Revenue Facts

ಸೆಪ್ಟೆಂಬರ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ

#List #bank #holidays #September

ನವದೆಹಲಿ;ಭಾರತೀಯ ರಿಸರ್ವ್ ಬ್ಯಾಂಕ್‌ನ ಕ್ಯಾಲೆಂಡರ್‌ ಪ್ರಕಾರ ಸೆಪ್ಟೆಂಬರ್‌(September) ತಿಂಗಳಲ್ಲಿ ಒಟ್ಟು 16 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ(Holiday) ಇದೆ. ಆರ್‌ಬಿಐ(RBI) ಪ್ರಕಟಿಸಿರುವ ರಜಾ ದಿನಗಳ ಪಟ್ಟಿಯ ಪ್ರಕಾರ, ದೇಶದ ವಿವಿಧ ರಾಜ್ಯಗಳಲ್ಲಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ಸೇರಿದಂತೆ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಲಿವೆ. ಇದು ಬ್ಯಾಂಕಿಂಗ್‌ ಕೆಲಸಗಳ ಮೇಲೆ ಪರಿಣಾಮ ಬೀರಲಿದೆ.ಸುಮಾರು ಅರ್ಧ ತಿಂಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ.ಇದರಿಂದ ಗ್ರಾಹಕರಿಗೆ ತಮ್ಮ ಬ್ಯಾಂಕ್​ ಕಾರ್ಯ ನಿರ್ವಹಣೆಗೆ ಕೊಂಚ ಅಡಚಣೆ ಉಂಟಾಗಲಿದೆ.ಈ ರಜೆಗಳು ಆಯಾ ರಾಜ್ಯಗಳಲ್ಲಿ ವಿಭಿನ್ನವಾಗಿದ್ದು, ಸಾಂಧರ್ಬಿಕ ರಜೆಗಳನ್ನು ಒಳಗೊಂಡಿರುವುದರಿಂದ ರಜೆಗಳು ಹೆಚ್ಚುಕಡಿಮೆ ಇರುತ್ತದೆ.ಹಬ್ಬಗಳು ಮತ್ತು ವಾರಾಂತ್ಯಗಳ ರಜೆ, ಸಾರ್ವಜನಿಕ, ಖಾಸಗಿ ಮತ್ತು ಸಹಕಾರಿ ಕ್ಷೇತ್ರಗಳಾದ್ಯಂತ ಬ್ಯಾಂಕ್‌ಗಳಲ್ಲಿ ಒಟ್ಟು 16 ರಜಾದಿನಗಳನ್ನು ನಿರೀಕ್ಷಿಸಲಾಗಿದೆ. ಮುಂಬರುವ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಇಲ್ಲಿದೆ.

ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ ರಜಾದಿನಗಳ ಪಟ್ಟಿ:
3 ಸೆಪ್ಟೆಂಬರ್ 2023: ಭಾನುವಾರ. ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

6 ಸೆಪ್ಟೆಂಬರ್ 2023: ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರಣ ಭುವನೇಶ್ವರ್, ಚೆನ್ನೈ, ಹೈದರಾಬಾದ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್‌ ರಜೆ ಇರುತ್ತದೆ.

7 ಸೆಪ್ಟೆಂಬರ್ 2023: ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರಣ ಅಹಮದಾಬಾದ್, ಚಂಡೀಗಢ, ಡೆಹ್ರಾಡೂನ್,

ಗ್ಯಾಂಗ್‌ಟಕ್, ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ರಾಯ್‌ಪುರ, ರಾಂಚಿ, ಶಿಲ್ಲಾಂಗ್, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

9 ಸೆಪ್ಟೆಂಬರ್ 2023: ಎರಡನೇ ಶನಿವಾರದಂದು, ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

10 ಸೆಪ್ಟೆಂಬರ್ 2023: ಭಾನುವಾರವೂ ದೇಶದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

17 ಸೆಪ್ಟೆಂಬರ್ 2023: ಭಾನುವಾರ. ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

18 ಸೆಪ್ಟೆಂಬರ್ 2023: ವಿನಾಯಕ ಚತುರ್ಥಿಯ ಸಂದರ್ಭದಲ್ಲಿ ಬೆಂಗಳೂರು ಮತ್ತು ತೆಲಂಗಾಣದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

19 ಸೆಪ್ಟೆಂಬರ್ 2023: ಗಣೇಶ ಚತುರ್ಥಿಯ ಕಾರಣ ಅಹಮದಾಬಾದ್, ಬೇಲಾಪುರ್, ಭುವನೇಶ್ವರ್, ಮುಂಬೈ, ನಾಗ್ಪುರ ಮತ್ತು ಪಣಜಿಯಲ್ಲಿ ಬ್ಯಾಂಕ್‌ ರಜೆ ಇದೆ.

20 ಸೆಪ್ಟೆಂಬರ್ 2023: ಗಣೇಶ ಚತುರ್ಥಿ ಮತ್ತು ನುವಾಖಾಯ್ ಕಾರಣ ಕೊಚ್ಚಿ ಮತ್ತು ಭುವನೇಶ್ವರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

22 ಸೆಪ್ಟೆಂಬರ್ 2023: ಶ್ರೀ ನಾರಾಯಣ ಗುರು ಸಮಾಧಿ ದಿನದ ಕಾರಣ ಕೊಚ್ಚಿ, ಪಣಜಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

23 ಸೆಪ್ಟೆಂಬರ್ 2023: ನಾಲ್ಕನೇ ಶನಿವಾರದಂದು ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

24 ಸೆಪ್ಟೆಂಬರ್ 2023: ಭಾನುವಾರ. ಇಡೀ ದೇಶದಲ್ಲಿ ರಜೆ ಇರುತ್ತದೆ.

25 ಸೆಪ್ಟೆಂಬರ್ 2023: ಶ್ರೀಮಂತ್ ಶಂಕರದೇವ್ ಅವರ ಜನ್ಮದಿನದಂದು ಗುವಾಹಟಿಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

27 ಸೆಪ್ಟೆಂಬರ್ 2023: ಮಿಲಾದ್-ಎ-ಶರೀಫ್ ಕಾರಣ ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ ರಜೆ ಇದೆ.

28 ಸೆಪ್ಟೆಂಬರ್ 2023: ಈದ್-ಎ-ಮಿಲಾದ್ ಕಾರಣ ಅಹಮದಾಬಾದ್, ಬೆಂಗಳೂರು, ಚೆನ್ನೈ, ಕಾನ್ಪುರ, ಲಕ್ನೋ, ಮುಂಬೈ ಮತ್ತು ನವದೆಹಲಿಯಲ್ಲಿ ಬ್ಯಾಂಕ್‌ ರಜೆ ಇದೆ.

29 ಸೆಪ್ಟೆಂಬರ್ 2023: ಈದ್-ಎ-ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಗ್ಯಾಂಗ್‌ಟಾಕ್, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ ರಜೆ ಇದೆ.

Exit mobile version