ಬೆಂಗಳೂರು, ಜ. 13 : Makara Sankranthi :ಭಾರತದಲ್ಲಿ ಪ್ರತಿಯೊಂದು ಹಬ್ಬಗಳಿಗೂ ಅದರದ್ದೇ ಆದ ಮಹತ್ವಗಳಿರುತ್ತವೆ. ಭಾರತೀಯ ಕ್ಯಾಲೆಂಡರ್ ಪ್ರಕಾರ ಮಕರ ಸಂಕ್ರಾಂತಿ ವಿಶೇಷವಾದ ಹಬ್ಬ. ಹೆಚ್ಚಾಗಿ ರೈತರು ಸುಗ್ಗಿ ಹಬ್ಬ ಎಂದು ಆಚರಿಸುತ್ತಾರೆ. ಸಂಕ್ರಾಂತಿ, ಸುಗ್ಗಿ, ಮಾಗಿ, ಪೊಂಗಲ್ ಹೀಗೆ ಭಾರತದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಸೂರ್ಯನು ಸಂಕ್ರಾಂತಿಯಂದು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ಮೂಲಕ ಸೂರ್ಯ ಉತ್ತರಾಯಣ ಸಂಚಾರವನ್ನು ಪ್ರಾರಂಭಿಸುತ್ತಾನೆ. ಹಾಗಾಗಿ ಸಂಕ್ರಾಂತಿ ಹಬ್ಬದ ದಿನದಿಂದ ಆಷಾಢ ಮಾಸದವರೆಗೂ ಉತ್ತರಾಯಣವಾಗಿ ಸೂರ್ಯ ಸಂಚರಿಸುತ್ತಾನೆ. ಆದರಿಂದ ಸಂಕ್ರಾಂತಿಯನ್ನು ಉತ್ತರಾಯಣ ಹಬ್ಬ ಎಂದೂ ಕರೆಯುತ್ತಾರೆ.

ಪುರಾಣ ಕಾಲದಿಂದಲೂ ಪ್ರತಿನಿತ್ಯ ಸೂರ್ಯಾರಾಧನೆಯ ಪದ್ಧತಿಯನ್ನು ಭಾರತೀಯರು ಅನುಸರಿಸುತ್ತಾರೆ. ಸೂರ್ಯನ ಕಿರಣಗಳು ಆಧ್ಯಾತ್ಮಿಕ ಪ್ರಗತಿಯನ್ನು ಪ್ರೇರೇಪಿಸಲಿದೆ ಎಂದು ಹೇಳಲಾಗಿದೆ. ಇನ್ನು ಈ ದಿನದಂದು ಹಳೆಯ ಕಹಿ ನೆನಪುಗಳನ್ನು ಮರೆತು ಖುಷಿ ನೆನಪುಗಳೊಂದಿಗೆ ಮುಂದಿನ ಜೀವನವನ್ನು ಒಟ್ಟಾಗಿ ಮುನ್ನೆಡೆಸುವುದು. ಇದಕ್ಕಾಗಿ ಕೃಷಿ ತ್ಯಾಜ್ಯ ಮತ್ತು ಮನೆಯ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ತ್ಯಾಜ್ಯ ವಸ್ತುಗಳನ್ನೆಲ್ಲಾ ಒಂದು ಕಡೆ ಹಾಕಿ ಸುಡಲಾಗುತ್ತದೆ. ಈ ಮೂಲಕ ಕೆಟ್ಟ ದಿನಗಳನ್ನು ಮರೆತು ಬಿಡಬೇಕು ಎಂಬುದಾಗಿದೆ. ಕರ್ಮ ಯೋಗದ ನಿಸ್ವಾರ್ಥ ಗುಣ, ನಿಪಕ್ಷಪಾತ, ಪರಿಪೂರ್ಣತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು.
ಅಷ್ಟೇ ಅಲ್ಲದೇ, ಈ ಆರು ತಿಂಗಳ ಕಾಲ ಹರಿದಾಸರು, ಸಂನ್ಯಾಸಿಗಳು, ಜೋಗಿಗಳು ಎಲ್ಲರೂ ಸಂಚಾರ ಮಾಡಲು ಸುಗಮವಾದ ಕಾಲ ಎಂದು ಹೇಳಲಾಗಿದೆ. ಮಕರ ಸಂಕ್ರಾಂತಿಯಿಂದ ಆಷಾಢ ಮಾಸದವರೆಗೂ ಹಗಲು ಹೆಚ್ಚಿರುತ್ತದೆ. ರಾತ್ರಿ ಕಡಿಮೆ ಇರುತ್ತದೆ. ಇನ್ನು ಮಳೆ ಇರದ ಕಾರಣ ಇವರೆಲ್ಲಾ ಲಫಕ ಸಂಚಾರವನ್ನು ಮಾಡಲು ಸಹಕಾರಿಯಾದ ಕಾಲ ಎಂದೂ ಹೇಳಲಾಗಿದೆ. ಈ ದಿನ ರೈತರು ಬೆಳೆದ ಬೆಳಗಳನ್ನೆಲ್ಲಾ ರಾಶೀ ಮಾಡಿ ಗುಡ್ಡೆ ಹಾಕಿ ಪೂಜೆ ಮಾಡಲಾಗುತ್ತದೆ. ಬಳಿಕ ಹೊಸದಲ್ಲಿ ಕೆಲಸ ಮಾಡಿದವರಿಗೂ ಧಾನ್ಯಗಳನ್ನು ಕೊಟ್ಟು, ತಾವೂ ಬಳಸಲು ಇಟ್ಟುಕೊಳ್ಳುತ್ತಾರೆ. ಇದರ ಅರ್ಥ, ತಮ್ಮ ಬಳಿ ಇರುವುದನ್ನು ಇತರರಿಗೂ ಹಂಚಿ ಬದುಕಿ ಎನ್ನುವುದು.
