Bank Holidays July 2023:ಜುಲೈ ತಿಂಗಳ ಬ್ಯಾಂಕ್ ರಜೆಯ ಬಗ್ಗೆ ಈಗಾಗಲೇ ಮಾಹಿತಿ ಹೊರ ಬಿದ್ದಿದೆ.ಗ್ರಾಹಕರು ಜುಲೈ ತಿಂಗಳ ಬ್ಯಾಂಕ್ ರಜೆಗಳ ವಿವರಗಳನ್ನುತಿಳಿದುಕೊಳ್ಳುವುದು ಉತ್ತಮವಾಗಿದೆ,ಭಾರತೀಯ ರಿಸರ್ವ್ ಬ್ಯಾಂಕ್(RBI) ಜುಲೈ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ.ಆರ್ ಬಿಐ ಪ್ರತಿ ಹೊಸ ತಿಂಗಳು ಆರಂಭವಾಗುವ ಮುನ್ನಆ ತಿಂಗಳಿಗೆ ಸಂಬಂಧಿಸಿ ರಜಾಪಟ್ಟಿ ಬಿಡುಗಡೆ ಮಾಡುತ್ತದೆ ಅದರಂತೆ ಜುಲೈ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಯ ಅಧಿಕೃತ ಬ್ಯಾಂಕ್ ಹಾಲಿಡೇ ಕ್ಯಾಲೆಂಡರ್ ಪ್ರಕಾರ ಭಾನುವಾರ ಮತ್ತು ಶನಿವಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಬ್ಯಾಂಕುಗಳು ಒಟ್ಟು 15 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಆರ್ಬಿಐ ಪ್ರಕಟಿಸಿದ ರಜಾ ದಿನಗಳ ಪಟ್ಟಿಯು ಸರ್ಕಾರಿ ಮತ್ತು ಖಾಸಗಿ ಎರಡೂ ವಲಯದ ಬ್ಯಾಂಕುಗಳಿಗೂ ಅನ್ವಯ ಆಗುತ್ತದೆ,
2023ರ ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ
ಜುಲೈ 2 (ಭಾನುವಾರ)
ಜುಲೈ 5 (ಬುಧವಾರ): ಗುರು ಹರಗೋಬಿಂದ್ಜಿ ಜನ್ಮದಿನ (ಜಮ್ಮು ಮತ್ತು ಶ್ರೀನಗರದಲ್ಲಿ ರಜೆ)
ಜುಲೈ 6 (ಗುರುವಾರ): ಎಂಎಚ್ಐಪಿ ದಿನ (ಮಿಝೋರಾಮ್ನಲ್ಲಿ ರಜೆ)
ಜುಲೈ 8 (ಶನಿವಾರ): ಎರಡನೇ ಶನಿವಾರ
ಜುಲೈ 9 (ಭಾನುವಾರ)
ಜುಲೈ 13 (ಗುರುವಾರ): ಭಾನು ಜಯಂತಿ (ಸಿಕ್ಕಿಂನಲ್ಲಿ ರಜೆ)
ಜುಲೈ 15: ನಾಲ್ಕನೇ ಶನಿವಾರ
ಜುಲೈ 16: ಭಾನುವಾರ
ಜುಲೈ 17: ಯು ತಿರೋತ್ ಸಿಂಗ್ ದಿನ
ಜುಲೈ 21: ದ್ರುಪಕಾ ಶೆ ಝಿ (ಸಿಕ್ಕಿಂನಲ್ಲಿ ರಜೆ)
ಜುಲೈ 23: ಭಾನುವಾರ
ಜುಲೈ 28: ಅಶೂರಾ (ಜಮ್ಮು ಮತ್ತು ಶ್ರೀನಗರದಲ್ಲಿ ರಜೆ)
ಜುಲೈ 29: ಮೊಹರಂ
ಜುಲೈ 29: ಶನಿವಾರ
ಜುಲೈ 30: ಭಾನುವಾರ