Revenue Facts

ಬ್ಯಾಂಕ್ ಖಾತೆಗೆ ನಿಮ್ಮ Aadhaar Card ಲಿಂಕ್ ಮಾಡಲಾಗಿದೆ?ಈ ಕ್ರಮ ಅನುಸರಿಸಿ

ಬೆಂಗಳೂರು;ಆಧಾರ್ ಎಲ್ಲ ಕೆಲಸಗಳಿಗೂ ಅವಶ್ಯವಾಗಿದ್ದು, ಬ್ಯಾಂಕ್ ಖಾತೆ, ಡ್ರೈವಿಂಗ್ ಲೈಸನ್ಸ್‌, ಪ್ಯಾನ್ ಕಾರ್ಡ್‌ ಹೀಗೆ ಪ್ರತಿಯೊಂದು ದಾಖಲೆಗಳಿಗೂ ಆಧಾರ್ ನಂಬರ್ ಲಿಂಕ್ ಮಾಡುವುದು ಅಗತ್ಯವಾಗಿದೆ.ಸರ್ಕಾರದ ಯೋಜನೆಗಳ (Government Schemes) ಲಾಭ ಪಡೆಯಲು ಮತ್ತು ಬ್ಯಾಂಕ್ ಖಾತೆ (Bank Account Open) ತೆರೆಯಲು, ಪಾಸ್ ಪೋರ್ಟ್ ಮಾಡಿಸಿಕೊಳ್ಳಲು ಆಧಾರ್ ಕಾರ್ಡ್ ಅಗತ್ಯವಿದೆ. ಆದಾಯ ತೆರಿಗೆ(Incometax) ಸಂಬಂಧಿತ ಕೆಲಸಗಳಿಗೂ ಆಧಾರ್ ಕಾರ್ಡ್ ಅಗತ್ಯ. ಮೊಬೈಲ್ ವ್ಯಾಲೆಟ್(Mobilewallet) ಬಳಕೆಯಲ್ಲಿ ಆಧಾರ್ ಕಾರ್ಡ್(Aadharcard) ಕೂಡ ಪ್ರಮುಖ ಪಾತ್ರ ವಹಿಸುತ್ತದೆ,ನೀವು ಬ್ಯಾಂಕಿನಲ್ಲಿ ಖಾತೆಯನ್ನು ತೆರೆದಾಗ, ಇದರ ನಂತರ ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಆದರೆ ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ ಲಿಂಕ್(Link) ಆಗಿದೆ ಮತ್ತು ಯಾವ ಖಾತೆ ಇಲ್ಲ ಎಂದು ನಿಮಗೆ ತಿಳಿದಿಲ್ಲದಿದ್ದರೆ, ನೀವು ಅದನ್ನು ಸುಲಭವಾಗಿ ಪರಿಶೀಲಿಸಬಹುದು.ಬಳಕೆದಾರರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೇ, ಎಲ್ಲಾ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದಾಗಿದೆ. ಹಾಗೆಯೇ ಆಧಾರ್‌ನೊಂದಿಗೆ ಎಷ್ಟು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲಾಗಿದೆ ಎಂದು ತಿಳಿಯಬಹುದು. ಈ ಮೂಲಕ ನಕಲಿ ಬ್ಯಾಂಕ್ ಖಾತೆಯ ಬಗ್ಗೆಯೂ ಎಚ್ಚರಿಕೆಯಿಂದ ಇರಬಹುದು.

ನಿಮ್ಮ ಖಾತೆಯ ಸಂಖ್ಯೆ ಆಧಾರ್ ನೊಂದಿಗೆ ಲಿಂಕ್ ಆಗಿದೆಯೇ ಎನ್ನುವುದನ್ನು ಹೇಗೆ ತಿಳಿಯುವುದು.

ಮೊದಲಿಗೆ UIDAI ನ ಅಧಿಕೃತ ವೆಬ್‌ಸೈಟ್ www.uidai.gov.in ಗೆ ಹೋಗಿ.

ನಂತರ ಇಲ್ಲಿ ನಿಮ್ಮ ಆಯ್ಕೆಯ ಭಾಷೆಯ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ಎಂಬ ಲಿಂಕ್ ಅನ್ನು ಇಲ್ಲಿ ಕ್ಲಿಕ್ ಮಾಡಿ.

ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಬೇಕು.

ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

UIDAI ವೆಬ್‌ಸೈಟ್‌ನಲ್ಲಿ ಈ OTP ಅನ್ನು ನಮೂದಿಸಿ.

ಇಲ್ಲಿ ನೀವು ನಿಮ್ಮ ಮುಂದೆ ಲಾಗಿನ್ ಆಯ್ಕೆಯನ್ನು ಪಡೆಯುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.

ಲಾಗಿನ್ ಆದ ನಂತರ, ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಎಲ್ಲಾ ಬ್ಯಾಂಕ್ ಖಾತೆಗಳ ವಿವರಗಳು ಬಹಿರಂಗಗೊಳ್ಳುತ್ತವೆ.

ನಿಮ್ಮ ಆಧಾರ್ ಕಾರ್ಡ್ ಅನ್ನು ಯಾವ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ಈಗ ನಿಮಗೆ ತಿಳಿಯುತ್ತದೆ.ಒಂದು ವೇಳೆ ನಿಮ್ಮ ಆಧಾರ್ನೊಂದಿಗೆ ಯಾವುದೇ ಬ್ಯಾಂಕ್ ಖಾತೆಗಳು ಲಿಂಕ್ ಆಗದಿದ್ದಲ್ಲಿ ಕೂಡಲೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಖಾತೆಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಸಿ.

Exit mobile version