ಗ್ರೇಟರ್ ಬೆಂಗಳೂರು ಆಗುತ್ತಾ ನೆಲಮಂಗಲ? ಸರ್ಕಾರದ ಯೋಚನೆ ಏನು?

0
141

ಒಂದು ಮಹಾನಗರ ಬೆಳೆಯುತ್ತಾ ಅದರ ಸುತ್ತಮುತ್ತಿನ ಪ್ರದೇಶಗಳನ್ನು ತನ್ನ ಆಪೋಷನಕ್ಕೆ ತೆಗೆದುಕೊಳ್ಳುತ್ತದೆ. ಈಗಾಗಲೇ ಗ್ರೇಟರ್ ಡೆಲ್ಲಿ, ಗ್ರೇಟರ್ ಮುಂಬೈ ಉದಾಹರಣೆಗಳು ಇವೆ. ಅದೇ ರೀತಿ ಬೆಂಗಳೂರು ಸಹ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಹೊಂದಿಕೊಂಡಂತೆ ಗ್ರೇಟರ್ ಬೆಂಗಳೂರು ರಚಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ಭಾಗದಲ್ಲಿ ಬೆಂಗಳೂರನ್ನು ಮುಂದುವರಿಸಬೇಕು ಎಂಬ ಚಿಂತನೆಯನ್ನೂ ನಡೆಸಿದೆ.

ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡು ಅತಿವೇಗವಾಗಿ ಬೆಳೆಯುತ್ತಿರುವ ನೆಲಮಂಗಲ ಪಟ್ಟಣವನ್ನು ಸ್ಯಾಟಲೈಟ್ ಟೌನ್ ಆಗಿ ಪರಿವರ್ತಿಸಿ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.ಉಪನಗರ ರೈಲು ಹಾಗೂ ಮೆಟ್ರೋ ರೈಲುಗಳ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ‌.ಸುಧಾಕರ್ ಮುನ್ಸೂಚನೆ ನೀಡಿದ್ದಾರೆ.

ರಾಜಧಾನಿ ಬೆಂಗಳೂರು ಸುತ್ತ ಮುತ್ತಲಿನ 7-8 ನಗರಗಳನ್ನು ಸ್ಯಾಟಲೈಟ್ ನಗರಗಳನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶ ಸರ್ಕಾರಕ್ಕಿದೆ.ಇವುಗಳಲ್ಲಿ ನೆಲಮಂಗಲ ನಗರವೂ ಪ್ರಮುಖವಾಗಿದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಮೂಲಸೌಕರ್ಯಗಳ ಹೆಚ್ಚಳಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.

ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆಗಳು:
ನೆಲಮಂಗಲ ಸ್ಮಾರ್ಟ್‌ಸಿಟಿ ಮಾಡುವ ಸಚಿವರ ಈ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

“ಡಾ.ಕೆ.ಸುಧಾಕರ್ ನೆಲಮಂಗಲ ಸ್ಯಾಟಲೈಟ್ ಸಿಟಿ ಮಾಡುವ ವಿಚಾರ ಹೇಳಿದ್ದಾರೆ. ಮೂರುವರೆ ವರ್ಷಗಳಿಂದ ಮಾಡದವರು, ಮೂರು ತಿಂಗಳಲ್ಲಿ ಮಾಡ್ತಾರಾ?,” ಎಂದು ಪ್ರಶ್ನಿಸಿದ್ದಾರೆ.

2006ರಲ್ಲಿ ಮೂರು ಸ್ಯಾಟಲೈಟ್ ನಗರ ಮಾಡಲು ಮುಂದಾದೆ.ಬಿಡದಿಯಲ್ಲಿ ಸ್ಯಾಟಲೈಟ್ ಟೌನ್ ಮಾಡುವಾಗ ಕಾಂಗ್ರೆಸ್ ವಿರೋಧಿಸಿದ್ದರು. ಈಗ ಬೆಂಗಳೂರು ಏನು ಮಾಡಿದ್ದಾರೆ ಗೊತ್ತಿಲ್ವಾ? ಎಂಟು ಟೀಕಿಸಿದ್ದಾರೆ.

ನೆಲಮಂಗಲ ಈಗಾಗಲೇ ಸಾಕಷ್ಟು ಬೆಳದಿದೆ. ಬೆಂಗಳೂರಿನೊಂದಿಗೆ ಸೇರಿಕೊಂಡಿದೆ. ಇನ್ಯಾವಾಗ ಇವರು ಸ್ಯಾಟಲೈಟ್ ಟೌನ್ ಮಾಡೋದು. ಬಹುಷ ಅವರು ಮುಂದಿನ ಚುನಾವಣೆ ಮುಗಿದ ಮೇಲೆ ಮಾಡಬಹುದೇನೋ ಎಂದು ಸಚಿವ ಸುಧಾಕರ್ ಹೇಳಿಕೆಯನ್ನು ಎಚ್‌ಡಿಕೆ ವ್ಯಂಗ್ಯ ಮಾಡಿದ್ದಾರೆ.