Revenue Facts

ಸಣ್ಣ ಉದ್ಯಮವನ್ನು ಪ್ರಾರಂಭಿಸಬೇಕೆಂದಿದ್ದರೆ.. ಈ ಲೇಖನ ಓದಿ..

ಸಣ್ಣ ಉದ್ಯಮವನ್ನು ಪ್ರಾರಂಭಿಸಬೇಕೆಂದಿದ್ದರೆ.. ಈ ಲೇಖನ ಓದಿ..

ಬೆಂಗಳೂರು, ಜು. 24: ಮನಸ್ಸು ಮಾಡಿದರೆ ಮಾರ್ಗ ಕಂಡೇ ಕಾಣುತ್ತದೆ. ಏನಾದರೂ ಪುಟ್ಟದಾಗಿ ಬಿಸಿನೆಸ್ ಮಾಡಬೇಕು. ಆದರೆ ಏನು ಮಾಡುವುದು ಎಂದು ತಿಳಿಯದೇ ಯೋಚಿಸುತ್ತಿರುವವರಿಗೆ ಇಲ್ಲಿ ಸರಳವಾದ ಟಿಪ್ಸ್ ಗಳನ್ನು ಕೊಡಲಾಗಿದೆ. ಇದರಲ್ಲಿ ಯಾವುದಾದರೂ ನಿಮಗೆ ಸೂಕ್ತ ಎನಿಸಿದರೆ, ಅದನ್ನು ಆರಿಸಿಕೊಳ್ಳಿ. ಈಗ ಎಲ್ಲರಿಗೂ ಮನೆಯಲ್ಲಿ ಹಬ್ಬ ಅಥವಾ ಸಣ್ಣ ಪುಟ್ಟ ಕಾರ್ಯಕ್ರಮಗಳಿದ್ದರೆ, ಅಡುಗೆ ಮಾಡುವುದಕ್ಕೇ ಸೋಂಬೇರಿಗಳಾಗಿ ಬಿಡುತ್ತಾರೆ.

ಮನೆಗೆ 10ಕ್ಕಿಂತ ಹೆಚ್ಚು ಜನ ನೆಂಟರು ಬರುತ್ತಾರೆ ಎಂದರೆ ಊಟವನ್ನು ಹೊರಗಿನಿಂದ ತರಿಸಲು ಮುಂದಾಗುತ್ತಾರೆ. ಹೀಗಾಗಿ ಜನ ಈವೆಮಟ್ ಮ್ಯಾನೇಜ್ ಮೆಂಟ್ ಗೆ ಎಲ್ಲವನ್ನೂ ಒಪ್ಪಿಸುತ್ತಾರೆ. ನೀವು ಈ ಬಿಸಿನೆಸ್ ಶುರು ಮಾಡಿದರೆ, ಹಣ ಗಳಿಸಬಹುದು. ಮದುವೆ, ಎಂಗೇಜ್ ಮೆಂಟ್ ಗಳನ್ನು ಈಗ ಕುಟುಂಬಸ್ಥರು ಪ್ಲನ್ ಮಾಡುವುದೇ ಇಲ್ಲ. ಇದನ್ನು ವೆಡ್ಡಿಂಗ್ ಪ್ಲಾನರ್ ಕೈಗೆ ಕೊಟ್ಟು ನಿರಾತಂಕವಾಗಿರುತ್ತಾರೆ. ವೆಡ್ಡಿಂಗ್ ಪ್ಲಾನರ್ ಬಿಸಿನೆಸ್ ಕೂಡ ಕ್ಲಿಕ್ ಆಗುತ್ತದೆ.

