Revenue Facts

ಆಧಾರ್ ಜೋಡಣೆ ಮಾಡದಿದ್ದಲ್ಲಿ ಅಂಚೆ ಕಚೇರಿ ಖಾತೆಗಳು ನಿಷ್ಕ್ರಿಯ

ನವದೆಹಲಿ;ಆಧಾರ್ ಸಂಖ್ಯೆಯನ್ನುಅಂಚೆ ಕಚೇರಿಯ ಖಾತೆಗಳಿಗೆ,ಪಿಪಿಎಫ್(PF), ಎನ್.ಎಸ್.ಸಿ.(NSC) ಖಾತೆಗಳಿಗೆ ಜೋಡಣೆ ಮಾಡುವದನ್ನು ಕಡ್ಡಾಯಗೊಳಿಸಿದೆ,ಆಧಾರ್ ಜೋಡಣೆ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ,ಆಧಾರ್ ಜೋಡಣೆ(Aadharlink) ಮಾಡದಿದ್ದಲ್ಲಿ ಈ ಖಾತೆಗಳು ನಿಷ್ಕ್ರಿಯಗೊಳ್ಳಲಿವೆ.ಅಂಚೆ ಕಚೇರಿಯಲ್ಲಿ(Postoffice) ಪಿಪಿಎಫ್, ಎನ್‌ಎಸ್‌ಸಿ, ಕೆಪಿಪಿ, ತಿಂಗಳ ಆದಾಯ ಯೋಜನೆ, ಎಸ್‌ಸಿಎಸ್‌ಎಸ್‌, ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳನ್ನು ತೆರೆಯಲು ಆಧಾರ್(Aadhar) ಕಡ್ಡಾಯ ಎಂದು ಮಾರ್ಚ್ 31ರಂದೇ ಕೇಂದ್ರ ಸರ್ಕಾರ ಪ್ರಕಟಿಸಿತ್ತು.ಆಧಾರ್ ಸಲ್ಲಿಸದಿದ್ದರೆ ಅಂಚೆ ಕಚೇರಿಯಲ್ಲಿನ ನಿಮ್ಮ ಖಾತೆ ಹಾಗೂ ಇತರ ಸ್ಕೀಮ್​ಗಳು ಸ್ಥಗಿತಗೊಳ್ಳುತ್ತವೆ. ಅಂಚೆ ಕಚೇರಿಯಲ್ಲಿ ಅಲ್ಲದಿದ್ದರೂ ಯಾವುದೇ ಬ್ಯಾಂಕ್​ನಲ್ಲಾದರೂ ನೀವು ಈ ಉಳಿತಾಯ ಯೋಜನೆಗಳನ್ನು ಹೊಂದಿದ್ದರೆ ಅಲ್ಲೂ ಕೂಡ ಸೆಪ್ಟೆಂಬರ್ 30ರೊಳಗೆ ಆಧಾರ್ ನಂಬರ್ ಕೊಡಬೇಕು.

 

ಹಳೆಯ ಖಾತೆಗಳಿಗೆ ಆರು ತಿಂಗಳ ಗಡುವು ನೀಡಿತ್ತು. ಆ ಗಡುವು ಈಗ ಹತ್ತಿರ ಬಂದಿದೆ.ಅವಧಿಯೊಳಗೆಲ್ಲಿ ಠೇವಣಿದಾರರು(Depositors) ತಮ್ಮ ಆಧಾರ್ ಸಂಖ್ಯೆಯನ್ನು ನೀಡಲು ವಿಫಲರಾದರೆ, ಅವರ ಬ್ಯಾಂಕ್ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡದಿರುವುದು,ಬ್ಯಾಂಕ್ ಖಾತೆಗಳಿಗೆ ಮೆಚ್ಯೂರಿಟಿ(mechrity) ಮೊತ್ತವನ್ನು ಜಮಾ ಮಾಡುವುದಿಲ್ಲ.ಸಣ್ಣ ಉಳಿತಾಯ ಯೋಜನೆ ಹೊಂದಿರುವವರು ಆಧಾರ್ ನಂಬರ್(Aadharnumber) ಒದಗಿಸದಿದ್ದರೆ ಅಕ್ಟೋಬರ್ 1ಕ್ಕೆ ಅವರ ಸ್ಕೀಮ್​ಗಳು ಫ್ರೀಜ್ ಆಗುತ್ತವೆ.ಆಧಾರ್ ಸಂಖ್ಯೆ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿದವರು ಆಧಾರ್ ಸಂಖ್ಯೆ ದೊರೆತಿಲ್ಲವಾದಲ್ಲಿ, 28 ಅಂಕಿಯ ಇಐಡಿ(Adhar Enrolment No) ಸಂಖ್ಯೆಯನ್ನು ನೀಡಬಹುದಾಗಿರುತ್ತದೆ. ನಿಮ್ಮ ಇಐಡಿ ಸಂಖ್ಯೆಗೆ ಯಶಸ್ವಿಯಾಗಿ ಆಧಾರ್ ಸಂಖ್ಯೆ ಲಭ್ಯವಾದಲ್ಲಿ ಇಲಾಖೆ ವತಿಯಿಂದಲೇ ಅದನ್ನು ಸೇರಿಸಲಾಗುವುದು.

Exit mobile version