ಇನ್ನು ಮನೆಗಳಲ್ಲಿ ಅರಶಿಣ, ಕುಂಕುಮ, ಎಳ್ಳು, ಬೆಲ್ಲ, ಕಬ್ಬು, ಬೇಳೆ, ಅವರೆಕಾಳು, ಈರುಳ್ಳಿ, ಬದನೆ ಕಾಯಿ, ಕ್ಯಾರಟ್, ತುಪ್ಪ, ಬೆಣ್ಣೆ ಹೀಗೆ ನೂರಾರು ಪದಾರ್ಥಗಳನ್ನು ಬಳಸಿ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಕಿಚಡಿ, ಪೊಂಗಲ್, ಗೆಣಸು, ಕಬ್ಬನ್ನು ತಿಂದು ಎಳ್ಳು ಬೆಲ್ಲವನ್ನು ನಾಲ್ಕಾರು ಜನಕ್ಕೆ ಹಂಚುತ್ತಾರೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂದು ಹೇಳುತ್ತಾರೆ. ಹಬ್ಬದ ದಿನ ಗಾಳಿಪಟಗಳನ್ನು ಹಾರಿಸಲಾಗುತ್ತದೆ. ಹಸುವಿಗೆ ಹಸಿರು ಮೇವನ್ನು ನೀಡಿ ಸ್ನಾನ ಮಾಡಿಸಿ ಸಿಂಗರಿಸಿ, ಸಂಜೆ ಗೋದೋಳಿ ಸಮಯದಲ್ಲಿ ಕಿಚ್ಚಾಯಿಸಲಾಗುತ್ತದೆ. ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಲಾಗುತ್ತದೆ. ಶ್ರೀ ಹರಿ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಪೂಜೆ ಮಾಡಿ, ಒಬ್ಬರ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ಮಾಡಲಾಗುತ್ತದೆ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ದೇಶದ ಅನೇಕ ನಗರಗಳಲ್ಲಿ ಮೇಳಗಳನ್ನು ಆಯೋಜಿಸಲಾಗುತ್ತದೆ.
ಭಾರತದ ಎಲ್ಲಾ ರಾಜ್ಯಗಳಲ್ಲೂ ಈ ಹಬ್ಬವನ್ನು ಆಚರಿಸಿದರೂ ದಕ್ಷಿಣ ಭಾರತದಲ್ಲಿ ಬಹಳ ಅದ್ಧೂರಿಯಾಗಿ ಹಬ್ಬವನ್ನು ಸಂಬ್ರಮದಿಂದ ಆಚರಿಸಲಾಗುತ್ತದೆ. ಪ್ರತೀ ವರ್ಷವೂ ಈ ಹಬ್ಬವು ಜನವರಿ 14 ರಂದು ಹಬ್ಬ ಬರುತ್ತಾದೆ. ಅಪೂರಪಕ್ಕೆ ಒಮ್ಮೆ ಮಾತ್ರವೇ 15 ರಂದು ಬರುತ್ತದೆ. ಈ ವರ್ಷವೂ 2023 ರ ಜನವರಿ 15 ರಂದು ಸೂರ್ಯ ಧನು ರಾಶಿಯಿಂದ ಹೊರ ಬಂದು ಮಕರ ರಾಶಿಗೆ ಬರುತ್ತದೆ. ಈ ವರ್ಷ ಮಕರ ಸಂಕ್ರಾಂತಿ ಹಬ್ಬದ ಪುಣ್ಯ ಕಾಲ ಮುಹೂರ್ತ: 07:15:13 ರಿಂದ 12:30:00 ರವರೆಗೆ ಇರಲಿದೆ. ಮಹಾಪುಣ್ಯ ಕಾಲ ಮುಹೂರ್ತ: 07:15:13 ರಿಂದ 09:15:13 ರವರೆಗೆ ಇರಲಿದೆ.


