ಹೀಗಾಗಿ ಬ್ಯಾಂಕ್ ಗಳು ಪ್ರೀ ಅಪ್ರೂವ್ಡ್ ಲೋನ್ ನೀಡಲು ಮುಂದಾಗುತ್ತದೆ. ಅದರಲ್ಲೂ ಗ್ರಾಹಕನಿಗೆ ಕಡಿಮೆ ಬಡ್ಡಿಯನ್ನು ವಿಧಿಸುತ್ತದೆ. ಈ ಲೋನ್ ಅನ್ನು ಗ್ರಾಹಕರು ಪಡೆದರೆ, ಅವರಿಗೆ ಬಹಳ ಉಪಯುಕ್ತ ವಾಗುವುದರಲ್ಲಿ ಅನುಮಾನ ಇಲ್ಲ.
ಇನ್ನು ಬ್ಯಾಂಕ್ ಗಳು ಗ್ರಾಹಕನ ಕ್ರೆಡಿಟ್ ಸ್ಕೋರ್, ಆದಾಯ, ಸಾಲ ಹಿಂತಿರುಗಿಸುವ ಸಾಮರ್ಥ್ಯದ ಬಗ್ಗೆ ಮಾಹಿತಿಯನ್ನು ಹೊಂದಿರುತ್ತಾರೆ. ಪ್ರಿ ಅಪ್ರೂವ್ಡ್ ಸಾಲಗಳನ್ನು ಸಾಮಾನ್ಯ ಬ್ಯಾಂಕ್ ಗಳು, ಕ್ರಡಿಟ್ ಯೂನಿಯನ್, ಹಣಕಾಸು ಸಂಸ್ಥೆಗಳು ನೀಡುತ್ತವೆ. ನಿಮ್ಮ ಅಕೌಂಟ್ ಅನ್ನು ನೀವು ಉತ್ತಮವಾಗಿ ನಿಭಾಯಿಸಿದ್ದರೆ, ಈ ಹಿಂದೆ ಪಡೆದ ಸಾಲಗಳನ್ನು ಮರುಪಾವತಿ ಮಾಡಿದ್ದರೆ, ಅದರ ಮಾಹಿತಿಯನ್ನೂ ಬ್ಯಾಂಕ್ ಗಳು ತಿಳಿದಿರುತ್ತವೆ.
ಹೀಗಾಗಿ ಬ್ಯಾಂಕ್ ಗಳು ಪ್ರೀ ಅಪ್ರೂವ್ಡ್ ಸಾಲಗಳನ್ನು ನೀಡಲು ಮುಂದೆ ಬರುತ್ತವೆ. ಇನ್ನು ಹೀಗೆ ಪೂರ್ವ ಅನುಮೋದಿತ ಲೋನ್ ಪಡೆಯುವುದರಿಂದ ನಿಮ್ಮ ಸಮಯ ಉಳಿತಾಯವಾಗುತ್ತದೆ. ಬ್ಯಾಂಕ್ ಗೆ ತೆರಳಿ ಅರ್ಜಿ ತುಂಬಿ, ಬ್ಯಾಂಕ್ ಸಾಲ ನೀಡಲು ಒಪ್ಪಿಗೆ ಕೊಡುವವರೆಗೂ ಕಾಯುವ ಅಗತ್ಯ ಬೀಳುವುದಿಲ್ಲ. ಬಹಳ ಬೇಗ ನಿಮ್ಮ ಖಾತೆಗೆ ಸಾಲ ಕ್ರೆಡಿಟ್ ಆಗುತ್ತದೆ.
ಇನ್ನು ನೀವೇ ಹೋಗಿ ಸಾಲಕ್ಕಾಗಿ ಬೇಡಿಕೆ ಇಡುವುದಾದರೆ, ಏನನ್ನಾದರೂ ಅಡಮಾನ ಇಡಬೇಕಾಗುತ್ತದೆ. ಇಲ್ಲವೇ ಶ್ಯೂರಿಟಿ ಅನ್ನು ಬ್ಯಾಂಕ್ ಗೆ ಒದಗಿಸಬೇಕಾಗುತ್ತದೆ. ಆದರೆ, ಕೆಲವೊಮ್ಮೆ ಈ ಪ್ರೀ ಅಪ್ರೂವ್ಡ್ ಲೋನ್ ಗಳು ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಇನ್ನು ನೀವು ಈ ಸಾಲವನ್ನು ಪಡೆಯುವಾಗ, ಇದರ ಪ್ರಾಸೆಸಿಂಗ್ ಶುಲ್ಕ, ಷರತ್ತುಗಳು, ಸಾಲದ ಅವಧಿ, ಸಾಲಕ್ಕೆ ಬಡ್ಡಿಯ ಪ್ರಾಮಾಣ ಎಲ್ಲದರ ಬಗ್ಗೆಯೂ ಮಾಹಿತಿ ಪಡೆಯುವುದು ಸೂಕ್ತ.