Revenue Facts

ಪಿಎಂ ಕಿಸಾನ್​ ಹಣ ನಿಮಗೆ ಬಂದಿಲ್ವಾ,ಚೆಕ್‌ ಮಾಡುವುದು ಹೇಗೆ? ಆಗಿಲ್ಲದಿದ್ದರೆ ಏನು ಮಾಡಬೇಕು?

ಪಿಎಂ ಕಿಸಾನ್​ ಹಣ ನಿಮಗೆ ಬಂದಿಲ್ವಾ,ಚೆಕ್‌ ಮಾಡುವುದು ಹೇಗೆ? ಆಗಿಲ್ಲದಿದ್ದರೆ ಏನು ಮಾಡಬೇಕು?

#PM #Kisan #money #received #check
ನವದೆಹಲಿ;ಪಿಎಂ ಕಿಸಾನ್ ಯೋಜನೆಯ ಹಣ ನಿಮ್ಮ ಖಾತೆಗೆ ಬರದಿದ್ದರೆ ಅಥವಾ ಯಾವುದೇ ತಪ್ಪಿನಿಂದ ವಿಳಂಬವಾಗಿದ್ದರೆ, ಆ ತಪ್ಪನ್ನು ಸರಿಪಡಿಸಿಕೊಳ್ಳಿ, ತಡೆ ಹಿಡಿಯಲಾಗಿರುವ ಯೋಜನೆಯ ಒಟ್ಟು ಮೊತ್ತ ನಿಮ್ಮ ಖಾತೆಗೆ ಜಮಾವಾಗಲಿದೆ.ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ ಸರ್ಕಾರ 16 ಕಂತುಗಳಲ್ಲಿ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ. ಇಲ್ಲಿಯವರೆಗೆ ರೈತರಿಗೆ ನೀಡಲಾಗಿರುವ ಒಟ್ಟಾರೆ ಮೊತ್ತ 3 ಲಕ್ಷ ಕೋಟಿ ರೂಗೂ ಹೆಚ್ಚು. EKYC ಅಪ್​ಡೇಟ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ EKYC ಮಾಡಿಸಿಯೂ ಹಣ ಬಂದಿಲ್ಲದೇ ಇದ್ದರೆ ದೂರು ಕೊಡಲು ಅವಕಾಶಗಳಿವೆ.ನೀವು ಅರ್ಹರಾಗಿದ್ದರೆ ಒಂದು ಪೈಸೆಯೂ ನಷ್ಟವಾಗುವುದಿಲ್ಲ. ನೀವು ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ದಾಖಲಾಗಿದ್ದರೂ ಸಹ, ಕೆಲವು ಕಾರಣಗಳಿಂದಾಗಿ ನಿಮಗೆ ಬರಬೇಕಾದ ಹಣ ಜಮಾ ಆಗದೆ ಇರಬಹುದು. ನೋಂದಣಿ ಸಮಯದಲ್ಲಿ ತಪ್ಪು ವಿಳಾಸ, ತಪ್ಪು ಬ್ಯಾಂಕ್ ಖಾತೆ ಸಂಖ್ಯೆ, NPCI ಅಥವಾ PM ಕಿಸಾನ್ ಖಾತೆಯ eKYC ಯಲ್ಲಿ ಆಧಾರ್ ಲಿಂಕ್​ ಸಮಸ್ಯೆಯಿಂದ ನಿಮ್ಮ ಖಾತೆಗೆ ಹಣ ಬಂದಿರುವುದಿಲ್ಲ.ಸಹಾಯವಾಣಿ ನಂಬರ್​ಗಳಿವೆ. ಪಿಎಂ ಕಿಸಾನ್ ಪೋರ್ಟಲ್​ಗೆ ಹೋಗಿ (pmkisan.gov.in/) ನೇರವಾಗಿ ದೂರು ಸಲ್ಲಿಸುವ ಅವಕಾಶ ಇದೆ.ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ 155261 ಅನ್ನು ಸಂಪರ್ಕಿಸಿ ನೀವು ಪರಿಹಾರವನ್ನು ಪಡೆಯಬಹುದು. ಅದೇ ರೀತಿ, ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ- 18001155266 ಗೆ ಕರೆ ಮಾಡುವ ಮೂಲಕ, ನೀವು ಇನ್ನೂ ಹಣವನ್ನು ಏಕೆ ಸ್ವೀಕರಿಸಿಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆ ಕಂತಿನ ಸ್ಟೇಟಸ್‌ ಚೆಕ್‌ ಮಾಡುವ ವಿಧಾನ 

SMS ಮೂಲಕ : 16ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಎಲ್ಲ ಫಲಾನುಭವಿಗಳ ಖಾತೆಗೆ ತಲಾ 2000 ರೂ. ಹಣ ಠೇವಣಿ(Deposit) ಆಗಲಿದೆ. ನಿಮ್ಮ ಖಾತೆಗೆ ಹಣ ಜಮೆಯಾದ ಕೂಡ ಬ್ಯಾಂಕ್‌ನಿಂದ ನಿಮ್ಮ ಫೋನ್‌ ಸಂಖ್ಯೆಗೆ ಮೆಸೇಜ್ ಬರುತ್ತದೆ. ಈ ಮೂಲಕ ನಿಮ್ಮ ಖಾತೆಗೆ ಕಂತು ಹಣ ವರ್ಗಾವಣೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗ್ಯಾರಂಟಿ ಮಾಡಿಕೊಳ್ಳಬಹುದು.

ATM ಮೂಲಕ : ನಿಮ್ಮ ಮೊಬೈಲ್‌ಗೆ ಅಂತಹ ಯಾವುದೇ ಮೆಸೇಜ್ ಬಂದಿಲ್ಲದಿದ್ದರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹತ್ತಿರದ ಎಟಿಎಂಗೆ ಭೇಟಿ ನೀಡುವ ಮೂಲಕ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು. ಈ ಮೂಲಕ ನಿಮ್ಮ ಖಾತೆಗೆ ಪಿಎಂ ಕಿಸಾನ್‌ ಕಂತು ಜಮೆ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.

ಪಾಸ್‌ಬುಕ್‌ ಎಂಟ್ರಿ ಮಾಡಿಸುವುದು : ನೀವು ಎಟಿಎಂ ಹೊಂದಿಲ್ಲದಿದ್ದರೆ. ಈ ಪರಿಸ್ಥಿತಿಯಲ್ಲಿ, ಖಾತೆಗೆ ಕಂತಿನ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಪಾಸ್‌ಬುಕ್ ಅನ್ನು ಎಂಟ್ರಿ ಮಡಿಸಬಹುದು.

ದೂರು ಸಲ್ಲಿಸುವ ಕ್ರಮಗಳು

ಇಮೇಲ್ ಐಡಿ: pmkisan-ict@gov.in ಮತ್ತು pmkisan-funds@gov.in

ಪಿಎಂ ಕಿಸಾನ್ ಹೆಲ್ಪ್​ಲೈನ್ ನಂಬರ್: 155261 / 011-24300606

ಪಿಎಂ ಕಿಸಾನ್ ಟೋಲ್ ಫ್ರೀ ನಂಬರ್: 1800-115-526

ಪೋರ್ಟಲ್​ನಲ್ಲಿ ನೇರ ಲಿಂಕ್: pmkisan.gov.in/Grievance.aspx

Exit mobile version