ನವದೆಹಲಿ;ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿರುವ ಸ್ವಯಂಪ್ರೇರಿತ ಉಳಿತಾಯ ಯೋಜನೆಯಾಗಿದೆ. 2004 ರಲ್ಲಿ ಪ್ರಾರಂಭವಾದ ಈ ಯೋಜನೆಯು ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿತ್ತು. ನಂತರ ಇದನ್ನು 18 ರಿಂದ 70 ವರ್ಷ ವಯಸ್ಸಿನ ಎಲ್ಲಾ ನಾಗರಿಕರಿಗೆ ವಿಸ್ತರಿಸಲಾಯಿತು.ನಿವೃತ್ತಿಯ ಯೋಜನೆಯು ನಿಮ್ಮ ಮೊದಲ ಕೆಲಸಕ್ಕೆ ನೀವು ಕಾಲಿಡುವ ಸಮಯದಿಂದ ಪ್ರಾರಂಭವಾಗಬೇಕು. ಇದರಿಂದ ನಿವೃತ್ತಿಯ ಸಮಯದಲ್ಲಿ ಗರಿಷ್ಠ ಪಿಂಚಣಿ ಪ್ರಯೋಜನವನ್ನು ಪಡೆಯಬಹುದು. 21 ವರ್ಷದಿಂದ ಎನ್‌ಪಿಎಸ್‌ನಲ್ಲಿ ಪ್ರತಿ ತಿಂಗಳು 4,500 ರೂ.ಗಳನ್ನು ಹೂಡಿಕೆ ಮಾಡಿದರೆ, ನಂತರ 60 ವರ್ಷ ವಯಸ್ಸಿನವರೆಗೆ, 39 ವರ್ಷಗಳವರೆಗೆ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.18 ರಿಂದ 70 ವರ್ಷಗಳ ನಡುವಿನ ಯಾವುದೇ ಭಾರತೀಯ ನಾಗರಿಕ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಹೂಡಿಕೆಯನ್ನು ಪ್ರಾರಂಭಿಸಬಹುದು. ಅನಿವಾಸಿ ಭಾರತೀಯರೂ ಇದಕ್ಕೆ ಅರ್ಹರು. ಕನಿಷ್ಠ 20 ವರ್ಷಗಳ ಕಾಲ NPS (Nps) ನಲ್ಲಿ ಹೂಡಿಕೆ ಮಾಡುವುದು ಅವಶ್ಯಕ.ಈ ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡುವದರಿಂದ ಉತ್ತಮ ಆಧಾಯವನ್ನು ಪಡೆಯಬಹುದಾಗಿದೆ. ಪ್ರತಿ ದಿನ 200 ರೂಪಾಯಿ ಉಳಿಸಿ ತಿಂಗಳಿಗೆ 50,000 ಸಾವಿರ ಹಣ ಪಡೆಯಬಹುದಾಗಿದೆ.
ಆಧಾಯ ತೆರಿಗೆ ಕಾಯಿದೆಯ ಸೆಕ್ಷನ್ 80CCD (1B ) ಪ್ರಕಾರ, ವರ್ಷಕ್ಕೆ ರೂ. 50,000 ಕಡಿತಗೊಳಿಸಬಹುದು. ಆಧಾಯ ತೆರಿಗೆ ಕಾಯಿದೆಯ ಸೆಕ್ಷನ್ 80CCD (1c) ಪ್ರಕಾರ, ಉದ್ಯೋಗಸ್ತರಿಂದ NPS ಯೋಜನೆಯಲ್ಲಿ ಉಳಿತಾಯ ಮಾಡಿದರೆ ವರ್ಷಕ್ಕೆ ರೂ. 50,000 ಹೆಚ್ಚುವರಿ ವಿನಾಯಿತಿಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ.ನೀವು ಎಷ್ಟು ಬೇಗ ಉಳಿತಾಯವನ್ನು ಪ್ರಾರಂಭಿಸುತ್ತೀರೋ ಅಷ್ಟು ದೊಡ್ಡ ಆದಾಯ. ಉಳಿತಾಯಕ್ಕಾಗಿ ಹಲವು ಉಳಿತಾಯ ಯೋಜನೆಗಳಿವೆ. ಕೆಲವು ಉಳಿತಾಯ ಯೋಜನೆಗಳು ಉತ್ತಮ ಆದಾಯವನ್ನು ನೀಡುತ್ತವೆ. ಅಂತಹ ಒಂದು ಸರ್ಕಾರಿ ಯೋಜನೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS). ಇದನ್ನು ರಾಷ್ಟ್ರೀಯ ಪಿಂಚಣಿ ಯೋಜನೆ ಎಂದು ಕರೆಯಲಾಗುತ್ತದೆ.NPS ಕ್ಯಾಲ್ಕುಲೇಟರ್ ಪ್ರಕಾರ, ಒಬ್ಬ ವ್ಯಕ್ತಿಯು 25 ರಿಂದ 60 ವರ್ಷ ವಯಸ್ಸಿನವರು NPS ಗೆ ತಿಂಗಳಿಗೆ 6,531 ರೂಪಾಯಿಗಳನ್ನು ಹೂಡಿಕೆ ಮಾಡಿದರೆ 60 ವರ್ಷಗಳ ನಂತರ ತಿಂಗಳಿಗೆ 50,005 ರೂಪಾಯಿಗಳನ್ನು ಪಡೆಯುತ್ತಾರೆ. 60 ವರ್ಷಕ್ಕೆ, ಒಬ್ಬ ವ್ಯಕ್ತಿಯು 27,43,020 ವರೆಗೆ ಹೂಡಿಕೆ ಮಾಡಿದಂತೆ ಆಗುತ್ತದೆ. ಅಂದರೆ ಬಡ್ಡಿ ಎಲ್ಲಾ ಸೇರಿ ಆ ವ್ಯಕ್ತಿ ಬಳಿ 2,50,02,476 ವರೆಗೆ ಸಂಗ್ರಹವಾಗುತ್ತದೆ. ಈ ಮೂಲಕ ತಿಂಗಳಿಗೆ 50,005 ರೂಪಾಯಿ ಪಿಂಚಣಿ ಪಡೆಯುವುದು ಸಾಧ್ಯವಾಗುತ್ತದೆ. ರಾಷ್ಟ್ರೀಯ ಪಿಂಚಣಿ ಕೇಂದ್ರ ಸರ್ಕಾರವು ಒದಗಿಸುವ ಸಾಮಾಜಿಕ ಭದ್ರತಾ ಹೂಡಿಕೆ ಯೋಜನೆಯಾಗಿದೆ.