Revenue Facts

Postoffice;ಪ್ರತಿ ತಿಂಗಳು 10 ಸಾವಿರ ಹೂಡಿಕೆ ಮಾಡಿ 16 ಲಕ್ಷ ರೂ.ರಿಟರ್ನ್ ಪಡೆಯಿರಿ

ನವದೆಹಲಿ;ಪ್ರತಿಯೊಬ್ಬರೂ ತಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕೆಲವು ಹೆಚ್ಚಿನ ಆದಾಯ ಗಳಿಸುವ ದೃಷ್ಟಿಯಿಂದ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಇಲ್ಲಿ ಅಪಾಯವೂ ಹೆಚ್ಸಿರುತ್ತದೆ. ಹೂಡಿಕೆ ಮಾಡಿದ ಹಣಕ್ಕೆ ಖಾತರಿ ಲಾಭ ನೀಡುವ, ವಿಶ್ವಾಸಾರ್ಹ ಯೋಜನೆಗಳು ಯಾವದು ಎಂದರೇ ಅದುವೇ ಫೋಸ್ಟ್​​ ಆಫೀಸ್​​ ಯೋಜನೆ. ಅಂಚೆ ಕಚೇರಿಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ.ನೀವು ನಿಮ್ಮ ಹಣವನ್ನು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯಲ್ಲಿ(Post Office Savings Scheme) ಹೂಡಿಕೆ ಮಾಡಬಹುದು.ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯಲ್ಲಿ 100 ರೂ.ಗಿಂತ ಕಡಿಮೆ ಮೊತ್ತವನ್ನು ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ಸ್ಕೀಮ್ ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆಯಾಗಿದ್ದು, ಇದು ಬ್ಯಾಂಕುಗಳು ನೀಡುವ ಸ್ಥಿರ ಠೇವಣಿ ಖಾತೆಗಳು ಅಥವಾ ಉಳಿತಾಯ ಖಾತೆಗಳಿಗೆ ಪರ್ಯಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ಠೇವಣಿ ಬಡ್ಡಿದರಗಳು ತುಂಬಾನೆ ಇಳಿಕೆಯಾಗತೊಡಗಿದೆ. ಹೀಗಾಗಿ ಜನರು ಕಡಿಮೆ ಹಣದಲ್ಲಿ ಹೆಚ್ಚಿನ ಲಾಭ ಪಡೆಯಲು ಬಯಸಿದ್ದಲ್ಲಿ, ಅಂಚೆ ಕಚೇರಿ ಯೋಜನೆಗಳಲ್ಲಿನ ಹೂಡಿಕೆಗಳು ಭದ್ರತೆ ಮತ್ತು ಹೆಚ್ಚಿನ ಆದಾಯವನ್ನು ನೀಡುವಲ್ಲಿ ಯಶಸ್ವಿಯಾಗಿವೆ.

ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯನ್ನು(Post Office Recurring Deposit) ಸರ್ಕಾರ ಖಾತರಿಪಡಿಸುತ್ತದೆ. ಅಂಚೆ ಕಛೇರಿಯ ಆರ್‌ಡಿ (Post Office RD) ಠೇವಣಿ ಖಾತೆಯು(Deposit account) ಸಣ್ಣ ಕಂತುಗಳನ್ನು ಠೇವಣಿ ಇಡುವ ಸರ್ಕಾರದ ಖಾತರಿಯ ಯೋಜನೆಯಾಗಿದ್ದು, ಇದರಲ್ಲಿ ನೀವು ಕೇವಲ 100 ರೂ.ಗಳ ಸಣ್ಣ ಮೊತ್ತದೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಗರಿಷ್ಠ ಹೂಡಿಕೆಯ ಮಿತಿಯಿಲ್ಲ, ನಿಮಗೆ ಬೇಕಾದಷ್ಟು ಹಣವನ್ನು ನೀವು ಹೂಡಿಕೆ ಮಾಡಬಹುದು. ಕಡಿಮೆ ಮಿತಿಯೊಂದಿಗೆ ಅಂದರೆ ಕೇವಲ 100 ರೂ.ಯಿಂದ ಶುರು ಮಾಡಬಹುದು ಜೊತೆಗೆ ಹೂಡಿಕೆ ಮೊತ್ತದ ಮೇಲೆ ಯಾವುದೇ ಮಿತಿ ಇರುವುದಿಲ್ಲ. ಉಳಿತಾಯ ಖಾತೆ(Savings Account) ಅಥವಾ ಬ್ಯಾಂಕಿನೊಂದಿಗಿನ ಸ್ಥಿರ ಠೇವಣಿ ಖಾತೆಗೆ ಹೋಲಿಸಿದರೆ, ನೀವು ಸ್ಕೀಮ್ ಅವಧಿಯನ್ನು ಆಯ್ಕೆಗಳ ಶ್ರೇಣಿಯಿಂದ ಆಯ್ಕೆ ಮಾಡಬಹುದು.

ಪ್ರತಿ ತಿಂಗಳು 10 ಸಾವಿರ ಹೂಡಿಕೆ ಮಾಡಿದರೆ, ನಿಮಗೆ 16 ಲಕ್ಷ ಸಿಗುತ್ತದೆ:

ನೀವು ಅಂಚೆ ಕಚೇರಿಯ ಮರುಕಳಿಸುವ ಠೇವಣಿ ಯೋಜನೆಯಲ್ಲಿ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯಲ್ಲಿ ಪ್ರತಿ ತಿಂಗಳು 10,000 ರೂ.ಗಳನ್ನು ಹೂಡಿಕೆ ಮಾಡುವುದರಿಂದ ಪ್ರಸ್ತುತ 5.8% ಬಡ್ಡಿದರದ ಪ್ರಕಾರ 10 ವರ್ಷಗಳ ಅವಧಿಯಲ್ಲಿ 16 ಲಕ್ಷ ರೂ.ಗಳಿಸಬಹುದು.

* ಪ್ರತಿ ತಿಂಗಳ ಹೂಡಿಕೆ – 10,000 ರೂ.
* ಬಡ್ಡಿ ದರ – 5.8%
* ಮುಕ್ತಾಯ ಅವಧಿ – 10 ವರ್ಷಗಳು
*10 ವರ್ಷಗಳ ನಂತರ ಮೆಚ್ಯೂರಿಟಿ ಮೊತ್ತ = 16,28,963 ರೂ.

Exit mobile version