ಮೊದ ಮೊದಲು ಕಷ್ಟವಾಗಬಹುದು ಆದರೆ, ವರ್ಷ ತುಂಬುವುದರೊಳಗೆ ನೀವು ಬೆಸ್ಟ್ ವೆಡ್ಡಿಂಗ್ ಪ್ಲಾನರ್ ಆದರೂ ಆಶ್ಚರ್ಯವೇನಿಲ್ಲ. ಮೊದ ಮೊದಲು ಸಣ್ಣ ಸಣ್ಣ ಆರ್ಡರ್ ಗಳನ್ನು ಪಡೆದರೆ, ನಿಮಗೆ ಸಹಾಯವಾಗುತ್ತದೆ. ಮಹಿಳೆಯರ ಜಿಮ್: ಈಗ ಮನೆಯಲ್ಲಿರುವ ಗೃಹಿಣಿಯರು ಕೂಡ ಜಿಮ್ ಗೆ ಹೋಗಲು ಬಯಸುತ್ತಾರೆ. ಆದರೆ, ಪುರುಷರಿರುವ ಕಡೆ ಹೋಗಲು ಮುಜುಗರ ಪಟ್ಟುಕೊಳ್ಳುತ್ತಾರೆ. ಅಂತಹವರಿಗಾಗಿ ಮಹಿಳೆಯರ ಜಿಮ್ ತೆರೆದರೆ ವರ್ಕೌಟ್ ಆಗುತ್ತದೆ.

ಇನ್ನು ಮಹಿಳೆಯರ ಜಿಮ್ ತೆರೆಯಲು ಸ್ಥಳವೂ ಹೆಚ್ಚು ಬೇಕಾಗುವುದಿಲ್ಲ. ಸಣ್ಣ-ಪುಟ್ಟ ಉಪಕರಣಗಳನ್ನು ಬಳಸಿ ಜಿಮ್ ಶುರು ಮಾಡಿ, ನಂತರ ಬಿಸಿನೆಸ್ ಅನ್ನು ಹೆಚ್ಚಿಸಿಕೊಳ್ಳಬಹುದು. ಕೋಚಿಂಗ್ ಸೆಂಟರ್ ಗಳು ಎಷ್ಟಿದ್ದರೂ ಸಾಲದು. ಮನೆಯಲ್ಲಿ ಪೋಷಕರಿಗೆ ಸಮಯವಿಲ್ಲದ ಕಾರಣ ಮಕ್ಕಳನ್ನು ಕೋಚಿಂಗ್ ಸೆಂಟರ್ ಗಳಿಗೆ ಕಳಿಸುತ್ತಾರೆ. ನೀವೊಂದು ಕೋಚಿಂಗ್ ಸೆಂಟರ್ ತೆರೆದರೆ ನಷ್ಟವೇನಿಲ್ಲ.ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ನೀವು ಕೂಡ ಕಲಿಯುವುದು ಸಾಕಷ್ಟಿರುತ್ತದೆ.

ಇನ್ನು ಕೋಚಿಂಗ್ ಸೆಂಟರ್ ಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು, ಕಡಿಮೆಯಂತೂ ಆಗುವುದಿಲ್ಲ. ಇದು ಸುಲಭದಲ್ಲಿ ಸುಲಭವಾದ ಕೆಲಸ. ಆನ್ ಲೈನ್ ಮಾರ್ಕೆಟಿಂಗ್ ಗಾಗಿ ಪ್ರತ್ಯೇಕವಾದ ಅಂಗಡಿಯನ್ನು ಇಡಬೇಕಾಗಿಲ್ಲ. ಪ್ರಾಡಕ್ಟ್ ಗಳ ಸ್ಟಾಕ್ ಕೂಡ ಇರಬೇಕಿಲ್ಲ. ಇದು ಸದ್ಯಕ್ಕಂತೂ ಲಾಭದಾಯ ಬಿಸಿನೆಸ್ ಕೂಡ ಹೌದು. ಎಲ್ಲರೂ ಆನ್ ಲೈನ್ ಮೇಲೆ ಡಿಪೆಂಡ್ ಆಗಿರುವುದರಿಂದ, ಆನ್ ಲೈನ್ ಮಾರ್ಕೆಟಿಂಗ್ ಕಷ್ಟವೆನಿಸುವುದಿಲ್ಲ.

Exit mobile version