Revenue Facts

ಆನ್‌ ಲೈನ್‌ ಶಾಪಿಂಗ್‌ ಮಾಡುವ ಮುನ್ನ ಇರಲಿ ಎಚ್ಚರ !!

ಆನ್‌ ಲೈನ್‌ ಶಾಪಿಂಗ್‌ ಮಾಡುವ ಮುನ್ನ ಇರಲಿ ಎಚ್ಚರ !!

ಬೆಂಗಳೂರು, ಡಿ. 12: ಶಾಪಿಂಗ್ ಶಾಪಿಂಗ್ ಶಾಪಿಂಗ್.. ಎಲ್ಲಿ ನೋಡಿದರೂ ಶಾಪಿಂಗ್ ಮಾಲ್ ಗಳು, ಫುಟ್ ಪಾತ್ ಗಳಲ್ಲೂ ಶಾಪಿಂಗ್, ಅಷ್ಟೇ ಅಲ್ಲದೇ ಆನ್ ಲೈನ್ ನಲ್ಲೂ ಶಾಪಿಂಗ್. ಆನ್‌ ಲೈನ್‌ ಶಾಪಿಂಗ್‌ ಮಾಡುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಆನ್‌ಲೈನ್ ಶಾಪಿಂಗ್ ಪ್ರಾರಂಭವಾದಾಗಿನಿಂದ ಅಂದರೆ ಕಳೆದ 5-6 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆಯಂತೆ. ಫ್ಯಾಶನ್‌ ಉದ್ಯಮವೂ ಕೂಡ ಬದಲಾಗಿದೆ. ದಿನ ದಿನವೂ ಹೊಸ ಹೊಸ ಡಿಸೈನರ್‌ ಪ್ರಾಡಕ್ಟ್‌ ಗಳು ಮಾರುಕಟ್ಟೆಯಲ್ಲಿ ಸುಲಭವಅಗಿ ಜನ ಸಾಮಾನ್ಯರ ಕೈ ಸೇರುತ್ತಿವೆ. ಈ ಲೇಖನದಲ್ಲಿ ಆನ್‌ ಲೈನ್‌ ಶಾಪಿಂಗ್‌ ಹಾಗೂ ಪುರಷರ ಶೂ ಖರೀದಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ..

ವಿವಿಧ ಕಾರಣಗಳಿಂದಾಗಿ ಆನ್‌ಲೈನ್ ಶಾಪಿಂಗ್ ಹೆಚ್ಚು ಜನಪ್ರಿಯವಾಗುತ್ತಿದೆ. ಆನ್‌ಲೈನ್ ಶಾಪಿಂಗ್‌ನಲ್ಲಿ ಜನ ಸಾಮಾನ್ಯರು ಆಸಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಗ್ರಹಕರಿಗೆ ಆನ್‌ ಲೈನ್‌ ಶಾಪಿಂಗ್‌ ಸುಲಭವಾಗಿದ್ದು, ಕೈಗೆಟ್ಟುಕುವಂತಿದೆ. ಗ್ರಾಹಕರು ಉತ್ಪನ್ನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಕೂಡ ವಿವಿಧ ರೀತಿಯ ಸರಕುಗಳನ್ನು ಒಳಗೊಂಡಿರುತ್ತವೆ. ಜನರ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟ ಮತ್ತು ಸೌಮ್ಯ ಗುಣಮಟ್ಟದ ಪ್ರಾಡಕ್ಟ್‌ ಗಳು ಲಭ್ಯವಿರುತ್ತದೆ. ಹೀಗಾಗಿ ಎಲ್ಲರೂ ಆನ್‌ ಲೈನ್‌ ಮೊರೆ ಹೋಗುತ್ತಿದ್ದಾರೆ. ಆದರೆ, ಕೆಲ ಎಚ್ಚರಿಕೆಗಳಂತೂ ಇರಲೇ ಬೇಕು. ಆನ್‌ ಲೈನ್‌ ಶಾಪಿಂಗ್‌ ಮಾಡುವವರು ಈ ಅಂಶಗಳನ್ನು ತಪ್ಪದೇ ಗಮನಿಸಿ.

ಆನ್‌ ಲೈನ್‌ ಶಾಪಿಂಗ್‌ ನಲ್ಲಿ ಇರಲಿ ಎಚ್ಚರ..!!

