Revenue Facts

Post Office MIS Scheme; ಈ ಯೋಜನೆಯಲ್ಲಿ ಪ್ರತಿ ತಿಂಗಳು ಆದಾಯ ಗಳಿಸಿ

#Post Office #MIS Scheme #Earn income #every month # plan

ಬೆಂಗಳೂರು;ಪೋಸ್ಟ್‌ ಆಫೀಸ್‌ನಲ್ಲಿ(Postoffice) ಸಾಕಷ್ಟು ಉಳಿತಾಯ ಯೋಜನೆಗಳಿವೆ. ಇಲ್ಲಿಟ್ಟ ಹಣ ಸೇಫಾಗಿರುತ್ತೆ. ಜೊತೆಗೆ ಒಳ್ಳೆ ಬಡ್ಡಿ(Intrest) ಕೂಡ ಬರುತ್ತೆ.ಈ ವಿಶೇಷ ಯೋಜನೆಗಳಲ್ಲಿ ಒಂದು ಹೂಡಿಕೆದಾರರಿಗೆ(investors) ಬಡ್ಡಿಯ ಮೂಲಕ ಮಾತ್ರ ಲಕ್ಷಗಳನ್ನು ಗಳಿಸಲು ಸಹಾಯ ಮಾಡುತ್ತದೆ.ಅಂಚೆ ಕಚೇರಿಯಲ್ಲಿ ಉತ್ತಮ ಹೂಡಿಕೆ ಯೋಜನೆಗಳಿವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಸ್ಥಿರ ಆದಾಯವನ್ನು ಹೊಂದಿರುತ್ತೀರಿ ಮತ್ತು ಅದೇ ಸಮಯದಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಶೇಕಡಾ 7.5 ರಷ್ಟು ಬಡ್ಡಿ ದರದೊಂದಿಗೆ ಈ ಪೋಸ್ಟ್ ಆಫೀಸ್ ಯೋಜನೆಯು ಅತ್ಯುತ್ತಮ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಮಾಸಿಕ ಉಳಿತಾಯ ಯೋಜನೆ (Monthly Savings Scheme) ಎಂದರೆ, ನಿಶ್ಚಿತ ಆದಾಯವನ್ನು ಕೊಡುವಂತಹ ಒಂದು ಯೋಜನೆ ಆಗಿದೆ. ಈ ಯೋಜನೆಯ ಅವಧಿ ಐದು ವರ್ಷಗಳು.

ನೀವು ಸಣ್ಣ ವಯಸ್ಸಿನಿಂದಲೇ ಹೂಡಿಕೆ ಆರಂಭಿಸಿದರೆ ಈ ಯೋಜನೆಯ ಅಡಿಯಲ್ಲಿ ಐದು ವರ್ಷಗಳ ಮೆಚುರಿಟಿ(Meturity) ಅವಧಿಯಲ್ಲಿ ಲಕ್ಷಗಟ್ಟಲೆ ಹಣ ಸಂಪಾದಿಸಿಕೊಳ್ಳಲು ಸಾಧ್ಯವಿದೆ.ಹೂಡಿಕೆದಾರರು ವಿವಿಧ ಅವಧಿಗಳಿಗೆ ಪೋಸ್ಟ್ ಆಫೀಸ್‌(Postoffice)ನ ಈ ಉಳಿತಾಯ ಯೋಜನೆಯಲ್ಲಿ(Savings Plan) ಹೂಡಿಕೆ ಮಾಡಬಹುದು.ಮಾಸಿಕ ಆದಾಯ ಯೋಜನೆಯಲ್ಲಿ(MIS) ತೆರೆಯಲಾದ ಖಾತೆಯನ್ನು ನೀವು ಏಕಾಂಗಿಯಾಗಿ ಅಥವಾ ನಿಮ್ಮ ಜೀವನ ಸಂಗಾತಿಯೊಂದಿಗೆ ಎರಡೂ ರೀತಿಯಲ್ಲಿ ತೆರೆಯಬಹುದು. ಈ ಯೋಜನೆಯಲ್ಲಿ ಇಬ್ಬರು ಅಥವಾ ಮೂರು ಜನರು ಜಂಟಿಯಾಗಿ ಖಾತೆಯನ್ನು ತೆರೆಯಬಹುದು. ನೀವು ವೈಯಕ್ತಿಕ ಖಾತೆಯಲ್ಲಿ ಕನಿಷ್ಠ 1,000 ರೂ. ಮತ್ತು ಗರಿಷ್ಠ 4.5 ಲಕ್ಷ ರೂ.ಗಳನ್ನು POMIS ಅಡಿಯಲ್ಲಿ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ(Jointaccount) ಗರಿಷ್ಠ ಹಣದ ಮಿತಿ 9 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.ಹತ್ತಿರದ ಅಂಚೆ ಕಚೇರಿಗೆ(Postoffice) ಹೋಗಿ ನಿಮ್ಮ ಉಳಿತಾಯ ಖಾತೆಯನ್ನು (Savings Account) ತೆರೆಯಬಹುದು. ಮಾಸಿಕ ಆದಾಯ ಯೋಜನೆಗಾಗಿ ಪ್ರತ್ಯೇಕ ಫಾರ್ಮ್ ಅನ್ನು ಭರ್ತಿ ಮಾಡಬೇಕು. POMIS ನ ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮಗೆ ಗುರುತಿನ ಚೀಟಿ, ವಸತಿ ಪುರಾವೆ, 2 ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು ಬೇಕಾಗುತ್ತವೆ. ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮಗೆ ಸಾಕ್ಷಿಯೂ ಬೇಕಾಗುತ್ತದೆ. ಖಾತೆಯನ್ನು ತೆರೆಯುವಾಗ ನೀವು ನಾಮಿನಿಯ ಹೆಸರನ್ನು ಭರ್ತಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ನಾಮಿನಿಯ ಹೆಸರನ್ನು ಭರ್ತಿ ಮಾಡಿದ ನಂತರ ಅವರ ಸಹಿಯೂ ಅಗತ್ಯವಾಗಿರುತ್ತದೆ.

Exit mobile version