ಆನ್‌ ಲೈನ್‌ ನಲ್ಲಿ ಶಾಪಿಂಗ್‌ ಮಾಡುವುದು ಸುಲಭವಾದರೂ ಕೂಡ ಬಹಳ ಎಚ್ಚರ ವಹಿಸಬೇಕು. ನೀವು ಖರೀದಿಸಬೇಕು ಎಂದುಕೊಂಡಿರುವ ವಸ್ತುವಿನ ಬಗ್ಗೆ ಸರಿಯಾಗಿ ಗಮನಿಸಿ. ಪ್ರಾಡಕ್ಟ್‌ ಬಗ್ಗೆ ಕೊಟ್ಟಿರುವ ಪ್ರತಿಯೊಂದು ವಿವರವನ್ನು ತಪ್ಪದೇ ಓದಿ. ಪ್ರಾಡಕ್ಟ್‌ ನ ಸೈಜ್‌, ಬಣ್ಣ, ಕ್ವಾಲಿಟಿ ಎಲ್ಲವನ್ನೂ ಚೆಕ್‌ ಮಾಡಿ. ಈಗಾಗಲೇ ಆ ಪ್ರಾಡಕ್ಟ್‌ ಅನ್ನು ಖರೀದಿಸುವವರು ವಿಮರ್ಶೆಯನ್ನು ಹಾಕಿರುತ್ತಾರೆ. ರಿವ್ಯೂವ್‌ ಗಳನ್ನು ತಪ್ಪದೇ ಓದಿ. ಅದರಿಂದ ನಿಮಗೆ ಒಂದು ಐಡಿಯಾ ಸಿಗುತ್ತದೆ.

ಪ್ರಾಡಕ್ಟ್‌ ಬಗ್ಗೆ ತಿಳಿಯಿರಿ

ಇನ್ನು ಖರೀದಿಸುತ್ತಿರುವ ಪ್ರಾಡಕ್ಟ್‌ ಬೆಲೆಯನ್ನು ಕಂಪೇರ್‌ ಮಾಡಿ. ಅದರ ರಿಟರ್ನ್‌ ಹಾಗೂ ಎಕ್ಸ್‌ ಚೇಂಜ್‌ ಬಗ್ಗೆ ತಪ್ಪದೇ ಮಾಹಿತಿ ಪಡೆಯಿರಿ. ನೀವು ಖರೀದಿಸುತ್ತಿರುವ ಪ್ರಾಡಕ್ಟ್‌ ಯಾವ ಬ್ರ್ಯಾಂಡ್ ನದ್ದು. ಅದರ ಆದಾಯ ಮತ್ತು ವಿನಿಮಯದ ನೀತಿಯನ್ನು ಅರ್ಥಮಾಡಿಕೊಳ್ಳಿ. ಪ್ರಾಡಕ್ಟ್‌ ನ ರೇಟಿಂಗ್‌ ಅನ್ನು ನೋಡಿ, ಆಗ ಅದನ್ನು ಖರೀದಿಸಬೇಕೋ ಬೇಡವೋ ಎಂಬುದು ತಿಳಿಯುತ್ತದೆ. ನಂತರ ಆ ಪ್ರಾಡಕ್ಟ್‌ ಅನ್ನು ಯಾವಾಗ, ಹೇಗೆ, ಮತ್ತು ಎಷ್ಟು ದಿನಗಳ ಒಳಗೆ ಹಿಂತಿರುಗಿಸಬಹುದು. ಇಲ್ಲವೇ ವಿನಿಮಯ ಮಾಡಿಕೊಳ್ಳಬಹುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಹಣ ಪಾವತಿಸುವ ಮುನ್ನ ಚೆಕ್‌ ಮಾಡಿ

ಆನ್‌ ಲೈನ್‌ ಮೂಲಕ ಖರೀದಿಸುತ್ತಿರುವ ಪ್ರಾಡಕ್ಟ್‌ ಗೆ ಹಣ ಪಾವತಿಸುವ ಮುನ್ನ ಕೆಲ ಅಂಶಗಳನ್ನು ಖರೀದಿಸಬೇಕಾಗುತ್ತದೆ. ಕಾರ್ಡ್‌ ಸ್ವೈಪ್ ಮಾಡುವ ಮುನ್ನ ಬ್ರ್ಯಾಂಡ್‌ ನ ವಿಶ್ವಾಸಾಹರ್ತೆಯನ್ನು ಪರಿಶೀಲಿಸಿ. ಬ್ರ್ಯಾಂಡ್‌ ಗೆ ಸಂಬಂಧ ಪಟ್ಟ ಕಾಮೆಂಟ್‌ ಗಳನ್ನು ಓದಿ. ಆಗ ಬ್ರ್ಯಾಂಡ್‌ ಬಗ್ಗೆ ಇರುವ ಅಭಿಪ್ರಾಯ ತಿಳಿಯುತ್ತದೆ. ಹಣ ಪಾವತಿಸುವಾಗಲೂ ಗೇಟ್ವೇ ಸುರಕ್ಷಿತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ನಿಮ್ಮ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಗಳ ಮಾಹಿತಿ ಮೋಸಗಾರರ ಕೈಗೆ ಸಿಗದಂತೆ ಎಚ್ಚರವಹಿಸಿ. ವೆಬ್‌ ಸೈಟ್‌ ಗಳು ಸುರಕ್ಷತೆಗಾಗಿ ಪ್ರಮಾಣೀಕರಿದಿವೆಯೇ ಎಂದು ಚೆಕ್‌ ಮಾಡಿಕೊಳ್ಳಿ.

Exit mobile version